ಪಾಲಿಸಿದಾರರ ಹಿತರಕ್ಷಣೆಗೆ ಅಗತ್ಯ ಬಲಿಷ್ಠ ಸಂಘಟನೆ : ಎಲ್.ಮಂಜುನಾಥ್ ಹೇಳಿಕೆ

padagrahana
ಬಿ.ಸಿ.ರೋಡಿನಲ್ಲಿ ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘ (ಲಿಕಾಯ್)ದ ಪದಗ್ರಹಣ ಕಾರ್ಯಕ್ರಮಕ್ಕೆ ಸಾಧಕ ಪ್ರತಿನಿಧಿ ಜೆರಾಲ್ಡ್ ಕೊರೆಯ ಚಾಲನೆ ನೀಡಿದರು. ಎಲ್.ಮಂಜುನಾಥ್, ಎಸ್.ಲೋಕೇಶ ಶೆಟ್ಟಿ ಇದ್ದರು.
Published on

ಬಂಟ್ವಾಳ: ದೇಶದಲ್ಲಿ 50 ಲಕ್ಷ ಕೋಟಿ ರೂ.ಆಸ್ತಿ ಹೊಂದಿರುವ ಭಾರತೀಯ ಜೀವ ವಿಮಾ ನಿಗಮ (ಎಲ್ಲೈಸಿ)ದಲ್ಲಿ 13 ಲಕ್ಷ ಪ್ರತಿನಿಧಿಗಳು ದುಡಿಯುತ್ತಿದ್ದು, 19 ಕೋಟಿ ಪಾಲಿಸಿದಾರರ ಪೈಕಿ ವರ್ಷಕ್ಕೆ 4 ಲಕ್ಷ ಕೋಟಿ ರೂ.ಮೊತ್ತದ ಮೆಚ್ಯೂರಿಟಿ ಹಣ ವಿತರಣೆಯಾಗುತ್ತಿದೆ. ವಿಮಾ ಪ್ರತಿನಿಧಿಗಳು ಮತ್ತು ಪಾಲಿಸಿದಾರರ ಹಿತರಕ್ಷಣೆಗಾಗಿ ಬಲಿಷ್ಠ ಸಂಘಟನೆಯ ಅಗತ್ಯವಿದೆ ಎಂದು ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘ (ಲಿಕಾಯ್)ದ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಎಲ್.ಮಂಜುನಾಥ್ ಹೇಳಿದರು.

ಬಿ.ಸಿ.ರೋಡಿನಲ್ಲಿ ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘ (ಲಿಕಾಯ್) ವತಿಯಿಂದ ಶನಿವಾರ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಘದ ರಾಜ್ಯ ಸಮಿತಿ ಅಧ್ಯಕ್ಷ ಎಸ್.ಲೋಕೇಶ್ ಶೆಟ್ಟಿ, ಉಡುಪಿ ವಿಭಾಗ ಅಧ್ಯಕ್ಷ ಪ್ರಕಾಶ್ ರೈ ಸಾರಕೆರೆ, ಮಾಜಿ ಅಧ್ಯಕ್ಷ ಎಂ.ಶ್ರೀನಾಥ್ ಭಟ್, ಜಿಲ್ಲಾ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ಶುಭ ಹಾರೈಸಿದರು.

ಸಂಘದ ಅಧ್ಯಕ್ಷ ಚಿತ್ತರಂಜನ್ ನೆಕ್ಕಿಲಾರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಪ್ರಶಾಂತ ಕೋಟ್ಯಾನ್, ಮಹಿಳಾ ಸಮಿತಿ ಅಧ್ಯಕ್ಷೆ ವಿಜಯಕುಮಾರಿ ಇಂದ್ರ, ಕೋಶಾಧಿಕಾರಿ ಪ್ರಕಾಶ ಅಮ್ಟಾಡಿ, ಚಂದ್ರಶೇಖರ ಅಲ್ಲಿಪಾದೆ ಮತ್ತಿತರರು ಇದ್ದರು.

ರೋಹಿದಾಸ್ ಕುಂದರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಆನಂದ ಸಾಲ್ಯಾನ್ ವಂದಿಸಿ, ನವೀನ್ ಕೊಡ್ಮಾಣ್ ಮತ್ತು ನಾರಾಯಣ ಅಮೀನ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net