95 ಎಸೆತಗಳಲ್ಲಿ 14 ಸಿಕ್ಸರ್​, 171 ರನ್​... ಮತ್ತೊಮ್ಮೆ ವೈಭವ್​ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್! Vaibhav Suryavanshi ​​

ಟೀಮ್ ಇಂಡಿಯಾದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ
ಟೀಮ್ ಇಂಡಿಯಾದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್​
  • 2025ರ ಅಂಡರ್-19 ಏಷ್ಯಾ ಕಪ್‌ ಪಂದ್ಯದಲ್ಲಿ ಯುಎಇ ವಿರುದ್ಧ ವೈಭವ್​ ಶತಕ
  • 95 ಎಸೆತಗಳಲ್ಲಿ 14 ಸಿಕ್ಸರ್​ ಮತ್ತು 9 ಬೌಂಡರಿಗಳ ನೆರವಿನಿಂದ 175 ರನ್ ಗಳಿಸಿದ ಸೂರ್ಯವಂಶಿ
Vaibhav Suryavanshi : ಟೀಮ್ ಇಂಡಿಯಾದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ತಮ್ಮ ಅಬ್ಬರದ ಬ್ಯಾಟಿಂಗ್​ನಿಂದ ಮತ್ತೊಮ್ಮೆ ವಿನಾಶ ಸೃಷ್ಟಿಸಿದ್ದಾರೆ. ಹೌದು, 2025ರ ಅಂಡರ್-19 ಏಷ್ಯಾ ಕಪ್‌ನ ಭಾಗವಾಗಿ ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಭಾರತ ಮತ್ತು ಯುಎಇ ನಡುವಿನ ಪಂದ್ಯದಲ್ಲಿ ವೈಭವ್ ಮತ್ತೊಂದು ಬಿರುಗಾಳಿಯ ಶತಕ ಬಾರಿಸಿದ್ದಾರೆ.
ಕೇವಲ 95 ಎಸೆತಗಳಲ್ಲಿ 14 ಸಿಕ್ಸರ್​ ಮತ್ತು 9 ಬೌಂಡರಿಗಳ ನೆರವಿನಿಂದ 175 ರನ್ ಗಳಿಸಿ ಮತ್ತೊಂದು ದಾಖಲೆಯನ್ನು ಸೂರ್ಯವಂಶಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 14 ವರ್ಷದ ವೈಭವ್ 30 ಎಸೆತಗಳಲ್ಲಿ ಅರ್ಧಶತಕ ಗಳಿಸಿದರೆ, ಅವರು ಕೇವಲ 56 ಎಸೆತಗಳಲ್ಲಿ ಶತಕದ ಗಡಿ ದಾಟಿದರು.
ಎರಡನೇ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ವೈಭವ್​ ತಮ್ಮ ರನ್​ ಖಾತೆಯನ್ನು ತೆರೆದರು. ಮೂರನೇ ಓವರ್‌ನಲ್ಲಿ ಆಯುಷ್ ಮಾತ್ರೆ ವಿಕೆಟ್ ಒಪ್ಪಿಸಿದರು ಕೂಡ ವೈಭವ್, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಅನ್ನು ಮುಂದುವರಿಸಿದರು. ಯುಎಇ ಬೌಲರ್‌ಗಳ ಮೇಲೆ ಮನಬಂದಂತೆ ದಾಳಿ ಮಾಡಿದ ವೈಭವ್​, 30 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
ಅರ್ಧಶತಕದ ಬಳಿಕ ಇನ್ನಷ್ಟು ಆಕ್ರಮಣಕಾರಿ ಆಟವಾಡಿದ ವೈಭವ್​, ಕೇವಲ 26 ಎಸೆತಗಳಲ್ಲಿ ಮತ್ತೊಂದು ಅರ್ಧಶತಕ ಗಳಿಸಿದರು. ಒಟ್ಟು 56 ಎಸೆತಗಳಲ್ಲಿ ಸೆಂಚುರಿ ಸಿಡಿಸಿದರು. ಶತಕದ ನಂತರವೂ ವೈಭವ್ ಆರ್ಭಟಕ್ಕೆ ಬ್ರೇಕ್​ ಬೀಳಲಿಲ್ಲ. ಬೌಂಡರಿ ಮತ್ತು ಸಿಕ್ಸರ್​ಗಳ ಸುರಿಮಳೆಗೈದರು. 150 ರನ್ ಗಳಿಸಿದ ವೈಭವ್​, ದ್ವಿಶತಕ ಕಡೆಗೆ ದಾಪುಗಾಲು ಇಟ್ಟಿದ್ದರು. ಆದರೆ, ಅಂತಿಮವಾಗಿ 175 ರನ್‌ಗಳಿಗೆ ಔಟ್​ ಆಗಿ ಪೆವಿಲಿಯನ್ ತಲುಪಿದರು.
ಅಂದಹಾಗೆ, ಯುಎಇ ಫೀಲ್ಡರ್‌ಗಳು ಮಾಡಿದ ತಪ್ಪುಗಳ ಲಾಭವನ್ನು ಪಡೆದುಕೊಂಡು ವೈಭವ್​ ಶತಕವನ್ನು ಗಳಿಸಿದರು. ಏಕೆಂದರೆ, 28 ಮತ್ತು 85 ರನ್‌ ಆಗಿದ್ದಾಗ ವೈಭವ್​ ಅವರಿಗೆ ಎರಡು ಜೀವದಾನ ಸಿಕ್ಕಿತು.
ಅಂದಹಾಗೆ, ಟೀಮ್​ ಇಂಡಿಯಾದ ಭವಿಷ್ಯದ ಆಟಗಾರ ವೈಭವ್ ಸೂರ್ಯವಂಶಿ ಸತತ ಶತಕಗಳೊಂದಿಗೆ ಅಬ್ಬರಿಸುತ್ತಿದ್ದಾರೆ. ಇತ್ತೀಚೆಗೆ, ಬಿಹಾರ ಪರ ಆಡುವಾಗ, ಈಡನ್ ಗಾರ್ಡನ್ಸ್‌ನಲ್ಲಿ ಮಹಾರಾಷ್ಟ್ರ ವಿರುದ್ಧ 61 ಎಸೆತಗಳಲ್ಲಿ ಅಜೇಯ 108 ರನ್ ಗಳಿಸಿದರು. ಈ ಶತಕದೊಂದಿಗೆ ಇತಿಹಾಸ ಸೃಷ್ಟಿಸಿದರು. ಪಂದ್ಯಾವಳಿಯ ಇತಿಹಾಸದಲ್ಲೇ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂದಹಾಗೆ, ವೈಭವ್ ಅವರ ಸ್ಫೋಟಕ ಆಟದಿಂದಾಗಿ ಭಾರತವು 19 ವರ್ಷದೊಳಗಿನವರ ಏಷ್ಯಾ ಕಪ್ 2025ರಲ್ಲಿ ಬೃಹತ್ ಸ್ಕೋರ್‌ನತ್ತ ಸಾಗುತ್ತಿದೆ. 38 ಓವರ್‌ಗಳ ಕೊನೆಯಲ್ಲಿ ಭಾರತ 3 ವಿಕೆಟ್‌ಗಳ ನಷ್ಟಕ್ಕೆ 294 ರನ್ ಗಳಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net