ರಾತ್ರಿ ಹೊತ್ತು ಒಬ್ಬರೇ ಇದ್ದಾಗ ಯಾರೋ ನಿಮ್ಮನ್ನು ನೋಡುತ್ತಿರುವಂತೆ ಅನಿಸುತ್ತದೆಯೇ? ಇದರ ಹಿಂದಿರೋ ಮಿದುಳಿನ ರಹಸ್ಯವೇನು? Brain

ನಮ್ಮ ಮಿದುಳು ಯಾವಾಗಲೂ ಸುತ್ತಮುತ್ತಲಿನ ಪರಿಸರವನ್ನು ಗಮನಿಸುತ್ತಲೇ ಇರುತ್ತದೆ. ನಾವು ಪ್ರತ್ಯೇಕವಾಗಿ ಗಮನಿಸದ ಸಣ್ಣ ಶಬ್ದ, ನೆರಳಿನ ಬದಲಾವಣೆ, ಗಾಳಿಯ ಚಲನೆ, ಬಾಗಿಲಿನ ಸದ್ದು ಹೀಗೆ ಹಲವು ವಿಷಯಗಳು ಮಿದುಳಿಗೆ ತಲುಪುತ್ತವೆ. ಹಗಲಿನಲ್ಲಿ
Brain
ಸಾಂದರ್ಭಿಕ ಚಿತ್ರAI Generated Image
Published on

Brain : ರಾತ್ರಿ ಸಮಯ. ಮನೆಯಲ್ಲಿ ಎಲ್ಲರೂ ಮಲಗಿದ್ದಾರೆ. ನೀವು ಮಾತ್ರ ಎಚ್ಚರವಾಗಿದ್ದೀರಿ. ಮೊಬೈಲ್‌ ನೋಡುತ್ತಾ ಕುಳಿತಿರುವಾಗ ಇದ್ದಕ್ಕಿದ್ದಂತೆ ಯಾರೋ ನಿಮ್ಮನ್ನು ಗಮನಿಸುತ್ತಿರುವಂತೆ ಅನಿಸುತ್ತದೆ. ಒಂದು ಕ್ಷಣ ಮೊಬೈಲ್‌ ಬದಿಗಿಟ್ಟು ಸುತ್ತಲೂ ನೋಡುತ್ತೀರಿ. ಆದರೆ, ಯಾರೂ ಕಾಣಿಸುವುದಿಲ್ಲ. ಮತ್ತೆ ಮೊಬೈಲ್‌ ಕೈಗೆತ್ತಿಕೊಳ್ಳುತ್ತೀರಿ. ಆದರೆ, ಕೆಲವೇ ಕ್ಷಣಗಳಲ್ಲಿ ಅದೇ ಭಾವನೆ ಮತ್ತೊಮ್ಮೆ ಬರುತ್ತದೆ. ಯಾರಾದರೂ ಹಿಂದೆ ನಿಂತಿದ್ದಾರಾ? ಎಂಬ ಅನುಮಾನದಿಂದ ಮತ್ತೊಮ್ಮೆ ತಿರುಗಿ ನೋಡುತ್ತೀರಿ. ಅಲ್ಲಿಯೂ ಯಾರೂ ಇರುವುದಿಲ್ಲ. ಇದು ಕೇವಲ ಭಯವೇ? ಅಥವಾ ನಮ್ಮ ಸುತ್ತ ನಿಜವಾಗಿಯೂ ಏನಾದರೂ ಬದಲಾವಣೆ ಆಗಿರುತ್ತದೆಯೇ? ಇಂತಹ ಅನುಭವದ ಹಿಂದೆ ನಮ್ಮ ಮಿದುಳಿನ ಕೆಲಸವೇ ಒಂದು ಪ್ರಮುಖ ಕಾರಣ. ಅದೇನೆಂದು ನಾವೀಗ ತಿಳಿದುಕೊಳ್ಳೋಣ.

ನಮ್ಮ ಮಿದುಳು ಯಾವಾಗಲೂ ಸುತ್ತಮುತ್ತಲಿನ ಪರಿಸರವನ್ನು ಗಮನಿಸುತ್ತಲೇ ಇರುತ್ತದೆ. ನಾವು ಪ್ರತ್ಯೇಕವಾಗಿ ಗಮನಿಸದ ಸಣ್ಣ ಶಬ್ದ, ನೆರಳಿನ ಬದಲಾವಣೆ, ಗಾಳಿಯ ಚಲನೆ, ಬಾಗಿಲಿನ ಸದ್ದು ಹೀಗೆ ಹಲವು ವಿಷಯಗಳು ಮಿದುಳಿಗೆ ತಲುಪುತ್ತವೆ. ಹಗಲಿನಲ್ಲಿ ಇವೆಲ್ಲವೂ ಸಾಮಾನ್ಯವಾಗಿ ಕಾಣಿಸುತ್ತವೆ. ಆದರೆ, ರಾತ್ರಿ ಸಮಯದಲ್ಲಿ ಬೆಳಕು ಕಡಿಮೆಯಾದಾಗ ಪರಿಸ್ಥಿತಿ ಬದಲಾಗುತ್ತದೆ. ಕಣ್ಣಿಗೆ ಸಿಗುವ ಮಾಹಿತಿ ಕಡಿಮೆಯಾಗುತ್ತದೆ. ಆಗ ಮೆದುಳು ಸಿಕ್ಕಿರುವ ಅಲ್ಪ ಮಾಹಿತಿಯನ್ನು ಆಧರಿಸಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಅಷ್ಟೇ ಅಲ್ಲ, ಕತ್ತಲಿನಲ್ಲಿ ನೇತಾಡುತ್ತಿರುವ ಬಟ್ಟೆ ಮನುಷ್ಯನ ಆಕಾರದಂತೆ ಕಾಣಬಹುದು. ಕಿಟಕಿಯ ಪರದೆ ಸ್ವಲ್ಪ ಅಲುಗಿದರೂ ಯಾರೋ ನಡೆದಂತೆ ಭಾಸವಾಗಬಹುದು. ಒಂದು ಸಣ್ಣ ಶಬ್ದವೂ ಹತ್ತಿರದಿಂದ ಬಂದಂತೆ ಅನಿಸಬಹುದು.

Also Read
ಈ 5 ತಕರಾರಿಗಳನ್ನು ನಿಮ್ಮ ಆರೋಗ್ಯದಲ್ಲಿ ಸೇರಿಸಿದರೆ ಹೃದಯಾಘಾತ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ...! Heart Attack
Brain

ಭಯ ಬಂದಾಗ ಸಣ್ಣ ಶಬ್ದವೂ ದೊಡ್ಡದು ಅನಿಸುತ್ತದೆ

ನಾವು ಹೆದರಿದಾಗ ನಮ್ಮ ಗಮನ ಸುತ್ತಮುತ್ತಲಿನ ಅಪಾಯದ ಸೂಚನೆಗಳ ಕಡೆಗೆ ಹೆಚ್ಚು ಹೋಗುತ್ತದೆ. ಸಾಮಾನ್ಯವಾಗಿ ಗಮನಿಸದ ಶಬ್ದಗಳಿಗೂ ಆಗ ಹೆಚ್ಚು ಮಹತ್ವ ಸಿಗುತ್ತದೆ. ಉದಾಹರಣೆಗೆ, ರಾತ್ರಿ ಫ್ಯಾನ್‌ನ ಸದ್ದು ಪ್ರತಿದಿನವೂ ಇರುತ್ತದೆ. ಆದರೆ, ನೀವು ಭಯದಲ್ಲಿದ್ದಾಗ ಅದೇ ಸದ್ದು ವಿಚಿತ್ರವಾಗಿ ಅನಿಸಬಹುದು. ಹೊರಗೆ ಹೋಗುವ ವಾಹನದ ಶಬ್ದವೂ ಯಾರೋ ಬಾಗಿಲಿನ ಬಳಿ ಬಂದಂತೆ ಭಾಸವಾಗಬಹುದು. ಅಂದರೆ ಶಬ್ದ ಬದಲಾಗಿರಬೇಕೆಂದಿಲ್ಲ, ಅದನ್ನು ನಾವು ಅರ್ಥೈಸಿಕೊಳ್ಳುವ ರೀತಿ ಬದಲಾಗಿರಬಹುದು.

ಒಂಟಿಯಾಗಿದ್ದಾಗ ಮನಸ್ಸು ಇನ್ನಷ್ಟು ಎಚ್ಚರವಾಗುತ್ತದೆ

ನಮ್ಮ ಸುತ್ತ ಜನರಿದ್ದಾಗ ಅವರ ಮಾತು, ಚಲನೆ ಮತ್ತು ಸಾಮಾನ್ಯ ಚಟುವಟಿಕೆಗಳು ನಮ್ಮ ಗಮನವನ್ನು ಬೇರೆಡೆ ಇಡುತ್ತವೆ. ಆದರೆ, ಒಬ್ಬರೇ ಇದ್ದಾಗ ಸಣ್ಣ ವಿಷಯಗಳಿಗೂ ಗಮನ ಹೋಗುತ್ತದೆ. ಇದೇ ಕಾರಣಕ್ಕೆ ರಾತ್ರಿ ಒಬ್ಬರೇ ಮನೆಯಲ್ಲಿ ಇದ್ದಾಗ ಫ್ರಿಡ್ಜ್​ ಆನ್ ಆಗುವ ಸದ್ದು, ಕಿಟಕಿಯ ಸಣ್ಣ ಶಬ್ದ ಅಥವಾ ಮೇಲ್ಛಾವಣಿಯಿಂದ ಬರುವ ಸದ್ದು ಕೂಡ ಹೆಚ್ಚು ಗಮನ ಸೆಳೆಯಬಹುದು. ಯಾರೋ ಇದ್ದಾರೆ ಎಂಬ ಭಾವನೆ ಕೆಲವೊಮ್ಮೆ ಇಲ್ಲದ ವ್ಯಕ್ತಿಯನ್ನೇ ನಮ್ಮ ಮನಸ್ಸಿನಲ್ಲಿ ಸೃಷ್ಟಿಸಬಹುದು.

ಭಯಾನಕ ಸಿನಿಮಾ ನೋಡಿದ ನಂತರ ಏಕೆ ಹೆಚ್ಚಾಗುತ್ತದೆ?

ಭಯಾನಕ ಸಿನಿಮಾ ನೋಡಿದ ತಕ್ಷಣ ಕತ್ತಲಿನ ಕೋಣೆಯಲ್ಲಿ ಒಬ್ಬರೇ ಇರಲು ಕೆಲವರಿಗೆ ಕಷ್ಟವಾಗುತ್ತದೆ. ಸಿನಿಮಾದ ದೃಶ್ಯಗಳು ಮುಗಿದಿದ್ದರೂ ಮನಸ್ಸಿನಲ್ಲಿನ ಭಯ ತಕ್ಷಣ ಮುಗಿಯುವುದಿಲ್ಲ. ನಾವು ಈಗಾಗಲೇ ಭಯದ ಸ್ಥಿತಿಯಲ್ಲಿದ್ದರೆ, ಸಾಮಾನ್ಯ ನೆರಳು ಅಥವಾ ಶಬ್ದಕ್ಕೂ ಮಿದುಳು ಹೆಚ್ಚಿನ ಅರ್ಥ ನೀಡಬಹುದು. ಅದಕ್ಕಾಗಿಯೇ ಸಿನಿಮಾ ನೋಡಿದ ನಂತರ ಬಾತ್‌ರೂಮ್‌ಗೆ ಹೋಗುವಾಗಲೂ ಹಿಂದೆ ಯಾರೋ ಬರುತ್ತಿರುವಂತೆ ಅನಿಸುವ ಅನುಭವ ಕೆಲವರಿಗೆ ಆಗುತ್ತದೆ.

ಕೆಲವೊಮ್ಮೆ ನಮ್ಮ ಮನಸ್ಸೇ ನಮ್ಮನ್ನು ಹೆದರಿಸುತ್ತದೆ

ಇಲ್ಲಿ ಆಸಕ್ತಿದಾಯಕ ವಿಷಯವೆಂದರೆ, ಯಾರೋ ನೋಡುತ್ತಿದ್ದಾರೆ ಎಂಬ ಭಾವನೆ ಬಂದಾಗ ನಿಜವಾಗಿಯೂ ಯಾರಾದರೂ ನೋಡುತ್ತಿದ್ದಾರೆ ಎಂಬುದಕ್ಕೆ ಅದು ಸಾಕ್ಷಿಯಲ್ಲ. ನಮ್ಮ ಮಿದುಳು ನಮ್ಮನ್ನು ರಕ್ಷಿಸಲು ಯಾವಾಗಲೂ ಸಿದ್ಧವಾಗಿರುತ್ತದೆ. ಅಪಾಯವಿದೆಯೋ ಇಲ್ಲವೋ ಎಂಬುದನ್ನು ಬೇಗ ಅರ್ಥಮಾಡಿಕೊಳ್ಳಲು ಅದು ಕೆಲವೊಮ್ಮೆ ಸಾಮಾನ್ಯ ಮಾಹಿತಿಯನ್ನೇ ಅಪಾಯದ ಸೂಚನೆಯಂತೆ ತೆಗೆದುಕೊಳ್ಳಬಹುದು.

Also Read
ಲೈಫ್​ನಲ್ಲಿ ಅಂಕಗಳೇ ಅಂತಿಮ? ಕೌಶಲಗಳನ್ನು ಕಲಿತರೆ ಯಶಸ್ಸು ಕಟ್ಟಿಟ್ಟಬುತ್ತಿನಾ? ಇಲ್ಲಿದೆ ಉಪಯುಕ್ತ ಮಾಹಿತಿ | Skills
Brain

ಹೀಗಾಗಿ ಮುಂದಿನ ಬಾರಿ ಒಬ್ಬರೇ ಇದ್ದಾಗ ಇದ್ದಕ್ಕಿದ್ದಂತೆ ಯಾರೋ ನಿಮ್ಮನ್ನು ನೋಡುತ್ತಿರುವಂತೆ ಅನಿಸಿದರೆ, ತಕ್ಷಣ ಭಯಪಡುವ ಅಗತ್ಯವಿಲ್ಲ. ಮೊದಲು ಬೆಳಕು ಹಾಕಿ, ಸುತ್ತಲೂ ನೋಡಿ. ಬಹುಶಃ ನೀವು ಗಮನಿಸದಿದ್ದ ಒಂದು ಸಣ್ಣ ಶಬ್ದ, ನೆರಳು ಅಥವಾ ವಸ್ತುವಿನ ಚಲನೆಯೇ ಆ ಅನುಭವಕ್ಕೆ ಕಾರಣವಾಗಿರಬಹುದು. ಆದರೆ ಈ ರೀತಿಯ ಅನುಭವ ಪದೇಪದೆ ಆಗುತ್ತಿದ್ದು, ಒಂಟಿಯಾಗಿರುವಾಗ ಮಾತ್ರವಲ್ಲದೆ ಬೇರೆ ಸಂದರ್ಭಗಳಲ್ಲಿಯೂ ತೀವ್ರವಾಗಿ ಕಾಡುತ್ತಿದ್ದರೆ ಅಥವಾ ದಿನನಿತ್ಯದ ಜೀವನಕ್ಕೆ ತೊಂದರೆ ಕೊಡುತ್ತಿದ್ದರೆ, ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.

ಕೆಲವೊಮ್ಮೆ ನಮ್ಮ ಸುತ್ತ ಯಾರೂ ಇರುವುದಿಲ್ಲ. ಆದರೂ ಯಾರೋ ಇದ್ದಾರೆ ಎಂಬ ಭಾವನೆ ಬರುತ್ತದೆ. ಆ ಕ್ಷಣದಲ್ಲಿ ನಮ್ಮನ್ನು ಹೆದರಿಸುವುದು ಹೊರಗಿನ ಯಾರೂ ಅಲ್ಲ ನಮ್ಮ ಸುತ್ತಲಿನ ಸಣ್ಣ ಸೂಚನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ನಮ್ಮದೇ ಮಿದುಳು, (ಏಜೆನ್ಸೀಸ್​​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net