ಭಾರತದಲ್ಲಿ 17 ಲಕ್ಷ ವಿಡಿಯೋ ಡಿಲೀಟ್​ ಮಾಡಿದ ಯೂಟ್ಯೂಬ್​..!

youtube
Published on

ಬೆಂಗಳೂರು: ಯೂಟ್ಯೂಬ್​ನಲ್ಲಿ ಆಕ್ಷೇಪಾರ್ಹ ವಿಡಿಯೋಗಳನ್ನು ಜನರು ಶೇರ್​ ಮಾಡುತ್ತಲೇ ಇರುತ್ತಾರೆ. ಇದನ್ನು ತಡೆಗಟ್ಟುವುದೇ ಒಂದು ಸಾಹಸ. ಅವೆಲ್ಲವನ್ನೂ ಡಿಲೀಟ್​ ಮಾಡುವುದು ಇನ್ನೊಂದು ದೊಡ್ಡ ಕೆಲಸ. ಇನ್ನು ವಿಡಿಯೋಗೆ ಬರುವ ಆಕ್ಷೇಪಾರ್ಹ ಕಮೆಂಟ್​ಗಳದ್ದು ಬೇರೆಯದೇ ಕಥೆ. ಆದರೆ ಯೂಟ್​ಯೂಬ್​ ಬಳಿ ಎಷ್ಟು ಶಕ್ತಿಶಾಲಿ ಟೆಕ್ನಾಲಜಿ ಇದೆ ಎಂದರೆ ಈ ಬಾರಿ ಬಂದಿರುವ ಆಕ್ಷೇಪಾರ್ಹ ಕಮೆಂಟ್​ಗಳಲ್ಲಿ ಶೇಕಡ 99ರಷ್ಟು ಕಮೆಂಟ್​ಗಳನ್ನು ಏಐ ಡಿಲೀಟ್​ ಮಾಡಿದೆ!

ಯೂಟ್ಯೂಬ್​ನ ಕಮ್ಯುನಿಟಿ ಗೈಡ್​ಲೈನ್ಸ್​ ಉಲ್ಲಂಘಿಸಿದ್ದಕ್ಕಾಗಿ ಜುಲೈನಿಂದ ಸೆಪ್ಟೆಂಬರ್ ತಿಂಗಳ ಒಳಗೆ ಯೂಟ್ಯೂಬ್ ಭಾರತದಿಂದ ಅಪ್‌ಲೋಡ್ ಮಾಡಲಾಗಿದ್ದ 17 ಲಕ್ಷಕ್ಕೂ ಹೆಚ್ಚು ವೀಡಿಯೊಗಳನ್ನು ತೆಗೆದುಹಾಕಿದೆ ಎಂದು ಖುದ್ದು ಯೂಟ್ಯೂಬ್​ ಸಂಸ್ಥೆ ಮಂಗಳವಾರ ಮಾಹಿತಿ ನೀಡಿದೆ. ಜಾಗತಿಕವಾಗಿ ಗೈಡ್​ಲೈನ್ಸ್​ ಉಲ್ಲಂಘಿಸಿದ್ದಕ್ಕಾಗಿ ಯೂಟ್ಯೂಬ್​ ಒಟ್ಟು 56 ಲಕ್ಷಕ್ಕೂ ಹೆಚ್ಚು ವಿಡಿಯೋಗಳನ್ನು ತೆಗೆದುಹಾಕಿದೆ. ಅಂದರೆ ಒಟ್ಟು ತೆಗೆದು ಹಾಕಿರುವ ವಿಡಿಯೋಗಳ ಶೇಕಡಾ 30ರಷ್ಟು ವಿಡಿಯೋಗಳು ಭಾರತದದ್ದೇ!

ಯೂಟ್ಯೂಬ್​ ಸುಮಾರು 73.7 ಕೋಟಿ ಕಮೆಂಟ್​ಗಳನ್ನು ಡಿಲೀಟ್​ ಮಾಡಿದ್ದು ಅದರಲ್ಲಿ 99 ಶೇಕಡ ಕಮೆಂಟ್​ಗಳನ್ನು ಯೂಟ್ಯೂಬ್​ನ ಎಐ ಖುದ್ದಾಗಿ ಡಿಲೀಟ್​ ಮಾಡಿದೆ. ಉಳಿದ 1 ಶೇಕಡ ಕಮೆಂಟ್​ಗಳನ್ನು ಬಳಕೆದಾರರೇ ರಿಪೋರ್ಟ್​ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net