Love Motel: ಪ್ರೀತಿ, ಪ್ರೇಮಕ್ಕೆ ಸಾಕ್ಷಿಯಾಗಿದ್ದ ಜಪಾನ್‌ನ ಈ ಕಟ್ಟಡ ಇದೀಗ ಮೃತರ ಶವಗಳನ್ನು ಇರಿಸುವ ಜಾಗವಾಗಿ ಮಾರ್ಪಟ್ಟಿದೆ. ಸದ್ಯ ಈ ಸಂಗತಿ ಜಪಾನ್ ಮಾತ್ರವಲ್ಲದೇ ಇತರೆ ದೇಶದ ಜನರಲ್ಲಿ ಭಾರೀ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಮೊಬೈಲ್ನಲ್ಲಿ ಬಿಜಿಯಾಗಿ ಕುರ್ಚಿ ಕೆಳಗೆ ಹಾವಿರುವುದನ್ನು ಗಮನಿಸದ ವಿದ್ಯಾರ್ಥಿನಿ: ನಡದೇ ಹೋಯ್ತು ಘೋರ ದುರಂತ! Snake Bites
ಹಿಂದೆ ಈ ಕಟ್ಟಡವನ್ನು ಪ್ರೇಮಿಗಳು ಉಳಿದುಕೊಳ್ಳಲಿ ಎಂದು ತೆರೆಯಲಾಗಿತ್ತು. ಬಹುತೇಕರ ಪ್ರೀತಿ ಇಲ್ಲೇ ಆರಂಭವಾಗಿ, ಹೊಸ ಜನನಕ್ಕೆ ಕಾರಣವಾಗಿತ್ತು. ಆದರೆ, ಈಗ ಏಕಾಏಕಿ ಅಂತ್ಯಕ್ರಿಯೆಯ ಮನೆಯಾಗಿ ಬದಲಾಗಿರುವುದು ನೆಟ್ಟಿಗರ ಹುಬ್ಬೇರಿಸಿದೆ. ಇದು ಏಷ್ಯಾ ಖಂಡದ ಒಂದು ದೇಶದಲ್ಲಿ ಕ್ಷೀಣಿಸುತ್ತಿರುವ ಜನನ ಪ್ರಮಾಣ ಮತ್ತು ವೃದ್ಧರ ಜನಸಂಖ್ಯೆಯನ್ನು ಎತ್ತಿಹಿಡಿದಿದೆ. ಈ ಕುರಿತಾಗಿ ವ್ಯಾಪಕ ಚರ್ಚೆಗಳು ಸಹ ಭುಗಿಲೆದ್ದಿವೆ.
ವರದಿಗಳ ಪ್ರಕಾರ, ಪೂರ್ವ ಜಪಾನ್‌ನ ಸೈತಾಮಾ ಪ್ರಾಂತ್ಯದಲ್ಲಿರುವ ಲವ್ ಮೋಟೆಲ್ ಫೆಬ್ರವರಿಯಲ್ಲಿ ಅಂತ್ಯ ಸಂಸ್ಕಾರದ ಕಟ್ಟಡವಾಗಿ ಬದಲಾಗಿದೆ. ಈ ಹಿಂದೆ ವ್ಯವಹಾರ ದೃಷ್ಟಿಯಿಂದ ಹಾಗೂ ಅದನ್ನು ಉತ್ತೇಜಿಸುವ ಉದ್ದೇಶದಿಂದ ಕಟ್ಟಡಕ್ಕೆ ನೇರಳೆ ಬಣ್ಣದಲ್ಲಿ ಸುಣ್ಣ-ಬಣ್ಣ ಹೊಡಿಸಿ, ಆಕರ್ಷಕವಾಗಿ ಕಾಣುವಂತೆ ಮಾಡಲಾಗಿತ್ತು. ಆದರೆ, ಮೃತರ ಕುಟುಂಬಗಳು ದುಃಖದಲ್ಲಿರುತ್ತಾರೆ ಎಂಬ ಕಾರಣಕ್ಕೆ ಈಗ ಕೇವಲ ಬಿಳಿ ಬಣ್ಣದಲ್ಲಿ ಇರಿಸಲಾಗಿದೆ.
ಇದನ್ನೂ ಓದಿ: ಮಂಡ್ಯದ ಗಂಡು, ಕಾಡಿನ ರಾಜ ಸಿನಿಮಾ ಖ್ಯಾತಿಯ ಹೆಸರಾಂತ ನಿರ್ದೇಶಕ ಎ.ಟಿ. ರಘು ವಿಧಿವಶ! A T Raghu
ಈ ಲವ್ ಮೋಟೆಲ್ 1960ರಲ್ಲಿ ಕಟ್ಟಲಾಗಿದೆ. 1974ರ ನಡುವೆ ವಾರ್ಷಿಕ ಎರಡು ಮಿಲಿಯನ್ಗೂ ಹೆಚ್ಚು ಜನನಗಳಿಗೆ ಸಾಕ್ಷಿಯಾಗಿದ್ದ ಜಪಾನ್‌ನ ಎರಡನೇ ಬೇಬಿ ಬೂಮ್ ಸಮಯದಲ್ಲಿ, ಇಂತಹ ಲವ್ ಮೋಟೆಲ್‌ಗಳು ಅತ್ಯುತ್ತಮ ವ್ಯವಹಾರ ದಿನಗಳನ್ನು ಕಂಡಿತ್ತು. ಆದರೆ, ಪ್ರಸ್ತುತ ದೇಶದಲ್ಲಿ ಜನನ ಪ್ರಮಾಣ ಕುಸಿತ ಮತ್ತು ವೃದ್ಧರ ಸಂಖ್ಯೆ ಏರಿಕೆಯಾದ ಹಿನ್ನಲೆ ಲವ್ ಮೋಟೆಲ್‌ಗಳು ಇಂತಹ ಪರಿಸ್ಥಿತಿ ತಲುಪಿದೆ ಎಂದು ವರದಿ ಉಲ್ಲೇಖಿಸಿದೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಕಟ್ಟಡವನ್ನು ಜಪಾನ್‌ನ ಜನಸಂಖ್ಯಾ ಬಿಕ್ಕಟ್ಟಿನ ರೂಪಕ ಎಂದು ಹಲವರು ಜಾಲತಾಣಗಳಲ್ಲಿ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ಬಂಗಾರ-ಸಿಂಗಾರ; ಚಿನ್ನ ಖರೀದಿಗೆ ಯೋಚಿಸುತ್ತಿದ್ದೀರಾ? ಹಾಗಿದ್ರೆ ಈ ವಿಷಯಗಳ ಬಗ್ಗೆ ನಿಮಗೆ ಗೊತ್ತಿರಲಿ | Gold Rates