ಈ ಆಹಾರಗಳ ಜೊತೆ ಏಕೆ ಮೊಟ್ಟೆ ತಿನ್ನಬಾರದು? ಇಲ್ಲಿದೆ ನೋಡಿ ನಿಮ್ಮ ಹುಬ್ಬೇರಿಸೋ ಅಚ್ಚರಿ ಸಂಗತಿ | Egg

ವಿಜಯವಾಣಿ (12)
Published on

Egg: ಮೊಟ್ಟೆಗಳು ನಿಜವಾಗಿಯೂ ಪೌಷ್ಟಿಕಾಂಶಯುಕ್ತ ಆಹಾರ. ಅದರಲ್ಲಿ ಎರಡನೇ ಮಾತಿಲ್ಲ ಬಿಡಿ. ಮೊಟ್ಟೆಯಲ್ಲಿ ಪ್ರೋಟೀನ್, ವಿಟಮಿನ್ ಬಿ12, ವಿಟಮಿನ್ ಡಿ, ಕೋಲೀನ್ ಮತ್ತು ಕಬ್ಬಿಣದಂತಹ ಶಕ್ತಿಶಾಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಆದ್ದರಿಂದ, ಮೊಟ್ಟೆಗಳು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದಾಗ್ಯೂ, ಇವನ್ನು ಕೆಲವು ಆಹಾರಗಳೊಂದಿಗೆ ತಿನ್ನಬಾರದು ಎಂದು ಹಲವರು ಹೇಳುತ್ತಾರೆ. ಆದರೆ, ಯಾಕೆಂದು ಮಾತ್ರ ಸೂಕ್ತ ಕಾರಣಗಳನ್ನು ತಿಳಿಸೋದಿಲ್ಲ. ಇದು ಕೆಲವರಲ್ಲಿ ತೀವ್ರ ಗೊಂದಲವನ್ನು ಹುಟ್ಟುಹಾಕಿವೆ.

ಚಿಕನ್​ ಜೊತೆಗೆ ಮೊಟ್ಟೆ, ಹಾಲು ಮತ್ತು ಮೊಟ್ಟೆಯನ್ನು ಒಟ್ಟಿಗೆ ಸೇವಿಸಬಾರದು. ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಹಲವಾರು ತೊಂದರೆಗಳು ಕಾಡುತ್ತದೆ ಎಂಬುದು ಬಹುತೇಕರ ಮಾತು. ಅಸಲಿಗೆ, ಇದರ ಹಿಂದಿರುವ ಕಾರಣವೇನು? ಯಾಕಾಗಿ ಮೊಟ್ಟೆಯನ್ನು ಇಂತಹ ಆಹಾರಗಳೊಂದಿಗೆ ಸೇವಿಸಬಾರದು? ಎಂಬ ಗೊಂದಲ, ಪ್ರಶ್ನೆಗಳಿಗೆ ಹೀಗಿದೆ ನೋಡಿ ಸರಳ ಉತ್ತರ. ಆಯುರ್ವೇದ ಮತ್ತು ಆಧುನಿಕ ಪೌಷ್ಟಿಕಾಂಶದ ವಿಶ್ಲೇಷಣೆಗಳ ಪ್ರಕಾರ, ಮೊಟ್ಟೆಗಳೊಂದಿಗೆ ಕೆಲವು ಆಹಾರಗಳನ್ನು ತಿನ್ನುವುದು ಜೀರ್ಣಾಂಗ ವ್ಯವಸ್ಥೆಯನ್ನು ಅಡ್ಡಿಪಡಿಸುವುದಲ್ಲದೆ, ವಿಷವನ್ನು ಉತ್ಪಾದಿಸುತ್ತದೆ ಮತ್ತು ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗಬಹುದು.

1. ಹಾಲು ಮತ್ತು ಮೊಟ್ಟೆ

ಹಾಲು ಒಂದು ಶಕ್ತಿಶಾಲಿ ಸಾತ್ವಿಕ ಆಹಾರ. ಆದ್ದರಿಂದ, ಈ ಎರಡು ವಿಭಿನ್ನ ಸ್ವಭಾವಗಳ ಸಂಯೋಜನೆ. ಮೊಟ್ಟೆ ಮತ್ತು ಹಾಲನ್ನು ಒಟ್ಟಿಗೆ ಸೇವಿಸುವುದರಿಂದ ದೇಹದಲ್ಲಿ ವಿಷದ ಉತ್ಪಾದನೆಗೆ ಕಾರಣವಾಗಬಹುದು. ಇದು ಅಜೀರ್ಣವನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ, ಅಲರ್ಜಿ, ಚರ್ಮದ ಸಮಸ್ಯೆಗಳು ಮತ್ತು ಜೀರ್ಣಕಾರಿ ಸಮಸ್ಯೆಗಳು ಕಾಡಬಹುದು.

2. ಸಿಹಿ ಹಣ್ಣು

ಪಪ್ಪಾಯಿ, ಬಾಳೆಹಣ್ಣು ಮತ್ತು ದ್ರಾಕ್ಷಿಯಂತಹ ಸಿಹಿ ಹಣ್ಣುಗಳನ್ನು ತಿಂದ ಕೆಲ ನಿಮಿಷಗಳ ಬಳಿಕ ಮೊಟ್ಟೆಗಳನ್ನು ತಿನ್ನಬಾರದು. ಇವು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ವಿಶೇಷವಾಗಿ ಬಾಳೆಹಣ್ಣು ಮತ್ತು ಪಪ್ಪಾಯಿಯನ್ನು ಮೊಟ್ಟೆಯೊಂದಿಗೆ ತಿನ್ನುವುದರಿಂದ ಆಮ್ಲೀಯತೆ, ದೌರ್ಬಲ್ಯ ಮತ್ತು ಚರ್ಮದಲ್ಲಿ ಬ್ಲ್ಯಾಕ್ ಸ್ಪಾಟ್​ನಂತಹ ಸಮಸ್ಯೆಗಳು ಕಾಡಬಹುದು.

3. ಮಾಂಸ

ಮೊಟ್ಟೆ ಮತ್ತು ಮಾಂಸ ಎರಡೂ ಪ್ರೋಟೀನ್‌ನಲ್ಲಿ ಸಮೃದ್ಧವಾಗಿವೆ. ಹೀಗಾಗಿ, ಅವುಗಳನ್ನು ಒಟ್ಟಿಗೆ ತಿನ್ನುವುದರಿಂದ ದೇಹಕ್ಕೆ ಏಕಕಾಲದಲ್ಲಿ ಹೆಚ್ಚಿನ ಪ್ರೋಟೀನ್ ಒದಗುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳು, ಗ್ಯಾಸ್​ ಮತ್ತು ಹೊಟ್ಟೆ ನೋವಿನಂತಹ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು.

4. ಮಸಾಲೆಯುಕ್ತ ಆಹಾರ

ಮೊಟ್ಟೆಗಳನ್ನು ಮಸಾಲೆಯುಕ್ತ ಆಹಾರದೊಂದಿಗೆ ತಿನ್ನುವುದು ಒಳ್ಳೆಯದಲ್ಲ. ವಿಶೇಷವಾಗಿ, ಹೆಚ್ಚಿನ ಪ್ರಮಾಣದ ಮೆಣಸು ಮತ್ತು ಹಸಿರು ಮೆಣಸಿನಕಾಯಿ ಮಿಶ್ರಣಗೊಂಡ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ. ಇದರೊಂದಿಗೆ ಮೊಟ್ಟೆ ಸೇವನೆ ಖಂಡಿತ ಅಪಾಯ ಕಟ್ಟಿಟ್ಟಬುತ್ತಿ. ಇದು ಪಿತ್ತರಸ ದೋಷವನ್ನು ಪ್ರಚೋದಿಸುತ್ತದೆ ಮತ್ತು ಗ್ಯಾಸ್ಟ್ರಿಕ್, ಆಮ್ಲೀಯತೆ ಮತ್ತು ಉಷ್ಣಾಂಶ ಸಮಸ್ಯೆ ನೀಡುತ್ತದೆ.

5. ಮೊಸರು

ಮೊಸರಿನೊಂದಿಗೆ ಮೊಟ್ಟೆ ಬೆರೆಸಬಾರದು. ಮೊಸರು ತಂಪಾಗಿಸುವ ಸ್ವಭಾವವನ್ನು ಹೊಂದಿದೆ. ಅದೇ ಮೊಟ್ಟೆಗಳು ಬಿಸಿ ಸ್ವಭಾವವನ್ನು ಹೊಂದಿವೆ. ಈ ಎರಡು ವಿರುದ್ಧ ಸ್ವಭಾವಗಳಿಂದಾಗಿ, ದೇಹದಲ್ಲಿ ಅಸಮತೋಲನ ಉಂಟಾಗಬಹುದು ಮತ್ತು ಚರ್ಮಕ್ಕೆ ಸಂಬಂಧಿಸಿದ ಅಸ್ವಸ್ಥತೆಗಳು ಕಾಡಬಹುದು.

ಏನೆಲ್ಲ ಮುನ್ನೆಚ್ಚರಿಕೆ?

  • ಮೊಟ್ಟೆಯನ್ನು ತಿನ್ನಲು ಬಯಸಿದಾಗ, ಬೇಯಿಸಿದ ಮೊಟ್ಟೆಯನ್ನು ಹೆಚ್ಚು ತಿನ್ನುವುದು ಉತ್ತಮ.
  • ಮೊಟ್ಟೆ ತಿಂದ ಬಳಿಕ ಕನಿಷ್ಠ 2 ಗಂಟೆಗಳ ಕಾಲ ಹಾಲು, ಮೊಸರು ಮತ್ತು ಸಿಹಿ ಹಣ್ಣುಗಳನ್ನು ಸೇವಿಸಬೇಡಿ.
  • ಮೊಟ್ಟೆಗಳ ಜೊತೆಗೆ ಹೆಚ್ಚಿನ ಪ್ರೋಟೀನ್ ಇರುವ ಆಹಾರವನ್ನು ಸೇವಿಸುವುದು ಆದಷ್ಟು ತ್ಯಜಿಸಿ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net