

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ ದೇಹ ಬೇಗ ಚೇತರಿಕೆ ಕಂಡು ಆರೋಗ್ಯವಂತವಾಗಲಿ ಎಂಬ ಕಾರಣದಿಂದ ಕೆಲ ಅಂಶಗಳನ್ನು ತ್ಯಜಿಸಲೇಬೇಕಾಗುತ್ತದೆ. ಆದರೆ, ಆರೋಗ್ಯವಾಗಿದ್ದಗಲೂ ಒಂದು ತಿಂಗಳು ಕಾಲ ಸಕ್ಕರೆ ಮತ್ತು ಉಪ್ಪು ತಿನ್ನುವುದ ಬಿಟ್ಟರೆ ಏನಾಗುತ್ತೆ ಎಂದು ಎಂದಾದರೂ ತಿಳಿದಿದ್ದೀರಾ?
ಇನ್ನು ವೈದ್ಯರು ಹೇಳುವಂತೆ, ಒಂದು ತಿಂಗಳು ಕಾಲ ಆಹಾರದಲ್ಲಿ ಸಕ್ಕರೆ ಮತ್ತು ಉಪ್ಪು ಅಂಶಗಳನ್ನು ಬಳಕೆ ಮಾಡದೇ ಇದ್ದರೆ ದೇಹದಲ್ಲಿ ಸಕಾರತ್ಮಕವಾಗಿ ದೇಹ ಸ್ಪಂದಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಹೌದು, ಸಕ್ಕರೆ ಮತ್ತು ಉಪ್ಪು ದೈನಂದಿನ ಜೀವನದಲ್ಲಿ ಎಷ್ಟು ಆಳವಾಗಿ ತೊಡಗಿಸಿಕೊಂಡಿವೆ ಎಂದರೆ ಅವು ನಮ್ಮ ದೇಹಕ್ಕೆ ಏನು ಮಾಡುತ್ತಿವೆ ಎಂದು ನಮಗೆ ಆಗಾಗ್ಗೆ ಅರ್ಥವಾಗುವುದಿಲ್ಲ. ಚಹಾದಲ್ಲಿ ಸಕ್ಕರೆ, ಬೇಳೆಕಾಳುಗಳಲ್ಲಿ ಉಪ್ಪು, ತಿಂಡಿಗಳು, ಸಿಹಿತಿಂಡಿಗಳು ಮತ್ತು ತ್ವರಿತ ಆಹಾರ, ಈ ಎರಡರ ಮ್ಯಾಜಿಕ್ ಎಲ್ಲದರಲ್ಲೂ ಅಡಗಿರುತ್ತದೆ. ಆದರೆ, ಈ ರುಚಿಯ ಮ್ಯಾಜಿಕ್ ಕೆಲವೊಮ್ಮೆ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎಂದು ಹೇಳಲಾಗುತ್ತೆ.
ಇನ್ನು ತಜ್ಞರ ಅಭಿಪ್ರಾಯ ಪ್ರಕಾರ, ಒಬ್ಬ ವ್ಯಕ್ತಿ 30 ದಿನಗಳ ಕಾಲ ಸಕ್ಕರೆ ಮತ್ತು ಉಪ್ಪು ಸೇವನೆ ಸಂಪೂರ್ಣವಾಗಿ ಬಿಟ್ಟರೆ ಅನೇಕ ಅಶ್ಚರ್ಯಕರ ಬದಲಾವಣೆಗಳನ್ನು ಕಂಡು ಬರುತ್ತದೆ. ಅಲ್ಲದೆ, ಇದು ದೇಹಕ್ಕೆ ಪ್ರಯೋಜನಕಾರಿ ಕೂಡ ಆಗಿದೆ. ಈ ಬದಲಾವಣೆ ಏನು ಎಂಬುದು ತಿಳಿಯೋಣ.
1. ರಕ್ತದೊತ್ತಡ ನಿಯಂತ್ರಣ
ಉಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಇದ್ದು, ಇದು ಅಧಿಕ ರಕ್ತದೊತ್ತಡಕ್ಕೆ ಪ್ರಮುಖ ಕಾರಣವಾಗಿದೆ . ನೀವು ಉಪ್ಪು ಸೇವನೆಯನ್ನು ಮಿತಿಗೊಳಿಸಿದಾಗ ಅಥವಾ ನಿಲ್ಲಿಸಿದಾಗ, ರಕ್ತದೊತ್ತಡ ಕ್ರಮೇಣ ಸಾಮಾನ್ಯವಾಗುತ್ತದೆ.
2.ಮಧುಮೇಹ ಅಪಾಯ ಕಡಿಮೆ
ಸಕ್ಕರೆ ತ್ಯಜಿಸುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಸ್ಥಿರವಾಗಿರುತ್ತದೆ .ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ಟೈಪ್ -2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಉಪ್ಪಿನ ಜತೆಗೆ, ಸಕ್ಕರೆ ತ್ಯಜಿಸುವುದರಿಂದ ದೇಹದ ಚಯಾಪಚಯ ಕ್ರಿಯೆಯೂ ಸುಧಾರಿಸುತ್ತದೆ.
3.ತೂಕ ಇಳಿಕೆ
ನೀವು ಸಂಸ್ಕರಿಸಿದ ಆಹಾರಗಳು , ಖಾರದ ತಿಂಡಿಗಳು ಮತ್ತು ಸಿಹಿತಿಂಡಿಗಳನ್ನು ತ್ಯಜಿಸಿದಾಗ , ದೇಹದಲ್ಲಿನ ಕ್ಯಾಲೊರಿ ಸೇವನೆಯು ಸ್ವಯಂಚಾಲಿತವಾಗಿ ಕಡಿಮೆಯಾಗುತ್ತದೆ. ಇದರಿಂದಾಗಿ, ದೇಹವು ಸಂಗ್ರಹವಾಗಿರುವ ಕೊಬ್ಬನ್ನು ಶಕ್ತಿಯಾಗಿ ಬಳಸಲು ಪ್ರಾರಂಭಿಸುತ್ತದೆ. ಕ್ರಮೇಣ ತೂಕ ಕಡಿಮೆಯಾಗುತ್ತದೆ.
4.ಚರ್ಮ ಮತ್ತು ಮುಖದ ಮೇಲೆ ಹೊಳಪು
ಸಕ್ಕರೆ ಮತ್ತು ಉಪ್ಪು ಎರಡು ಚರ್ಮವನ್ನು ನಿರ್ಜಲೀಕರಣಗೊಳಿಸಬಹುದು. ಇದು ಸುಕ್ಕು, ಮೊಡವೆ ಮತ್ತು ಶುಷ್ಕತೆಗೆ ಕಾರಣವಾಗಬಹುದು. ಈ ಎರಡು ನಿಲ್ಲಿಸಿದಾಗ ಚರ್ಮ ತನ್ನ ಹೊಳಪನ್ನು ಪಡೆಯುತ್ತದೆ.
5.ಮಾನಸಿಕ ಒತ್ತಡ ಕಡಿಮೆ
ಹೆಚ್ಚುವರಿ ಸಕ್ಕರೆ ಮನಸ್ಸನ್ನು ಹೆಚ್ಚು ಉದ್ರೇಕಗೊಳಿಸುತ್ತದೆ ಮತ್ತು ದಣಿದಂತೆ ಮಾಡುತ್ತದೆ. ಹೆಚ್ಚುವರಿ ಉಪ್ಪು ದೇಹವನ್ನು ಆಲಸ್ಯಗೊಳಿಸುತ್ತದೆ. ಇವುಗಳನ್ನು ಒಂದು ತಿಂಗಳು ತ್ಯಜಿಸುವುದರಿಂದ ಮನಸ್ಸಿಗೆ ಸ್ಪಷ್ಟತೆ ಬರುತ್ತದೆ ಮತ್ತು ದೇಹವು ಹೆಚ್ಚು ಸಕ್ರಿಯ ಮತ್ತು ಶಕ್ತಿಯುತವಾಗಿರುತ್ತದೆ (ಏಜೆನ್ಸೀಸ್).