ಮಧೂರು ದೇವಳ ಬ್ರಹ್ಮಕಲಶೋತ್ಸವ : ಉದಯಗಿರಿ ಉಪಸಮಿತಿ ರಚನೆ

Published on

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮಾ.27ರಿಂದ ಏ.7ರವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ ಅಂಗವಾಗಿ ಉದಯಗಿರಿ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಉಪ ಸಮಿತಿ ರಚಿಸಲಾಯಿತು.

ಪಂಚಾಯಿತಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಶೆಟ್ಟಿ ಸಿರಿಬಾಗಿಲು ಅವರು, ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಗಳನ್ನು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಿಂದು ಮನೆಗಳಿಗೆ ತಲುಪಿಸಿ ಮುಂದೆ ನಡೆಯುವ ಬ್ರಹ್ಮಕಲಶೋತ್ಸವದ ಸಮಯದಲ್ಲಿ ಸ್ವಯಂಸೇವಕರಾಗಿ ಭಾಗವಹಿಸುವಂತೆ ಮನವಿ ಮಾಡಿದರು. ಕೇಂದ್ರ ಸಮಿತಿ ಕಾರ್ಯದರ್ಶಿ ರವೀಂದ್ರ ರೈ ಸಿರಿಬಾಗಿಲು ಉಪಸ್ಥಿತರಿದ್ದರು. ಉದಯಗಿರಿ ಶ್ರೀ ವಿಷ್ಣುಮೂರ್ತಿ ಉಪ ಸಮಿತಿ ಗೌರವಾಧ್ಯಕ್ಷರಾಗಿ ರಾಮಸ್ವಾಮಿ, ಅಧ್ಯಕ್ಷರಾಗಿ ಪ್ರಭಾಕರ ಪಂಚಮಿ, ಪ್ರಧಾನ ಸಂಚಾಲಕರಾಗಿ ಸುನೀಲ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಪ್ರಭಾಕರ ಪಂಚಮಿ ನಿರೂಪಿಸಿ ಸುನೀಲ್ ಕುಮಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net