ದೈತ್ಯಾಕಾರ ಜೀವಿ ಪತ್ತೆ? ಥೇಮ್ಸ್​ ನದಿಯಲ್ಲಿ ಸೆರೆಹಿಡಿದ ಭಯಾನಕ ಫೋಟೋ ಸಿಕ್ಕಾಪಟ್ಟೆ ವೈರಲ್​

Scary Image
Published on

ಲಂಡನ್​: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಚಿತ್ರ ಹಾಗೂ ಭಯಾನಕ ಫೋಟೋವೊಂದು ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಫೋಟೋದಲ್ಲಿರುವುದು ಏನು? ಏನಿಷ್ಟು ವಿಚಿತ್ರವಾಗಿದೆ? ನೋಡಲು ಕೆಂಪು ಕಣ್ಣಿನ ಬೇಬಿ ಗಾಡ್ಜಿಲ್ಲ ಇದ್ದಂಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಅಂದಹಾಗೆ ಈ ಫೋಟೋವನ್ನು ಲಂಡನ್​ನ ಥೇಮ್ಸ್​ ನದಿಯಲ್ಲಿ ಸೆರೆಹಿಡಿಯಲಾಗಿದೆ. ಬಹುತೇಕ ನೀರಿನಲ್ಲಿ ಅಡಗಿಕೊಂಡು ತನ್ನ ಮುಖವನ್ನು ಮಾತ್ರ ಹೊರತೆಗೆದಿರುವ ಜೀವಿಯಂತೆ ಕಾಣವ ಫೋಟೋ ನೆಟ್ಟಿಗರ ಹುಬ್ಬೇರಿಸಿದೆ. ನಿಜವಾಯಿಯೂ ಇದೊಂದು ದೈತ್ಯಾಕಾರದ ಜೀವಿ ಇರಬಹುದಾ ಎಂದು ಅಂದಾಜು ಮಾಡುತ್ತಿದ್ದಾರೆ.

ರೆಡಿಟ್​ ಜಾಲತಾಣ ವೇದಿಕೆಯಲ್ಲಿ ಈ ಫೋಟೋವನ್ನು ಶೇರ್​ ಮಾಡಲಾಗಿದೆ. ಇದೀಗ ತಾನೇ ಥೇಮ್ಸ್‌ ನದಿಯಲ್ಲಿ ಒಂದು ವಸ್ತುವನ್ನು ನೋಡಿದೆ. ಅದ್ಭುತವಾದ ಫೋಟೋದಲ್ಲಿ ಗುರುತಿಸಲಾಗದ ಜಲಚರ ಜೀವಿಯು ಕ್ಯಾಮೆರಾದಲ್ಲಿ ನಟಿಸುತ್ತಿರುವುದನ್ನು ತೋರಿಸಿತು. ಈ ಒಂದು ನೋಟವು ನೋಡುವ ಸ್ಥಳದಿಂದ ಎಸ್ಕೇಪ್​ ಆಗುವಷ್ಟು ಭಯಾನಕವಾಗಿದೆ ಎಂದು ಫೋಟೋಗೆ ಅಡಿಬರಹ ನೀಡಲಾಗಿದೆ.

Scary Image 2

ಲೊಚ್ ನೆಸ್ ಮಾನ್ಸ್ಟರ್​ ನಿಜವಾಗಿ ಅಸ್ತಿತ್ವದಲ್ಲಿದೆಯೇ? ಸ್ಕಾಟಿಷ್ ಜಾನಪದದಲ್ಲಿ ಈ ಜೀವಿಯನ್ನು ಉಲ್ಲೇಖಿಸಲಾಗಿದೆ. ಇದನ್ನು ನೆಸ್ಸಿ ಎಂದೂ ಕರೆಯುತ್ತಾರೆ. ಲಂಡನ್‌ನ ನದಿಯಲ್ಲಿ ಕಾಣಿಸಿಕೊಂಡಿರುವುದು ಪೌರಾಣಿಕ ಪ್ರಾಣಿಯೇ ಎಂಬ ಊಹೆಗಳನ್ನು ಹುಟ್ಟುಹಾಕಿದೆ.

ನೆಟ್ಟಿಗರು ಸಹ ಬಗೆಬಗೆಯಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ. ಕೆಲವರು ಇದನ್ನು ಥೇಮ್ಸ್​ನ ಅನಕೊಂಡಾ ಅಂತಾ ಕರೆದರೆ, ಇನ್ನು ಕೆಲವರು ಅದೊಂದು ಗಾಡ್ಜಿಲ್ಲಾ ಮರಿ ಮತ್ತು ಕೆಂಪು ಕಣ್ಣು ಹೊಂದಿದೆ ಎಂದಿದ್ದಾರೆ. (ಏಜೆನ್ಸೀಸ್​)

Scary Image 1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net