

Womens: ಒಳ್ಳೆಯ ಆಹಾರ ಪದ್ಧತಿ ಎಲ್ಲರಿಗೂ ಮುಖ್ಯವಾಗಿರುತ್ತದೆ. ಆದರೆ ಕೆಲವು ಆಹಾರಗಳು ಮಹಿಳೆಯರ ಮೇಲೆ ಪ್ರಭಾವ ಬೀರುವ ಮೂಳೆ ಮುರಿತ, ಸ್ತನ ಕ್ಯಾನ್ಸರ್, ಗರ್ಭಧಾರಣೆ ಮುಂತಾದವುಕ್ಕೆ ಒಳ್ಳೆಯದು. ಈ ಎಲ್ಲಾ ಒಳ್ಳೆಯ ಆಹಾರಗಳು ಅಧಿಕ ಪೌಷ್ಟಿಕಾಂಶಗಳನ್ನು ಹೊಂದಿರುವುದರಿಂದ ದೇಹದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ. ಅಂತಹ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ..
ಈ ಹಸಿರು ಎಲೆಗಳಲ್ಲಿ ವಿಟಮಿನ್ ಕೆ ಹೇರಳವಾಗಿದ್ದು, ಇದು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಜೊತೆ ಸೇರಿ ನಿಮ್ಮ ಮೂಳೆಗಳನ್ನು ಬಲವಾಗಿ ಮತ್ತು ಆರೋಗ್ಯವಾಗಿಡುತ್ತದೆ. ದಿನದಲ್ಲಿ ಒಂದು ಬಾರಿ ಸೇವಿಸಿದರೆ, ಶೇ.20ಕ್ಕಿಂತ ಹೆಚ್ಚು ಪ್ರಮಾಣದ ವಿಟಮಿನ್ಗಳು ದೊರಕುತ್ತದೆ.
ಶತಾವರಿಯು ಪೌಷ್ಟಿಕಾಂಶದ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಹಾಲುಣಿಸುವ ತಾಯಂದಿರಲ್ಲಿ ಎದೆ ಹಾಲು ಹೆಚ್ಚು ಶೇಖರಣೆಯಾಗಲು ಬಳಸಲಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ, ಕೊಲೆಸ್ಟ್ಟಾಲ್ನ್ನು ಕಡಿಮೆ ಮಾಡಿ, ಜೀಣರ್ಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗೇ ಅತಿಸಾರವನ್ನು ಕಡಿಮೆ ಮಾಡುತ್ತದೆ.
ಬೀನ್ಸ್ ಕಾಳುಗಳಲ್ಲಿ ಅಧಿಕ ಪ್ರೊಟೀನ್ ಇರುವುದರಿಂದ ಇವು ಹೆಚ್ಚಾಗಿ ಫೈಬರ್ ಅಂಶವನ್ನು ಹೊಂದಿರುತ್ತದೆ. ಈ ಪದಾರ್ಥ ಆರೋಗ್ಯದ ಸುಧಾರಣೆ ಮಾಡುವುದರೊಂದಿಗೆ, ಅಧಿಕ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ, ಹೃದಯ ಬಡಿತವನ್ನು ಕಡಿಮೆಗೊಳಿಸುತ್ತದೆ.
ದ್ರಾಕ್ಷಿಹಣ್ಣುಗಳು ಮಹಿಳೆಯರಲ್ಲಿರುವ ಪಾಶ್ವವಾಯುಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದು ಹೃದಯದ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಇನ್ನು ಈ ಹಣ್ಣು ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುವುದರ ಜೊತೆಗೆ ಕ್ಯಾನ್ಸರ್ ನಿರೋಧಕ ಗುಣಗಳನ್ನು ಹೊಂದಿರುತ್ತದೆ.
ಪಪಾಯಿ ಸೇವಿಸುವುದರಿಂದ ಸ್ತನ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು. ಹಾಗೆ ಕೊಲೆಸ್ಟ್ರಾಲ್, ರಕ್ತದೊತ್ತಡವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗೇ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ದೂರ ಇಡಲು ಸಹಾಯ ಮಾಡುತ್ತದೆ.
ಸಿಹಿ ಗೆಣಸು ಒಂದು ರೀತಿಯಲ್ಲಿ ಎಲ್ಲಾ ಪೌಷ್ಟಿಕಾಂಶಗಳನ್ನು ಹೊಂದಿದಂತಹ ಆಹಾರ ಪದಾರ್ಥವಾಗಿದೆ. ಇದರಲ್ಲಿ ತಾಮ್ರ, ಫೈಬರ್, ವಿಟಮಿನ್ ಬಿ6 ಪೊಟ್ಯಾಷಿಯಂ, ಕಬ್ಬಿಣ ಅಂಶಗಳು ಸೇರ್ಪಡೆಯಾಗಿರುತ್ತವೆ. ಇವುಗಳನ್ನು ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಸೇವಿಸುವುದರಿಂದ ಮಗುವಿನ ಶ್ವಾಸಕೋಶದ ಆರೋಗ್ಯ ಉತ್ತಮವಾಗಿರುತ್ತದೆ. (ಏಜೆನ್ಸೀಸ್)ಇ