ಸಾಕಷ್ಟು ಪ್ರೊಟೀನ್ ಹೊಂದಿರುವ ಸೋಯಾಬೀನ್ ಪಲಾವ್ ಆರೋಗ್ಯಕ್ಕೂ, ರುಚಿಗೂ ಒಳ್ಳೆಯದು

pulao (1)
Published on

ಬೆಂಗಳೂರು: ಪ್ರತಿಯೊಬ್ಬರಿಗೂ ಬೆಳಗಿನ ತಿಂಡಿಗೆ ಏನು ಮಾಡಲಿ? ಎಂಬ ಚಿಂತೆ ಕಾಡುತ್ತಿರುತ್ತದೆ ಅಲ್ಲವೇ, ಆದರೆ ಸೋಯಾಬಿನ್ ಪಲಾವ್ ಅನ್ನು ನೀವು ಈ ರೀತಿ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ಬಾಯಿ ರುಚಿಗೂ ಸೂಪರ್.

ಬೇಕಾಗುವ ಪದಾರ್ಥಗಳು
1 ಆಲೂಗಡ್ಡೆ
1 ಕಪ್ ಹೂಕೋಸು
1/2 ಕಪ್ ಬಟಾಣಿ
1 ಕಪ್ ನೆನೆಸಿದ ಸೋಯಾಬಿನ್
1 tbsp ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು
1 ಹೆಚ್ಚಿದ ಈರುಳ್ಳಿ
1 ಹೆಚ್ಚಿದ ಕ್ಯಾರೆಟ್
1 ಹೆಚ್ಚಿದ ಟೊಮೆಟೊ
1 ಟೀಸ್ಪೂನ್ ಬೆಳ್ಳುಳ್ಳಿ ಚಟ್ನಿ
ರುಚಿಗೆ ತಕ್ಕಷ್ಟು ಉಪ್ಪು
1 ಟೀಸ್ಪೂನ್ ಕೊತ್ತಂಬರಿ ಪುಡಿ
1 ಟೀಸ್ಪೂನ್ ಗರಂ ಮಸಾಲಾ ಪುಡಿ
1 ಟೀಸ್ಪೂನ್ ಅರಿಶಿನ ಪುಡಿ
1 ಟೀಸ್ಪೂನ್ ತುಪ್ಪ
1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
ಅಗತ್ಯಕ್ಕೆ ತಕ್ಕಷ್ಟು ನೀರು

ಮಾಡುವ ವಿಧಾನ
* ಮೊದಲಿಗೆ, ಎಲ್ಲಾ ತರಕಾರಿಗಳನ್ನು ಕುಕ್ಕರ್‌ನಲ್ಲಿ ಸ್ವಲ್ಪ ಬೇಯಿಸಿ.
* ಈಗ ಕುಕ್ಕರ್‌ನಲ್ಲಿ ನೆನೆಸಿದ ಅಕ್ಕಿ ಮತ್ತು ಮೇಲೆ ಹೇಳಿದ ಎಲ್ಲಾ ಮಸಾಲೆಗಳನ್ನು, ತರಕಾರಿಗಳನ್ನು ಮಿಶ್ರಣ ಮಾಡಿ.
*ನಂತರ ತುಪ್ಪ, ಕೊತ್ತಂಬರಿ ಸೊಪ್ಪು ಮತ್ತು ಅಗತ್ಯಕ್ಕೆ ಅನುಗುಣವಾಗಿ ನೀರು ಸೇರಿಸಿ, ಮೂರು ಸೀಟಿ ಹೊಡೆಸಿದರೆ ಬಿಸಿ ಬಿಸಿಯಾದ ಸೋಯಾಬಿನ್ ಪಲಾವ್ ರೆಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net