ಲವ್ವಿ-ಡವ್ವಿ ಮಾಡುತ್ತಿದ್ದ ಕಳ್ಳ-ಕಳ್ಳಿ ದಂಪತಿ ಈಗ ಅಂದರ್..!

kalla kalli
Published on

ಬೆಂಗಳೂರು: ಬೆಂಗಳೂರಿನ ಜ್ಞಾನಭಾರತಿ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಕಳ್ಳ-ಕಳ್ಳಿ ದಂಪತಿ ಸಿಕ್ಕಿಬಿದ್ದಿದ್ದಾರೆ!

ನಾಗರಾಜ ಮತ್ತು ರಮ್ಯಾ ಹೆಸರಿನ ದಂಪತಿ, ಒಂಟಿ‌ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ರು. ಇರು ಪ್ರೀತಿಸಿ ಮದುವೆಯಾಗಿದ್ದು ಮದುವೆ ನಂತರ ಒಟ್ಟಿಗೆ ಸೇರಿ ದೊಡ್ಡ ದೊಡ್ಡ ಕಳ್ಳತನ ಮಾಡಿ ಕುಖ್ಯಾತರಾಗಿಬಿಟ್ಟಿದ್ರು.

ಈ ಗಂಡ-ಹೆಂಡ್ತಿ ಜೋಡಿ ಕಳ್ಳರು ಮದುವೆಗೂ ಮುನ್ನ ಪರಿಚಯ ಆಗಿದ್ದು ಕೂಡ ಒಬ್ಬ ಕಳ್ಳನಿಂದಲೇ ಎನ್ನುವುದು ಕುತೂಹಲಕಾರಿ ಸಂಗತಿ. ಬೈಕ್ ಕಳ್ಳನೊಬ್ಬನ ಮೂಲಕ ನಾಗರಾಜ್ ಹಾಗೂ ರಮ್ಯಾಗೆ ಪರಿಚಯ ಆಗಿತ್ತು.

ನಂತರ ಇವರ ಪರಿಚಯ ಪ್ರೀತಿಗೆ ತಿರುಗಿ, ಮದುವೆಯೂ ಆದರು. ಹೀಗೆ ಒಟ್ಟಿಗೆ ಕಳ್ಳತನ ಮಾಡ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಅರೆಸ್ಟ್​​ ಆಗಿದ್ದಾರೆ. ಆರೋಪಿಗಳಿಂದ 5 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಾ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net