

| ಜಯಂತಿ 40 ವರ್ಷ, ಹೈದರಾಬಾದ್
ಸೂರ್ಯನಮಸ್ಕಾರ ಮಾಡುವಲ್ಲಿ ಮುಖ್ಯವಾಗಿ ಎರಡು ಪ್ರಕಾರಗಳಿವೆ: 1.) 12 ಹಂತಗಳಲ್ಲಿ (ಶಶಾಂಕಾಸನ ಸಹಿತ),
2.) 10 ಹಂತಗಳಲ್ಲಿ (ಶಶಾಂಕಾಸನ ರಹಿತ)
1. ನಮಸ್ಕಾರಮುದ್ರೆ (ಪ್ರಣಾಮಾಸನ, ಪ್ರಾರ್ಥನೆ ಭಂಗಿ), 2. ಅರ್ಧಚಕ್ರಾಸನ (ಊರ್ಧ್ವಾಸನ, ಹಸ್ತ ಉತ್ಥಾನಾಸನ), 3. ಉತ್ಥಾನಾಸನ, ಹಸ್ತಪಾದಾಸನ (ನಿಂತುಕೊಂಡು ಮುಂದಕ್ಕೆ ಬಾಗಿದ ಭಂಗಿ), 4. ಏಕಪಾದ ಪ್ರಸರಣಾಸನ, ಅಶ್ವಸಂಚಲನಾಸನ (ಹಲಗೆ ಭಂಗಿ), 5. ಚತುರಂಗ ದಂಡಾಸನ (ದ್ವಿಪಾದ ಪ್ರಸರಣಾಸನ), ಅಷ್ಟಾಂಗ ನಮಸ್ಕಾರ (ಎಂಟು ಕಾಲುಗಳ ಭಂಗಿ), 6. ಶಶಾಂಕಾಸನ, 7. ಸಾಷ್ಟಾಂಗ ನಮನ (ಅಷ್ಟಾಂಗ ನಮಸ್ಕಾರ), 8. ಊರ್ಧ್ವಮುಖ ಶ್ವಾನಾಸನ, ಭುಜಂಗಾಸನ (ಕೋಬ್ರಾ ಭಂಗಿ), 9. ಅಧೋಮುಖ ಶ್ವಾನಾಸನ
ಸೂರ್ಯನಮಸ್ಕಾರದ ಮೂಲ ಉದ್ದೇಶ ಒಂದೇ ಆದರೂ ವಿವಿಧ ಉಪಾಸಕರಿಂದ ಅನೇಕ ರೂಪಾಂತರಗಳು, ಪರಿವರ್ತನೆಗಳು ಬೆಳಕಿಗೆ ಬಂದಿವೆ.
ಯೋಗದ ಮಹತ್ವವನ್ನು ಸಂಕ್ಷಿಪ್ತವಾಗಿ ತಿಳಿಸಿ.
| ಗುರುದತ್ ಪುತ್ತೂರು
ಯೋಗವು ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸನ್ನು ಗುರಿಯಾಗಿರಿಸಿಕೊಳ್ಳುವ ಜೀವನವಿಧಾನವಾಗಿದೆ. ಮನುಷ್ಯನ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ - ಈ ಮೂರೂ ಸ್ತರಗಳ ಸಮತೋಲಿತ ಬೆಳವಣಿಗೆಗೆ ಯೋಗ ಸಹಾಯ ಮಾಡುತ್ತದೆ. ಪರಿಪೂರ್ಣ ಸಮತೋಲನ ಮತ್ತು ಸಾಮರಸ್ಯವನ್ನು ಸಾಧಿಸುವುದು ಮನಸ್ಸಿನಿಂದ ನಕಾರಾತ್ಮಕ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ವೈಯಕ್ತಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೆಚ್ಚಿನ ಅರಿವಿನೊಂದಿಗೆ ಬದುಕಲು, ಗಮನ ಮತ್ತು ಏಕಾಗ್ರತೆಗೆ ಯೋಗ ಸಹಾಯ ಮಾಡುತ್ತದೆ. ವಿಶೇಷವಾಗಿ ಮಕ್ಕಳಿಗೆ ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸಕ್ರಿಯಗೊಳಿಸುವ ಮೂಲಕ ದೈಹಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
‘ಚಿತ್ತದ ವೃತ್ತಿಗಳನ್ನು (ಬಯಕೆಗಳನ್ನು) ಸಂಪೂರ್ಣ ತಡೆಹಿಡಿದು ನಿಲ್ಲಿಸಿ ಏಕಾಗ್ರತೆ ಸಾಧಿಸುವುದೇ ಯೋಗ’ (ಯೋಗಃ ಚಿತ್ತವೃತ್ತಿನಿರೋಧಃ| ಪಾತಂಜಲ ಯೋಗಸೂತ್ರ: 2.196). ಮನಸ್ಸಿನಲ್ಲಿ ಬರುವ ಎಲ್ಲ ಯೋಚನೆಗಳು. ಕಲ್ಪನೆಗಳು. ಭಾವನೆಗಳು, ಇತ್ಯಾದಿಗಳನ್ನು ಸಂಪೂರ್ಣ ಲಯವಾಗಿಸಿ ಮನಸ್ಸು ಶಾಂತ ಸ್ಥಿತಿಗೆ ಹೋಗುವುದೇ ಯೋಗ.
ಯೋಗದ ನಿಜವಾದ ಸಾರವು ಬೆನ್ನುಮೂಳೆಯ ತಳದಲ್ಲಿರುವ ಜೀವಶಕ್ತಿ ಅಥವಾ ‘ಕುಂಡಲಿನಿ’ಯನ್ನು ಎತ್ತರಿಸುವುದೇ ಆಗಿದೆ. ದೈಹಿಕ-ಮಾನಸಿಕ ವ್ಯಾಯಾಮಗಳ ಮೂಲಕ ಇದನ್ನು ಸಾಧಿಸಬಹುದು. ಯೋಗವು ದೈಹಿಕ ಮಟ್ಟದಲ್ಲಿ ದೇಹವನ್ನು ಆರೋಗ್ಯವಾಗಿಡುವ ಯೋಗಭಂಗಿಗಳನ್ನು ಮತ್ತು ಆಸನಗಳನ್ನು ಒಳಗೊಂಡಿರುತ್ತದೆ. ದೈಹಿಕ ಮಟ್ಟದಲ್ಲಿ ಮನಸ್ಸನ್ನು ಶಿಸ್ತುಬದ್ಧಗೊಳಿಸಲು ಆಸನಗಳೊಂದಿಗೆ ಉಸಿರಾಟದ ವ್ಯಾಯಾಮ (ಪ್ರಾಣಾಯಾಮ) ಮತ್ತು ಧ್ಯಾನಗಳು ಸೇರಿವೆ. ಆದಾಗ್ಯೂ, ಜೀವಾತ್ಮನನ್ನು ಪರಮಾತ್ಮನಲ್ಲಿ ಸೇರಿಸುವ ಪ್ರಕ್ರಿಯೆಯೇ ಯೋಗದ ಅಂತಿಮ ಗುರಿ ಎಂದು ಶಾಂಡಿಲ್ಯ ಉಪನಿಷತ್ತು ತಿಳಿಸಿದೆ.