

ಬೆಂಗಳೂರು: ಆಧುನಿಕ ಜೀವನ ಈಗ ಸ್ಪರ್ಧಾತ್ಮಕ ಆಗಿದೆ. ದಿನದ ಒಂದು ಗಂಟೆ ಯಾವುದಾದರು ಕೆಲಸಕ್ಕೆ ಮೀಸಲು ಇಡಲು ಆಗುತ್ತಿಲ್ಲ ಎಂದಾದರೆ ಜನರು ಸಮಯ ಇಲ್ಲ ಎಂದೇ ಊಹಿಸುವುದು. ಆದರೆ ದಿನಕ್ಕೆ ಕೇವಲ 15 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ?
ಹದಿನೈದು ನಿಮಿಷಗಳು ನಿಮಗೆ ಹೆಚ್ಚು ಸಮಯದಂತೆ ತೋರುವುದಿಲ್ಲ. ಆದರೆ ಫಿಟ್‌ನೆಸ್ ತಜ್ಞರು ಮತ್ತು ವೈಜ್ಞಾನಿಕ ಅಧ್ಯಯನಗಳು ಕೇವಲ 15 ನಿಮಿಷಗಳ ವ್ಯಾಯಾಮ ಆರೋಗ್ಯದಲ್ಲಿ ವ್ಯತ್ಯಾಸವನ್ನು ಉಂಟು ಮಾಡಲು ಸಾಕು ಎಂದು ಒಪ್ಪುತ್ತವೆ. ನೀವು ವ್ಯಾಯಮ ಮಾಡಲು ಹೊಸಬರಾಗಿದ್ದರೆ ಅಥವಾ ದೀರ್ಘಕಾಲದವರೆಗೆ ಸಕ್ರಿಯವಾಗಿಲ್ಲದಿದ್ದರೆ, 15 ನಿಮಿಷಗಳ ವ್ಯಾಯಾಮವನ್ನು ಹೇಗಾದರೂ ಪ್ರಾರಂಭಿಸಬಹುದು.
ಅಮೆರಿಕನ್ ಕಾಲೇಜ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ ದಿನಕ್ಕೆ ಕೇವಲ 10-15 ನಿಮಿಷಗಳ ಚಟುವಟಿಕೆ ಮಾಡಿದರೂ ಫಿಟ್‌ನೆಸ್‌ಗೆ ಸಹಾಯಕಾರಿ ಎಂದು ಹೇಳುತ್ತದೆ. ಈ ಚಿಕ್ಕ ವ್ಯಾಯಾಮ ಅವಧಿ ನಿಮ್ಮ ದೇಹಕ್ಕೆ ಹೆಚ್ಚು ಪ್ರಯೋಜನಕಾರಿಯಾಗಬಲ್ಲದು. ಜೊತೆಗೆ, ಚಿಕ್ಕದಾಗಿ ಪ್ರಾರಂಭಿಸುವುದರಿಂದ ನಿಮ್ಮ ದಿನನಿತ್ಯದ ತಾಲೀಮು ದಿನಚರಿಯನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ.
ಇದು ಕೆಲಸ ಮಾಡುತ್ತಾ ಎನ್ನುವ ಸಂದೇಹ ಇದ್ದಲ್ಲಿ, ನಡಿಗೆಯೊಂದಿಗೆ ಪ್ರಾರಂಭಿಸಿ. ನೀವು ಹಿಂದೆಂದೂ ವ್ಯಾಯಾಮ ಮಾಡದಿದ್ದರೂ ಸಹ ನಿಮ್ಮ ದಿನಚರಿಯಲ್ಲಿ 15 ನಿಮಿಷಗಳ ನಡಿಗೆಯನ್ನು ಸೇರಿಸಬಹುದು.ನಡಿಯೋದು ಎಂದರೆ ಯಾರಿಗಾದರು ಕಷ್ಟಾ ನಾ?
ಎಲ್ಲಿ ಸಾಧ್ಯವೋ ಅಲ್ಲೆಲ್ಲಾ ನೀವು ನಡೆಯಬಹುದು. ಉದ್ಯಾನವನ, ನಿಮ್ಮ ನೆರೆಹೊರೆ, ಟ್ರೆಡ್‌ಮಿಲ್‌ನಲ್ಲಿ ಅಥವಾ ನಿಮ್ಮ ಅಪಾರ್ಟ್ಮೆಂಟ್ ಸುತ್ತಲೂ ನಡೆಯುತ್ತಿರಬಹುದು. ಹೆಚ್ಚು ನಡೆಯುವಾಗ ನೀವು ವೇಗವಾಗಿ ನಡೆಯಲು ಪ್ರಾರಂಭಿಸುತ್ತೀರಿ ಎಂದಾದರೆ ಇದು ಶುಭ ಸುದ್ದಿ. ಏಕೆಂದರೆ ಇದರಿಂದ ನಿಮ್ಮ ರಕ್ತವನ್ನು ನೀವು ಹೆಚ್ಚು ಪಂಪ್ ಮಾಡುತ್ತೀರಿ. ನಿಮ್ಮ ದೇಹಕ್ಕೆ ಆರಾಮ ಆಗುವ ವೇಗದಲ್ಲಿ ಹೋಗಿ. ದಿನಕ್ಕೆ 15 ನಿಮಿಷಗಳ ಕಾಲ ನಡೆಯುವುದು ನಿಮ್ಮ ಒಟ್ಟಾರೆ ಆರೋಗ್ಯದಲ್ಲಿ ನಿಜವಾಗಿಯೂ ವ್ಯತ್ಯಾಸವನ್ನುಂಟುಮಾಡುತ್ತದೆ. (ಏಜೆನ್ಸೀಸ್)