ನಿಮ್ಮ ಕೈಗಳನ್ನು ಈ ರೀತಿ ಹಿಡಿದು ನಿಮ್ಮ ಆರೋಗ್ಯ ಚೆಕ್​ ಮಾಡಬಹುದು... ಹೇಗೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ... Hands

Hands
Published on

Hands : ವ್ಯಕ್ತಿಯ ಕೈಗಳನ್ನು ನೋಡಿ ಆತನ ದೈಹಿಕ ಆರೋಗ್ಯವನ್ನು ನಿರ್ಧರಿಸಬಹುದು ಎಂದರೆ ನೀವು ನಂಬುತ್ತೀರಾ? ಕೇಳುವುದಕ್ಕೆ ಇದು ವಿಚಿತ್ರ ಎನಿಸಿದರು ಕೂಡ ಇದು ಸತ್ಯ. ನಿಮ್ಮ ಕೈಗಳೇ ನಿಮ್ಮ ಆರೋಗ್ಯದ ಗುಟ್ಟನ್ನು ಬಿಚ್ಚಿಡುತ್ತದೆ. ಅದು ಹೇಗೆ ಎಂದು ನಾವೀಗ ತಿಳಿದುಕೊಳ್ಳೋಣ.

ಅಂದಹಾಗೆ, ಮಾನವ ದೇಹದಲ್ಲಿ ಕೈಗಳನ್ನು ಅತ್ಯಂತ ಮುಖ್ಯವಾದ ಅಂಗವೆಂದು ಪರಿಗಣಿಸಲಾಗುತ್ತದೆ. ಯಾವುದೇ ರೀತಿಯ ಕೆಲಸವಾದರು ಕೂಡ ನಾವು ಅದನ್ನು ನಮ್ಮ ಕೈಗಳಿಂದಲೇ ಮೊದಲು ಪ್ರಾರಂಭಿಸುತ್ತೇವೆ. ನಾವು ಮುಖ್ಯವಾಗಿ ಕೆಲಸಕ್ಕಾಗಿ ಬಳಸುವ ನಮ್ಮ ಕೈಗಳು ನಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಸಂಗತಿಗಳನ್ನು ಬಹಿರಂಗಪಡಿಸುತ್ತದೆ ಅನ್ನೋದನ್ನು ನಮ್ಮಲ್ಲಿ ಅನೇಕ ಮಂದಿಗೆ ತಿಳಿದೇ ಇಲ್ಲ.

Hands 1

ಹೌದು, ಯಕೃತ್ತು ಮತ್ತು ಥೈರಾಯ್ಡ್‌ನಂತಹ ಸಮಸ್ಯೆಗಳನ್ನು ನಮ್ಮ ಕೈಗಳ ನೋಟದಿಂದಲೇ ನಾವು ಕಂಡುಹಿಡಿಯಬಹುದು. ಅದರ ಬಗ್ಗೆ ನಾವೀಗ ವಿವರವಾಗಿ ತಿಳಿದುಕೊಳ್ಳೋಣ.

ಕೆಂಪು ಬಣ್ಣದಲ್ಲಿದ್ದರೆ...

ವ್ಯಕ್ತಿಯ ಕೈಗಳು ಗಾಢ ಕೆಂಪು ಬಣ್ಣದಲ್ಲಿದ್ದರೆ, ಅದು ಯಕೃತ್ತಿನ ಸಮಸ್ಯೆಯ ಸಂಕೇತವಾಗಿರಬಹುದು ಎಂದು ಹೇಳಲಾಗುತ್ತದೆ. ಆದಾಗ್ಯೂ, ಗರ್ಭಿಣಿಯರಿಗೆ ಕೆಂಪು ಕೈಗಳು ಇರುವುದು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಮಹಿಳೆಯರಲ್ಲಿ ತಮ್ಮ ಉಂಗುರದ ಬೆರಳು ತೋರುಬೆರಳಿಗಿಂತ ಉದ್ದವಾಗಿದ್ದರೆ ಅದು ಆಸ್ಟಿಯೊಪೊರೋಸಿಸ್​ನಿಂದ ಬಳಲುತ್ತಿರುವ ಸಾಧ್ಯತೆ ಹೆಚ್ಚು ಎಂದು ಪರಿಗಣಿಸಲಾಗುತ್ತದೆ.

Hands 2

ಕೈಗಳು ಊದಿಕೊಂಡಿದ್ದರೆ...

ಇನ್ನು ನಿಮ್ಮ ಬೆರಳುಗಳು ಯಾವಾಗಲೂ ತಣ್ಣಗಾಗಿದ್ದರೆ, ಅದು ಥೈರಾಯ್ಡ್ ಸೋಂಕಿನ ಸಂಕೇತವಾಗಿರಬಹುದು. ನಿಮ್ಮ ಬೆರಳುಗಳು ಯಾವಾಗಲೂ ಊದಿಕೊಂಡಿದ್ದರೆ, ನಿಮಗೆ ಹೈಪೋಥೈರಾಯ್ಡಿಸಮ್ ಇರಬಹುದು, ಅಂದರೆ ನಿಮ್ಮ ಥೈರಾಯ್ಡ್ ಗ್ರಂಥಿಯು ತುಂಬಾ ಕಡಿಮೆ ಹಾರ್ಮೋನುಗಳನ್ನು ಸ್ರವಿಸಿದರೆ, ನಿಮ್ಮ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ ಮತ್ತು ನಿಮ್ಮ ಕೈಗಳು ಊದಿಕೊಂಡಂತೆ ಕಾಣಿಸಬಹುದು.

ಉಗುರುಗಳಲ್ಲಿ ಗೆರೆಗಳಿದ್ದರೆ...

ಉಗುರುಗಳು ಮಸುಕಾಗಿದ್ದರೆ ಅಥವಾ ಬಿಳಿಯಾಗಿದ್ದರೆ, ನೀವು ಕಬ್ಬಿಣದ ಕೊರತೆಯಿಂದಾಗಿ ರಕ್ತಹೀನತೆಯಿಂದ ಬಳಲುತ್ತಿದ್ದೀರಿ ಎಂದರ್ಥ. ನಮ್ಮ ಉಗುರುಗಳ ಕೆಳಗೆ ಕೆಂಪು ಗೆರೆಗಳು ಕಂಡುಬಂದರೆ, ಅದು ರಕ್ತದ ಸೋಂಕು ಅಥವಾ ಹೃದಯ ಕವಾಟಗಳೊಂದಿಗಿನ ಸಮಸ್ಯೆಯನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.

Nails

ಒಂದು ವೇಳೆ ನಿಮ್ಮ ಬೆರಳುಗಳು ನೀಲಿ ಬಣ್ಣದಲ್ಲಿ ಕಾಣಿಸಿಕೊಂಡರೆ, ರಕ್ತ ಪರಿಚಲನೆ ತುಂಬಾ ಕಳಪೆಯಾಗಿದೆ ಎಂದರ್ಥ ಮತ್ತು ನೀವು ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂಬುದನ್ನು ಸೂಚಿಸುತ್ತದೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net