'ಮದಗಜ' ಅಲ್ಲ, ಶ್ರೀಮುರಳಿ ಇದೀಗ 'ಮದಯಾನೈ'

Madayaanai - Final
Published on

ಬೆಂಗಳೂರು: ಶ್ರೀಮುರಳಿ ಅಭಿನಯದ 'ಮದಗಜ' ಚಿತ್ರವು ತೆಲುಗಿಗೆ ಡಬ್​ ಆಗಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದ್ದು ಗೊತ್ತೇ ಇದೆ. ಇದೀಗ ಚಿತ್ರವು ತಮಿಳಿನಲ್ಲೂ ಡಬ್​ ಆಗುತ್ತಿದ್ದು, ಸೋಮವಾರ ತಮಿಳು ಅವತರಣಿಕೆಯ ಫಸ್ಟ್​ಲುಕ್​ ಟೀಸರ್​ ಇಂದು ಬಿಡುಗಡೆಯಾಗಿದೆ.

'ಮದಗಜ' ಚಿತ್ರದ ಟೀಸರ್​, ಶ್ರೀಮುರಳಿ ಹುಟ್ಟುಹಬ್ಬದ ಅಂಗವಾಗಿ ಡಿಸೆಂಬರ್​ 17ರಂದು ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿತ್ತು. ಅಷ್ಟೇ ಅಲ್ಲ, ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಚಿತ್ರಕ್ಕೆ ಸಿಕ್ಕ ಪ್ರೋತ್ಸಾಹದಿಂದಾಗಿ ಚಿತ್ರವು ಇದೀಗ ತೆಲುಗು ಮತ್ತು ತಮಿಳಿಗೂ ಡಬ್​ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಚಿತ್ರ ಹಿಂದಿಯಲ್ಲೂ ಬಿಡುಗಡೆಯಾದರೆ ಅದರಲ್ಲಿ ಆಶ್ಚರ್ಯವಿಲ್ಲ.

ವಿಶೇಷವೆಂದರೆ, ತಮಿಳಿನ ಅವತರಣಿಕೆಗೆ 'ಮದಗಜ' ಎಂದು ನಾಮಕರಣ ಮಾಡಲಾಗಿದೆ. ಈ ಹಿಂದೆ, ಕನ್ನಡ ಮತ್ತು ತೆಲುಗು ಟೀಸರ್​ಗಳಿಗೆ ಶ್ರೀಮುರಳಿ ಧ್ವನಿ ಕೊಟ್ಟಿದ್ದರು. ತಮಿಳಿನ ಟೀಸರ್​ಗೂ ಅವರದ್ದೇ ಧ್ವನಿ ಇದೆ. ಸೋಮವಾರ ಈ ಟೀಸರ್​ ಬಿಡುಗಡೆಯಾಗಿದ್ದು, ಎರಡೂವರೆ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಸಿಕ್ಕಿದೆ.

'ಮದಗಜ' ಚಿತ್ರಕ್ಕೆ ಮಹೇಶ್​ ಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಉಮಾಪತಿ ಶ್ರೀನಿವಾಸ್​ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್​ ಇದ್ದು, ಮಿಕ್ಕಂತೆ ಚಿಕ್ಕಣ್ಣ, ದೇವಯಾನಿ, ಜಗಪತಿ ಬಾಬು ಮುಂತಾದವರು ನಟಿಸುತ್ತಿದ್ದಾರೆ. ರವಿ ಬಸ್ರೂರು ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net