ಸನ್‌ಸ್ಕ್ರೀನ್ ಬದಲು ಕಮಲದ ಎಲೆ: ಮುಖದ ಕಾಂತಿಗೆ ಚೀನಾದಲ್ಲಿ ಹೊಸ ಟ್ರೆಂಡ್​, ತಜ್ಞರು ಹೇಳೋದೇನು? Sunscreen

Sunscreen
Published on

Sunscreen : ಚೀನಾದ ಜನರು ತಮ್ಮ ಚರ್ಮದ ಆರೈಕೆಗಾಗಿ ನಿತ್ಯವೂ ಅನುಸರಿಸುತ್ತಿರುವ ಅಭ್ಯಾಸಗಳು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ಪ್ರಮುಖ ವಿಷಯವಾಗಿದೆ.

ಇತ್ತೀಚೆಗೆ, ಚೀನಾದ ಸಿಚುವಾನ್‌ನಿಂದ ಹೊರಬಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಇಬ್ಬರು ಯುವತಿಯರು ಸನ್‌ಸ್ಕ್ರೀನ್ ಬದಲಿಗೆ ಕಮಲದ ಎಲೆಗಳಿಂದ ಮುಖವನ್ನು ಮುಚ್ಚಿಕೊಂಡು ಬೈಕ್​ ಚಾಲನೆ ಮಾಡುತ್ತಿರುವ ದೃಶ್ಯವಿದೆ. ಈ ವಿಡಿಯೋ ವೈರಲ್ ಆಗಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದೀಗ ಜನರು ಆ ವಿಡಿಯೋ ಹಿಂದಿನ ಸತ್ಯವನ್ನು ಹುಡುಕುತ್ತಿದ್ದಾರೆ. ಹೆಚ್ಚಿನ ಜನರು ಸನ್‌ಸ್ಕ್ರೀನ್ ಬದಲಿಗೆ ಕಮಲದ ಎಲೆಗಳನ್ನು ಬಳಸಬಹುದೇ ಎಂದು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

ತಜ್ಞರು ಹೇಳುವಂತೆ ಕಮಲದ ಎಲೆಗಳು ಚರ್ಮವನ್ನು ತಂಪಾಗಿಸಲು ಮತ್ತು ನೇರಳಾತೀತ ಕಿರಣಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಎಲೆಗಳನ್ನು ನಿಮ್ಮ ಮುಖದ ಮೇಲೆ ಮುಚ್ಚುವುದು ಒಳ್ಳೆಯದಲ್ಲ ಮತ್ತು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ರಿಸರ್ಚ್ ಜರ್ನಲ್ ಆಫ್ ಟ್ರಾಪಿಕಲ್ ಅಂಡ್ ಕಾಸ್ಮೆಟಿಕ್ ಸೈನ್ಸ್‌ನಲ್ಲಿ ಪ್ರಕಟವಾದ ಅಧ್ಯಯನವು ಕಮಲದ ಹೂವು ಮತ್ತು ಎಲೆಯನ್ನು ಸೌಂದರ್ಯವರ್ಧಕಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ಎಂದು ಹೇಳುತ್ತದೆ. ವಯಸ್ಸಾಗುವುದನ್ನು ತಡೆಯಲು ಮತ್ತು ಮೊಡವೆಗಳನ್ನು ತೊಡೆದುಹಾಕಲು ಕಮಲ ಒಳ್ಳೆಯದು ಎಂದು ಅಧ್ಯಯನ ವರದಿ ಹೇಳುತ್ತದೆ. ಆದಾಗ್ಯೂ, ಸನ್‌ಸ್ಕ್ರೀನ್ ಬದಲಿಗೆ ಕಮಲದ ಎಲೆಗಳನ್ನು ಬಳಸುವ ಟ್ರೆಂಡ್​ ಇದೆ. ಆದರೆ, ಇದು ಸನ್‌ಸ್ಕ್ರೀನ್‌ಗೆ ಬದಲಿಯಾಗಿಲ್ಲ ಎಂದು ಮುಂಬೈ ಮೂಲದ ಚರ್ಮರೋಗ ತಜ್ಞ ಡಾ. ಶರೀಫಾ ಚೌಸ್ ಹೇಳುತ್ತಾರೆ.

ಸನ್‌ಸ್ಕ್ರೀನ್‌ಗಳಂತೆ ಕಮಲದ ಎಲೆಗಳು ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಶರೀಫಾ ಸ್ಪಷ್ಟಪಡಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net