

Heart: ನ್ಯವಾಗಿ ಮೆಟ್ರೋ ಎಂದರೆ ವೇಗವಾಗಿ ಓಡಾಟ ನಡೆಸುವ ಸಾರಿಗೆ ಎಂದು ನೆನಪಿಗೆ ಬರುತ್ತದೆ ಆದರೆ, ಇದೀಗ ಅರೋಗ್ಯ ದೃಷ್ಟಿಯಲ್ಲಿ ಜೀವ ಉಳಿಸಲು ಸಹ ಬಳಸಬಹುದು ಎಂಬುದನ್ನು ತೋರಿಸಲು ಬೆಂಗಳೂರಿನ ನಮ್ಮ ಮೆಟ್ರೋ ಸಾಕ್ಷಿಯಾಗಿದೆ.
ಬೆಂಗಳೂರು ಮೆಟ್ರೋ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದರ ಮೂಲಕ ಕೇವಲ 20 ನಿಮಿಷಗಳಲ್ಲಿ ಜೀವಂತ ಹೃದಯವನ್ನು ನಿರ್ಣಾಯಕ ಕಸಿಗಾಗಿ ಸಾಗಿರುವ ಘಟನೆ ಶುಕ್ರವಾರ ರಾತ್ರಿ 11 ಗಂಟೆಗೆ ನಡೆದಿದೆ.
ಈ ತ್ವರಿತ ಕಾರ್ಯಾಚರಣೆಯು ಬಹಳ ಬೇಗ ಹೃದಯವನ್ನು ಸ್ವೀಕರಿಸಿ, ಆಸ್ಪತ್ರೆಗೆ ತಲುಪಿಸುವಂತೆ ಮಾಡಿತು. ಹಾಗೇಯೇ ಕ್ರಮವು ಒಂದು ಜೀವ ಉಳಿಸುವಲ್ಲಿ ಸುಗಮಗೊಳಿಸಿದ್ದು, ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳು ಹಾಗೂ ನಮ್ಮ ಮೆಟ್ರೋ ಅಧಿಕಾರಿಗಳ ಕಾರ್ಯನಿಷ್ಠೆಯನ್ನು ಎತ್ತಿ ತೋರಿಸಿದೆ.
ನಗರದ ಸ್ಪರ್ಶ್ ಆಸ್ಪತ್ರೆ ತಂಡವು ಯಶವಂತಪುರ ಮೆಟ್ರೋ ನಿಲ್ದಾಣದಿಂದ ಸೌತ್ ಪೆರೇಡ್ ಗ್ರೌಂಡ್ ಮೆಟ್ರೋ ನಿಲ್ದಾಣದಲ್ಲಿರುವ ಅಪೋಲೋ ಆಸ್ಪತ್ರೆಗೆ ಹೃದಯವನ್ನು ಕೊಂಡೊಯ್ಯುವಲ್ಲಿ ಯಶಸ್ವಿ ಕಾರ್ಯವನ್ನು ನಿರ್ವಹಿಸಿತು. ಈ ನಿರ್ಧಾರವು ತುರ್ತು ಸೇವೆಯಲ್ಲಿ ವೈದ್ಯರು ಹಾಗೂ ಸಾರಿಗೆ ವ್ಯವಸ್ಥೆಯು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ತೋರಿಸುತ್ತದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಪ್ರಕಾರ, ಅಂಗಾಂಗವನ್ನು ಸ್ಪರ್ಶ ಆಸ್ಪತ್ರೆಯಿಂದ 11.01 ಕ್ಕೆ ಯಶವಂತಪುರ ಮೆಟ್ರೋ ನಿಲ್ದಾಣಕ್ಕೆ ತರಲಾಯಿತು. ನಂತರ 11:20 ಕ್ಕೆ ಮಂತ್ರಿ ಸ್ವ್ಕೇರ್ ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣವನ್ನು ತಲುಪಿತು.
ನಮ್ಮ ಮೆಟ್ರೋ ಕೇವಲ 20 ನಿಮಿಷಗಳಲ್ಲಿ 7 ನಿಲ್ದಾಣಗಳನ್ನು ಕ್ರಮಿಸಿದ್ದು, ಈ ಪ್ರಯಾಣವು ಅಂಗಾಂಗದ ಸುಗಮ ಸಾಗಣೆಗೆ ಅವಕಾಶ ಮಾಡಿಕೊಟ್ಟಿತು. ಹಾಗೇ ಯಾವುದೇ ವಿಳಂಬವಿಲ್ಲದೇ ಆಸ್ಪತ್ರೆಗೆ ತಲುಪಿತು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಬಿಎಂಆರ್ಸಿಎಲ್ ತನ್ನ ಪಾತ್ರವನ್ನು ಎತ್ತಿ ತೋರಿಸಿದ್ದು, "ತ್ವರಿತ ಮತ್ತು ಸುರಕ್ಷಿತ" ಕಸಿಗಾಗಿ ಮಾನವ ಹೃದಯದ ಸಾಗಾಟ ಸುಗಮಗೊಳಿಸಿದೆ ಎಂದು ತಿಳಿಸಿದ್ದಾರೆ.
(ಏಜೆನ್ಸೀಸ್)