

ನಿಮ್ಮ ಸ್ವಭಾವದ ಬಗ್ಗೆ ನೀವು ಇಷ್ಟ ಪಡುವ ಬಣ್ಣ ಏನು ಹೇಳುತ್ತದೆ?.
ಕೆಂಪು, ಬಿಳಿ, ನೇರಳೆ, ನೀಲಿ ಕಪ್ಪು ಯಾವ ಬಣ್ಣದ ಸೂಚನೆ ಏನು?.
ಕಪ್ಪು ಬಣ್ಣ ಇಷ್ಟಪಡುವವರು ಸ್ವತಂತ್ರ್ಯರು...ಯಾವುದೇ ಕೆಲಸವನ್ನು ಮಾಡಲು ಹಿಂಜರಿಯೋದಿಲ್ಲ.
ಪ್ರತಿಯೊಬ್ಬರಿಗೂ ಪ್ರತ್ಯೇಕವಾದ ಬಣ್ಣಗಳು ಇಷ್ಟವಿರುತ್ತದೆ. ಕೆಂಪು, ಬಿಳಿ, ಕಪ್ಪು, ನೀಲಿ ಹೀಗೆ ಬಣ್ಣಗಳೆಂದರೆ ಪ್ರೀತಿ. ಕೆಲವೊಬ್ಬರು ತಮ್ಮ ಬಣ್ಣದ ಮೇಲಿನ ಪ್ರೇಮವನ್ನು ಒಂದೇ ಬಟ್ಟೆ ಖರೀದಿಸುವ ಮುಖೇನ ವ್ಯಕ್ತಪಡಿಸಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಬ್ಯಾಗ್ ಸೇರಿದಂತೆ ಇತರ ವಸ್ತುಗಳ ಖರೀದಿ ಮೂಲಕ ವ್ಯಕ್ತಪಡಿಸುತ್ತಾರೆ. ಅಚ್ಚರಿ ವಿಚಾರ ಏನೆಂದರೆ, ಬಣ್ಣದ ಮೂಲಕ ನಿಮ್ಮ ವ್ಯಕ್ತಿತ್ವವನ್ನು ಪತ್ತೆ ಹಚ್ಚಬಹುದು ಎನ್ನುವುದು ನಿಮಗೆ ಗೊತ್ತಾ?
ಹೌದು, ನೀವು ಇಷ್ಟ ಪಡುವ ಬಣ್ಣದ ಮೂಲಕ ನಿಮ್ಮ ವ್ಯಕ್ತಿತ್ವದ ರಹಸ್ಯ ತಿಳಿದುಕೊಳ್ಳಬಹುದು. ನಿಮ್ಮ ಮೂಗು, ಮಖ, ಕಾಲು ಹಾಗೂ ಕೈ ಬೆರಳಿನ ಆಕಾರದ ಮೂಲಕ ವ್ಯಕ್ತಿತ್ವ ತಿಳಿದುಕೊಳ್ಳುವಂತೆ ಬಟ್ಟೆ ಮೂಲಕವೂ ನೀವು ಎಂತಹ ವ್ಯಕ್ತಿ ನಿಮ್ಮ ಸ್ವಭಾವವೇನು ಎನ್ನುವುದನ್ನು ತಿಳಿದುಕೊಳ್ಳಬಹುದು. ನಿಮ್ಮ ಇಷ್ಟದ ಬಣ್ಣದ ಮೂಲಕ ನಿಮ್ಮ ಸೀಕ್ರೆಟ್ ಅನ್ನು ಪರೀಕ್ಷಿಸಿಕೊಳ್ಳಿ.
ನೀವು ಹಸಿರು ಬಣ್ಣವನ್ನು ಇಷ್ಟ ಪಡುವವರಾಗಿದ್ದರೆ ನೀವು ಸೋಶಿಯಲ್ಲಿ ತೀರಾ ಗಟ್ಟಿ ಮನಸ್ಥಿತಿ ಇರುವವರು. ಚೈತನ್ಯ ಮತ್ತು ಪ್ರಕೃತಿಯನ್ನು ಹಸಿರು ಸೂಚಿಸುತ್ತದೆ. ಅದರಂತೆ ಗ್ರೀನ್ ಬಣ್ಣ ಪ್ರೇಮಿಸುವವರು ಶಾಂತ ಪ್ರಿಯರು. ತರ್ಕ ಬದ್ಧವಾಗಿ ಯೋಚಿಸುವ ಗುಣವುಳ್ಳವರು . ಭಾವನಾತ್ಮಕವಾಗಿ ಸದೃಢರು ಎಂತದ್ದೇ ಸಮಸ್ಯೆ ಬಂದರೂ ಸಹ ಗಟ್ಟಿಯಾಗಿ ನಿಲ್ಲುವ ಮನಸ್ಥಿತಿ ಹೊಂದಿರುವವರು. ಅತ್ಯುತ್ತಮ ಯೋಜಕರು ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವವರು.
ಕಿತ್ತಳೆ ಬಣ್ಣವನ್ನು ಪ್ರೇಮಿಸುವವರು ಉತ್ಸಾಹಿಗಳು. ಇದು ಉತ್ಸಾಹ, ಶಕ್ತಿಯನ್ನು ಬಿಂಬಿಸುತ್ತದೆ. ಇದರಂತೆ ಈ ಬಣ್ಣವನ್ನು ನೆಚ್ಚಿಕೊಳ್ಳುವವರ ಮೊಗದಲ್ಲಿ ಸದಾ ಮಂದಹಾಸವಿರುತ್ತದೆ. ಯಾವುದೇ ಜಾಗದಲ್ಲಿ ಕಿತ್ತಳೆ ಬಣ್ಣ ಅತಿಯಾಗಿ ಕಂಡರೆ ಕಣ್ಣಿಗೆ ಆಯಾಸ, ಕಿರಿಕಿರಿ ಅನಿಸುತ್ತದೆ. ಅದರಂತೆ, ಈ ಬಣ್ಣವನ್ನು ನೆಚ್ಚಿಕೊಳ್ಳುವವರು ಸಂಬಂಧವನ್ನು ಉಳಿಸಿಕೊಳ್ಳಲು ಒದ್ದಾಡುತ್ತಾರೆ.
ನೀವು ಹೆಚ್ಚು ಬೂದು ಬಣ್ಣವನ್ನು ಇಷ್ಟಪಡುವವರಾಗಿದ್ದರೆ ನೀವು ವಿವಾದದಿಂದ ದೂರ ಉಳಿಯಲು ಬಯಸುವವರು ಎಂದರ್ಥ. ಇದು ವಿಶೇಷ ಸಂದೇಶವಿಲ್ಲದ ತಟಸ್ಥ ಸ್ಥಿತಿಯನ್ನು ಸೂಚಿಸುತ್ತದೆ. ನೀವು ಒಂಟಿಯಾಗಿ ಇರಲು ಬಯಸುತ್ತೀರಿ. ಆತ್ಮಾವಲೋಕನದ ಜೀವನವನ್ನು ಇಷ್ಟಪಡುತ್ತೀರಿ. ಸಮತೋಲನವನ್ನು ಮೆಚ್ಚುವ ನೀವು ನಿರ್ಧಾರ ತೆಗೆದುಕೊಳ್ಳುವ ಎಲ್ಲರೀತಿಯಲ್ಲೂ ಚಿಂತಿಸುತ್ತೀರಿ. ಭಾವನೆಗಳನ್ನು ವ್ಯಕ್ತಪಡಿಸುವಾಗ ಸ್ವಲ್ಪ ಹೆಣಗಾಡಬೇಕಾಗುತ್ತದೆ.
ಕೆಂಪು ಬಣ್ಣವು ಉತ್ಸಾಹ, ಶಕ್ತಿ, ನಿಮ್ಮ ಪ್ರಭಾವವನ್ನು, ಭಾವನೆ ಮತ್ತು ಮಹತ್ವಾಕಾಂಕ್ಷೆಯ ಸೂಚಿಸುತ್ತದೆ. ಕೆಂಪು ಬಣ್ಣವನ್ನು ಹಲವರು ಇಷ್ಟಪಡುತ್ತಾರೆ. ಪ್ರಿಯರು ಅಗ್ನಿಯಂತಹ ವ್ಯಕ್ತಿತ್ವದವರು - ಆಕರ್ಷಕರು, ಛಲವುಳ್ಳವರು ಮತ್ತು ಎಲ್ಲರ ಗಮನ ಸೆಳೆಯುವವರು. ಆದರೆ ಇವರ ಅತಿಪರಿಶ್ರಮ ಮತ್ತು ತೀವ್ರತೆಯು ಕೆಲವೊಮ್ಮೆ ಅವರು ತಾಳ್ಮೆ ಕಳೆದುಕೊಳ್ಳುವಂತೆ ಮಾಡಬಹುದು.
ಗುಲಾಬಿ ಬಣ್ಣದಂತೆ ಮೃದು ಸ್ವಭಾವವನ್ನು ಸೂಚಿಸುತ್ತದೆ. ಈ ಬಣ್ಣವನ್ನು ಇಷ್ಟ ಪಡುವವರು ತಮ್ಮ ಭಾವನೆಯನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಇವರು ಸೌಮ್ಯ ಸ್ವಭಾವದವರು. ತಮ್ಮ ಸಂಬಂಧದಲ್ಲಿ ಸಾಮರಸ್ಯ, ಪ್ರೀತಿ ಇರುವಂತೆ ಬಯಸುವವರು ಇವರ ಸೂಕ್ಷ್ಮ ಮನಸ್ಸು ಸುಲಭವಾಗಿ ನೊಂದಿಕೊಳ್ಳುವ ಸಾಧ್ಯತೆ ಇರುತ್ತದೆ. ಸಹಾನುಭೂತಿ, ದಯೆ ಕರುಣೆ ಹೆಚ್ಚೇ ಹೊಂದಿರುತ್ತಾರೆ.
ಬಿಳಿಯು ಪ್ರಾಮಾಣಿಕ, ನಿಷ್ಕಲ್ಮಶ ಮತ್ತು ಶಾಂತ ಸ್ವಭಾವವನ್ನು ಸೂಚಿಸುತ್ತದೆ. ಈ ಬಣ್ಣವನ್ನು ಇಷ್ಟ ಪಡುವವರು ಇತರರಿಗೆ ಕೆಡುಕು ಬಯಸುವುದಿಲ್ಲ. ಇವರು ಸರಳತೆ ಮತ್ತು ಪ್ರಾಮಾಣಿಕತೆಯನ್ನು ಹುಡುಕುತ್ತಾ, ಗೊಂದಲವಿಲ್ಲದ ಜೀವನ ನಡೆಸಲು ಬಯಸುತ್ತಾರೆ. ಇಂತಹ ಸ್ವಭಾವದಿಂದ ಅವರು ಕೆಲವೊಮ್ಮೆ ಏಕಾಂಗಿಗಳು ಆಗುತ್ತಾರೆ. ಇತರರ ಸಂಕಷ್ಟಕ್ಕೆ ಬೇಗನೇ ಸ್ಪಂದಿಸುತ್ತಾರೆ.
ನೇರಳೆ ಬಣ್ಣವು ಸೃಜನಶೀಲತೆ ಆಧ್ಯಾತ್ಮಿಕ, ರಾಯಲಿಟಿಯನ್ನು ಸೂಚಿಸುತ್ತದೆ. ಈ ಬಣ್ಣವನ್ನು ಇಷ್ಟಪಡುವವರ ಸ್ವಭಾವ ಸೃಜನ ಶೀಲತೆ, ಕಲ್ಪನಾಶೀಲತೆಯಿಂದ ಕೂಡಿರುತ್ತದೆ.ಆದರೆ ವಾಸ್ತವಕ್ಕಿಂತ ಕನಸುಗಳ ಲೋಕದಲ್ಲಿ ವಿಹರಿಸುವುದು ಇವರ ದೌರ್ಬಲ್ಯವಾಗಬಹುದು.
ನೀವು ನೀಲಿ ಬಣ್ಣ ಇಷ್ಟ ಪಡುವವರಾದರೆ ನಿಮ್ಮ ಸ್ವಭಾವವು ಕ್ರಮಬದ್ಧತೆ ಮತ್ತು ವಿಶ್ವಾಸಾರ್ಹದಿಂದ ತುಂಬಿರುತ್ತದೆ. ಶಾಂತಿಪ್ರಿಯರು ಹಾಗೂ ಭಾವನಾತ್ಮಕವಾಗಿ ಸ್ಥಿರವಾಗಿರುವವರು ನೀಲಿ ಬಣ್ಣದ ಅಭಿಮಾನಿಗಳು.
ಕಪ್ಪು ಬಣ್ಣ ದೃಢ ಇಚ್ಛಾಶಕ್ತಿಯುಳ್ಳವರು. ಕಪ್ಪು ಬಣ್ಣ ಇಷ್ಟ ಪಡುವವರು ಸ್ವತಂತ್ರ್ರು. ಯಾವ ಕೆಲಸ ಮಾಡಲು ಹಿಂಜರಿಯಲ್ಲ. ಇವರು ಶಾಂತ ಸ್ಔಭಾವದವರು ಎಲ್ಲ ಸಂಬಂಧಕ್ಕೂ ಪ್ರಾಮುಖ್ಯತೆ ನೀಡುತ್ತಾರೆ. ಇವರಿಗೆ ಹೆಚ್ಚು ಫ್ಯಾಷನ್ ಪ್ರಜ್ಞೆ ಹೆಚ್ಚಿದೆ.
ಹಳದಿ ಬಣ್ಣವು ಉಷ್ಣತೆ, ಆಶಾವಾದ ಮತ್ತು ಯೌವನದ ಉತ್ಸಾಹದ ಪ್ರತೀಕವಾಗಿದೆ. ಇವರು ಎಲ್ಲೆಡೆ ನಗು ಹಾಗೂ ಚೈತನ್ಯವನ್ನು ಹರಡುತ್ತಾರೆ. ಆದರೆ ಇವರ ಈ ಬಿಸಿಲಿನಂತಹ ನಗು ಕೆಲವೊಮ್ಮೆ ಜೀವನದ ಕಷ್ಟಗಳನ್ನು ಮರೆಮಾಚಬಹುದು. ಆಂತರಿಕ ಭಾವನಾತ್ಮಕ ಭದ್ರತೆಯ ಅಗತ್ಯವಿರಬಹುದು, (ಏಜೆನ್ಸೀಸ್).