ಪಶ್ಚಿಮ ಬಂಗಾಳದ ಏಕೈಕ ಕಾಂಗ್ರೆಸ್​ ಶಾಸಕ ಟಿಎಂಸಿಗೆ ಸೇರ್ಪಡೆ

Bayron Biswas
Published on

ಕೊಲ್ಕತ್ತ: ಪಶ್ಚಿಮ ಬಂಗಾಳದ ಏಕೈಕ ಕಾಂಗ್ರೆಸ್​ ಶಾಸಕ ಬೇರನ್​ ಬಿಸ್ವಾಸ್​ ಸೋಮವಾರ ಟಿಎಂಸಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್​ ಬ್ಯಾನರ್ಜಿ ಸಮ್ಮುಖದಲ್ಲಿ ಸೇರ್ಪಡೆಯಾಗಿರುವ ಬಿಸ್ವಾಸ್​ ಸಾಗರ್​ ದಿಗಿ ವಿಧಾನಸಭೆ ಕ್ಷೇತ್ರವನ್ನ ಪ್ರತಿನಿಧಿಸುತ್ತಿದ್ದಾರೆ.

ಟಿಎಂಸಿ ಪಕ್ಷದ ವತಿಯಿಂದ ನಡೆಸಲಾಗುತ್ತಿರುವ #JonoSanjogYatra ವೇಳೆ ಬೇರನ್​ ಬಿಸ್ವಾಸ್ ಕಾಂಗ್ರೆಸ್​ ತೊರೆದು ಟಿಎಂಸಿ ಸೇರ್ಪಡೆಯಾಗಿದ್ದಾರೆ.

TMC ಶಾಸಕ ಸುಬ್ರತಾ ಸಾಹಾ ಸಾವಿನಿಂದ ತೆರವಾಗಿದ್ದ ಸಾಗರ್​ ದಿಗಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷದ ಬೇರನ್​ ಬಿಸ್ವಾಸ್​ ತೃಣಮೂಲ ಕಾಂಗ್ರೆಸ್​ನ ದೇಬಶಿಶ್​ ಬ್ಯಾನರ್ಜಿ ಎದುರು 22,000 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net