More

    ಮದುವೆಯಾದವರ ಅನುಭವವೇ ‘ಲವ್ ಬರ್ಡ್ಸ್’; ಟೀಸರ್ ಬಿಡುಗಡೆ

    ಬೆಂಗಳೂರು: ರಿಯಲ್​ ಲೈಫ್​ ದಂಪತಿ ‘ಡಾರ್ಲಿಂಗ್’ ಕೃಷ್ಣ ಮತ್ತು ಮಿಲನಾ ನಾಗರಾಜ್, ‘ಲವ್ ಬರ್ಡ್ಸ್’ ಎಂಬ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಮಿಲನಾ ಅವರ ಫಸ್ಟ್​ ಲುಕ್​ ಪೋಸ್ಟರ್​ಗಳು ಬಿಡುಗಡೆಯಾಗಿದ್ದವು. ಈಗ ಚಿತ್ರತಂಡ ಟೀಸರ್​ ಬಿಡುಗಡೆ ಮಾಡಿದೆ.

    ಇದನ್ನೂ ಓದಿ: ಇನ್ನೊಂದು ಚಿತ್ರದಲ್ಲಿ ಮಂಡ್ಯ ರಮೇಶ್​ ಮಗಳು ದಿಶಾ … ಯಾವುದು ಗೊತ್ತಾ?

    ‘ಲವ್ ಬರ್ಡ್ಸ್’ ಚಿತ್ರದ ಟೀಸರ್​ ಬಿಡುಗಡೆ ಮಾಡಿದ್ದು ವಿಜಯ್​ ರಾಘವೇಂದ್ರ ಹಾಗೂ ಅಜೇಯ್​ ರಾವ್​. ಟೀಸರ್​ ಬಿಡುಗಡೆ ಮಾಡಿ ಇಬ್ಬರೂ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಲವ್ ಬರ್ಡ್ಸ್’ ಚಿತ್ರವನ್ನು ಶ್ರೀ ಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ‘ಕಡ್ಡಿಪುಡಿ’ ಚಂದ್ರು ನಿರ್ಮಿಸಿದ್ದು, ಪಿ.ಸಿ.ಶೇಖರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

    ಈ ಚಿತ್ರದ ಬಗ್ಗೆ ಮಾತನಾಡುವ ಪಿ.ಸಿ. ಶೇಖರ್​, ‘ನಾನು ಸಾಮಾನ್ಯವಾಗಿ ಒಂದೇ ತರಹದ ಚಿತ್ರ ಮಾಡುವುದಿಲ್ಲ. ಬೇರೆಬೇರೆ ರೀತಿಯ ಚಿತ್ರ ಮಾಡುತ್ತಿರುತ್ತೇನೆ. ಲಾಕ್ಡೌನ್ ಸಮಯದಲ್ಲಿ ಬರೆದ ಕಥೆಯಿದು. ಮದುವೆಯಾದ ನನ್ನ ಸ್ನೇಹಿತರು ಹಂಚಿಕೊಳ್ಳುತ್ತಿದ್ದ ಕೆಲವು ವಿಷಯಗಳು ಈ ಕಥೆ ಬರೆಯಲು ಸ್ಪೂರ್ತಿ. ಕಥೆ ಬರೆಯಬೇಕಾದರೆ ಕೃಷ್ಣ – ಮಿಲನ ನಾಗರಾಜ್ ಅವರೆ ನಾಯಕ-ನಾಯಕಿ ಅಂತ ನಿರ್ಧರಿಸಿದ್ದೆ. ಆನಂತರ ನಿರ್ಮಾಪಕ ಚಂದ್ರು ಅವರಿಗೆ ಕಥೆ ಹೇಳಿದೆ. ಅವರು ಚಿತ್ರ ಮಾಡಲು ಮುಂದಾದರು’ ಎಂದರು.

    ಕೃಷ್ಣ ಹಾಗೂ ಮಿಲನಾ ಮದುವೆಯಾದ ನಂತರ ಒಪ್ಪಿಕೊಂಡ ಚಿತ್ರವಿದು. ಈ ಕುರಿತು ಮಾತನಾಡುವ ಕೃಷ್ಣ, ‘ಅದರಲ್ಲಿ ಆದಿ ಹಾಗೂ ನಿಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆವು. ಇದರಲ್ಲಿ ದೀಪಕ್ – ಪೂಜಾ ಪಾತ್ರದಲ್ಲಿ ಅಭಿನಯಿಸಿದ್ದೇವೆ. ಚಿತ್ರದಲ್ಲಿ ಆಕ್ಷನ್ ಸನ್ನಿವೇಶಗಳು ಚೆನ್ನಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

    ಇದನ್ನೂ ಓದಿ: ತಮಿಳಿಗೆ ರಕ್ಷಿತ್​ ಶೆಟ್ಟಿ? ವಿಜಯ್​ ಚಿತ್ರದಲ್ಲಿ ನಟನೆ?

    ‘ಲವ್ ಬರ್ಡ್ಸ್’ ಚಿತ್ರದಲ್ಲಿ ಲವ್ ಅಷ್ಟೇ ಅಲ್ಲ, ಬೇರೆ ವಿಷಯಗಳು ಇವೆ ಎನ್ನುವ ಮಿಲನಾಗೆ ಈ ಕಥೆ ಬಹಳ ಇಷ್ಟವಾಯಿತಂತೆ. ಅದೇ ಕಾರಣಕ್ಕೆ ಈ ಚಿತ್ರವನ್ನು ಒಪ್ಪಿಕೊಂಡಿದ್ದಾಗಿ ಹೇಳಿಕೊಂಡರು.

    ರಾಜೇಶ್​ ಕೃಷ್ಣನ್​, ಕುಮಾರ್​ ಗೋವಿಂದ್​, ಶ್ರೀನಿವಾಸಮೂರ್ತಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts