More

    ಚಿತ್ರಮಂದಿರಗಳಲ್ಲಿ ಹೀರೋಯಿಸಂ: ಒಂದೇ ಜಾಗ 43 ದಿನ.. 24 ಮಂದಿ…

    ಬೆಂಗಳೂರು: ‘ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಬೇಕು ಅಂತ ನಿರ್ಧಾರ ಮಾಡಿದ್ದೀವಿ …’- ಹಾಗಂತ ನಿರ್ಧಾರ ಮಾಡಿಬಿಟ್ಟಿದ್ದಾರೆ ರಿಷಬ್. ಕೆಲವು ತಿಂಗಳುಗಳ ಹಿಂದೆ ಅವರು ‘ಹೀರೋ’ ಚಿತ್ರ ಶುರು ಮಾಡಿದಾಗ, ಅದನ್ನು ಎಲ್ಲಿ ಬೇಕಾದರೂ (ಓಟಿಟಿ) ಬಿಡುಗಡೆ ಮಾಡುವ ಯೋಚನೆಯಲ್ಲಿದ್ದರಂತೆ. ಆದರೆ, ಚಿತ್ರಕ್ಕೆ ಒಂದು ಶೇಪ್ ಸಿಕ್ಕ ನಂತರ, ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್​ಗೆ ಜನರಿಂದ ಸಿಕ್ಕ ಪ್ರತಿಕ್ರಿಯೆ ನೋಡಿದ ನಂತರ, ಚಿತ್ರವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವ ತೀರ್ವನಕ್ಕೆ ಅವರು ಬಂದಿದ್ದಾರೆ. ಚಿತ್ರ ಖಂಡಿತ ಗೆಲ್ಲಲಿದೆ ಎಂಬ ವಿಶ್ವಾಸಕ್ಕೆ ರಿಷಬ್ ಬಂದಿದ್ದಾರೆ.

    ರಿಷಬ್ ಇದುವರೆಗೂ ಅಭಿನಯಿಸಿರುವ ಚಿತ್ರಗಳಲ್ಲೇ, ‘ಹೀರೋ’ ಒಂದು ವಿಭಿನ್ನವಾದ ಪ್ರಯತ್ನವಂತೆ. ‘ಒಬ್ಬ ನಟ ಪ್ರಯೋಗಗಳನ್ನು ಮಾಡುತ್ತಿರಬೇಕು ಎಂದು ನಂಬಿದವನು ನಾನು. ಇದು ಸಹ ಒಂದು ಬೇರೆ ಪ್ರಯೋಗ. ಹೀರೋಯಿಸಂ ಇಲ್ಲದಿರುವ ಹೀರೋ ಆಗಿ ನಟಿಸಿದ್ದೇನೆ. ಇದೊಂದು ಕಾಮಿಡಿ ಥ್ರಿಲ್ಲರ್ ಚಿತ್ರ. ನಾವು ಅತ್ಯಂತ ವೇಗವಾಗಿ ಬರೆದಿರುವ ಚಿತ್ರಕಥೆ ಇದು. ಲಾಕ್​ಡೌನ್​ನಲ್ಲಿ ಸುಮ್ಮನೆ ಕೂತು ಸಾಕಾಗಿತ್ತು. ಸಮಯ ವ್ಯರ್ಥವಾಗುತ್ತಿದೆ ಎಂದೆನಿಸಿತ್ತು. ಆ ಸಂದರ್ಭದಲ್ಲಿ ಭರತ್ ಒಂದೊಳ್ಳೆಯ ಕಥೆ ತಂದರು. ತುಂಬ ಚೆನ್ನಾಗಿದೆ ಎಂದನಿಸಿ ತಕ್ಷಣವೇ ಕೆಲಸ ಶುರು ಮಾಡಿದೆವು. ಲಾಕ್​ಡೌನ್ ಮುಗಿಯುತ್ತಿದ್ದಂತೆಯೇ ಶುರುವಾದ ಮೊದಲ ಚಿತ್ರ ನಮ್ಮದೇ. ಜುಲೈ 7ರ ನನ್ನ ಹುಟ್ಟುಹಬ್ಬದಂದು ಚಿತ್ರ ಪ್ರಾರಂಭವಾಯಿತು. ಅಲ್ಲಿಂದ 43 ದಿನಗಳ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಯಿತು. ಚಿಕ್ಕಮಗಳೂರಿನ ಒಂದು ದೊಡ್ಡ ಎಸ್ಟೇಟ್​ನಲ್ಲಿ ಇಡೀ ಚಿತ್ರದ ಚಿತ್ರೀಕರಣ ಮುಗಿದಿದೆ. ಇಡೀ ತಂಡದಲ್ಲಿದ್ದಿದ್ದು 24 ಜನ ಮಾತ್ರ. ಆದರೆ, 100 ಜನರ ಕೆಲಸ ಮಾಡಿದ್ದೇವೆ’ ಎಂದು ನೆನೆಯುತ್ತಾರೆ ರಿಷಬ್. ಈ ಚಿತ್ರದಲ್ಲಿ ಅವರಿಗೆ ಗಾನವಿ ಲಕ್ಷ್ಮಣ್ ನಾಯಕಿ. ಈ ಹಿಂದೆ, ರಿಷಬ್ ಅಭಿನಯದ ‘ನಾಥೂರಾಮ್ ಚಿತ್ರದಲ್ಲಿ ಗಾನವಿ ಅಭಿನಯಿಸಬೇಕಿತ್ತು. ಅದು ಸ್ವಲ್ಪ ಮುಂದಕ್ಕೆ ಹೋಗಿರುವುದರಿಂದ, ‘ಹೀರೋ’ ಮೂಲಕ ಹೀರೋಯಿನ್ ಆಗಿದ್ದಾರೆ ಗಾನವಿ.

    ಮಿಕ್ಕಂತೆ ಪ್ರಮೋದ್ ಶೆಟ್ಟಿ, ಮಂಜುನಾಥ್ ಗೌಡ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದರೆ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಿದ್ದಾರೆ. ಫೆಬ್ರವರಿ ಕೊನೆಗೆ ಅಥವಾ ಮಾರ್ಚ್ ನಲ್ಲಿ ಚಿತ್ರಮಂದಿರ ಗಳಲ್ಲೇ ಬಿಡುಗಡೆ ಯಾಗಲಿದೆ ‘ಹೀರೋ’.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts