

ಬೆಂಗಳೂರು: ಇಂದು ವಿಶ್ವ ಆಸ್ತಮಾ ದಿನ. ಶ್ವಾಸಕೋಶಕ್ಕೆ ಸಂಬಂಧಿಸಿದ ಈ ಕಾಯಿಲೆಯು ವಿಶ್ವಾದ್ಯಂತ ಸುಮಾರು 235 ದಶಲಕ್ಷ ಜನರನ್ನು ಕಾಡುತ್ತಿದೆ ಎಂದು ಅಂದಾಜಿಸಲಾಗಿದೆ. ಈ ಕಾಯಿಲೆಯ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಲು, ರೋಗ ನಿವಾರಣೆಗೆ ಇರುವ ಔಷಧ, ಚಿಕಿತ್ಸಾ ಪದ್ಧತಿಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಪ್ರತಿವರ್ಷ ಮೇ ತಿಂಗಳ ಮೊದಲ ಮಂಗಳವಾರವನ್ನು ವರ್ಲ್ಡ್ ಅಸ್ತಮಾ ಡೇ ಎಂದು ಆಚರಿಸಲಾಗುತ್ತದೆ. ಈ ಬಾರಿ ಮೇ 2 ಅನ್ನು ಅಸ್ತಮಾ ದಿನವನ್ನಾಗಿ ಗುರುತಿಸಲಾಗಿದೆ.
ಅಸ್ತಮಾ ಯಾವುದೇ ಲಿಂಗ, ವಯಸ್ಸಿನ ಬೇಧವಿಲ್ಲದೆ ಅಟ್ಯಾಕ್ ಮಾಡುತ್ತದೆ. ಇದು ಉಸಿರಾಟದ ತೊಂದರೆ, ಎದೆಯಲ್ಲಿ ಬಿಗಿತ ಅಥವಾ ನೋವು ಕಾಣಿಸಿಕೊಳ್ಳುತ್ತದೆ. ಆಸ್ತಮಾಗೆ ಸೂಕ್ತ ಚಿಕಿತ್ಸೆ ಇಲ್ಲದಿದ್ದರೂ ಸಹ, ಅದರ ನಿರ್ವಹಣೆಯಿಂದ ಆಸ್ತಮಾವನ್ನು ತಡೆಗಟ್ಟಬಹುದು. ಆಸ್ತಮಾವನ್ನು ನಿರ್ಲಕ್ಷಿಸಿದರೆ ಆರೋಗ್ಯದ ಪರಿಸ್ಥಿತಿ ಇನ್ನಷ್ಟು ಹದಗಡೆಲಿದೆ. ಆರೋಗ್ಯಕರವಾದ ಜೀವನ ನಮ್ಮದಾಗು ಬೇಕಾದಲ್ಲಿ ಈ ಕೆಲವು ಸಲಹೆಗಳು ಅನುಸರಿಸಿ.
ಅಸ್ತಮಾದ ಸಾಮಾನ್ಯ ಲಕ್ಷಣ: ಉಸಿರಾಟದ ತೊಂದರೆ, ಉಬ್ಬಸ, ಎದೆಯ ಬಿಗಿತ ಮತ್ತು ಕೆಮ್ಮು ಕಾಲಾನಂತರದಲ್ಲಿ ಮತ್ತು ತೀವ್ರತೆಯಲ್ಲಿ ಬದಲಾಗಬಹುದು. ಕಾಲೋಚಿತ ಮತ್ತು ದೈನಂದಿನ ಬದಲಾವಣೆಗಳು ರೋಗವನ್ನು ಗುರುತಿಸುತ್ತವೆ.
ಶ್ವಾನಕೋಶವನ್ನು ಆರೋಗ್ಯವಾಗಿ ಇಟ್ಟುಕೊಳ್ಳುವ ಕ್ರಮ: