ಅಂದಹಾಗೆ, 'ಫುಡ್ ಡಿವೋರ್ಸ್' (Food Divorce) ಎಂದರೆ ಗಂಡ-ಹೆಂಡತಿ ಅಥವಾ ಸಂಗಾತಿಗಳ ನಡುವಿನ ಬಾಂಧವ್ಯ ಅಥವಾ ಸಂಬಂಧದ ವಿಚ್ಛೇದನವಲ್ಲ, ಬದಲಿಗೆ ಒಂದೇ ಮನೆಯಲ್ಲಿದ್ದುಕೊಂಡು ಪ್ರತಿದಿನದ ಆಹಾರದ ಆದ್ಯತೆಗಳಿಗಾಗಿ ಅನಗತ್ಯ ರಾಜಿ ಮಾಡಿಕೊಳ್ಳದಿರುವ ಒಂದು ಮುಕ್ತ ಹಾಗೂ ಪ್ರಾಯೋಗಿಕ ನಿರ್ಧಾರವಾಗಿದೆ. ಉದಾಹರಣೆಗೆ, ಒಬ್ಬರಿಗೆ ಚಪಾತಿ-ಪಲ್ಯ ಇಷ್ಟವಿದ್ದರೆ ಮತ್ತೊಬ್ಬರಿಗೆ ನೂಡಲ್ಸ್ ತಿನ್ನಿಸಬೇಕೆನಿಸಬಹುದು. ಇಂತಹ ಸಂದರ್ಭದಲ್ಲಿ ಇಬ್ಬರೂ ಒಂದೇ ಆಹಾರವನ್ನು ತಿನ್ನಲೇಬೇಕೆಂದು ಒತ್ತಾಯಿಸುವ ಬದಲು, ತಮ್ಮಿಷ್ಟದ ರುಚಿಗೆ ತಕ್ಕಂತೆ ಪ್ರತ್ಯೇಕವಾಗಿ ಊಟ ಮಾಡಬಹುದು. ಅದೇ ರೀತಿ, ಒಬ್ಬರು ಬೇಗನೆ ರಾತ್ರಿ ಊಟ ಮಾಡಲು ಬಯಸಿದರೆ, ಮತ್ತೊಬ್ಬರಿಗೆ ತಡವಾಗಿ ತಿನ್ನುವ ಅಭ್ಯಾಸವಿರಬಹುದು, ಹೀಗಾಗಿ ಇಬ್ಬರೂ ತಮ್ಮ ಅನುಕೂಲಕ್ಕೆ ತಕ್ಕ ಸಮಯದಲ್ಲಿ ಊಟ ಮಾಡುವುದು ಈ ಪದ್ಧತಿಯ ವಿಶೇಷತೆಯಾಗಿದೆ. ವಿಶೇಷವಾಗಿ ಇಬ್ಬರ ಆಹಾರ ಪದ್ಧತಿಗಳಲ್ಲಿ ವ್ಯತ್ಯಾಸವಿರುವಾಗ, ಆಹಾರ ಅಲರ್ಜಿಗಳಿದ್ದಾಗ, ಸಸ್ಯಾಹಾರಿ ಮತ್ತು ಮಾಂಸಾಹಾರಿಗಳ ನಡುವೆ ಅಥವಾ ಪ್ರತ್ಯೇಕ ಡಯಟ್ ಪಾಲಿಸುವ ದಂಪತಿಗೆ ಈ ವಿಧಾನವು ಅಡಚಣೆಗಳನ್ನು ನಿವಾರಿಸಿ ದಾಂಪತ್ಯದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಅತ್ಯಂತ ಉಪಯುಕ್ತವಾಗಿ ಪರಿಣಮಿಸುತ್ತಿದೆ.