Kunti Curse : ಹೆಣ್ಣು ಮಕ್ಕಳ ಹತ್ತಿರ ಗುಟ್ಟು ಇಟ್ಟರೆ, ಗುಡ್ಡದ ಮೇಲೆ ನೀರು ಇಟ್ಟಂಗೆ... ಹೆಣ್ಣು ಮಕ್ಕಳ ಮನೇಲಿ ಗುಟ್ಟು ಇಟ್ಟರೆ, ಮನೆಯ ಮೇಲೆ ಗುಟ್ಟು ಇಟ್ಟಂಗೆ ಎಂಬ ಗಾದೆ ಮಾತುಗಳನ್ನು ನೀವು ಕೇಳಿರಬಹುದು. ಇಡೀ ಊರಿಗೆ ಒಂದು ವಿಚಾರ ಮುಟ್ಟಿಸುವುದಾದರೆ, ಆ ಊರಿನ ಓರ್ವ ಹೆಣ್ಣು ಮಗಳಿಗೆ ಹೇಳಿದರೆ ಸಾಕು ಇಡೀ ಊರಿಗೆ ಆ ವಿಷಯ ಮುಟ್ಟುತ್ತದೆ ಎಂದು ಹಿರಿಯರು ಹೇಳ್ತಾರೆ. ಅಂದರೆ, ಮಹಿಳೆಯರು ಯಾವುದೇ ವಿಚಾರಗಳನ್ನು ತಮ್ಮ ಬಳಿ ಗುಟ್ಟಾಗಿ ಇಟ್ಟುಕೊಳ್ಳಲ್ಲ. ಹೆಣ್ಣಿಗೆ ಈ ಗುಣ ಲೌಕಿಕವಾಗಿ ಬಂದಿದ್ದಲ್ಲ, ಇದರ ಹಿಂದೆ ಒಂದು ಪೌರಾಣಿಕ ಆಧಾರ ಕೂಡ ಇದೆ ಎಂಬುದು ನಿಮಗೆ ತಿಳಿದಿದೆಯೇ? ಈ ನಂಬಿಕೆಯ ಮೂಲ ಕತೆ ಪ್ರಪಂಚದ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಅಡಗಿದೆ. ಹೌದು, ಪಾಂಡವರ ತಾಯಿ ಮತ್ತು ಮಹಾನ್ ಋಷಿ ಕುಂತಿ ದೇವಿ ನೀಡಿದ ಶಾಪವು ಈ ನಂಬಿಕೆಗೆ ಕಾರಣವಾಗಿದೆ ಅನ್ನೋ ಮಾತು ಕೂಡ ಇದೆ. ಹಾಗಾದರೆ, ಆ ಕಥೆ ಏನು? ಆ ಶಾಪದ ಹಿಂದಿನ ಅರ್ಥವೇನೆಂದು ನಾವೀಗ ತಿಳಿದುಕೊಳ್ಳೋಣ.