ಕಾರ್ಮಿಕರು ಬೀದಿಗಿಳಿಯುವಂತೆ ಮಾಡಿದೆ ಸರ್ಕಾರ :ಬಿಎಂಎಸ್ ಪ್ರತಿಭಟನೆಯಲ್ಲಿ ಅನಿಲ್ ಕುಮಾರ್ ಆರೋಪ

New Project (7)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಸರ್ಕಾರದ ಅವೈಜ್ಞಾನಿಕ ನೀತಿಯಿಂದ ಕಟ್ಟಡ ಕೆಲಸಕ್ಕೆ ಬೇಕಾದ ಮರಳು, ಕೆಂಪು ಕಲ್ಲು ಸಿಗದೆ ಕಾಮಗಾರಿ ನಡೆಯುತ್ತಿಲ್ಲ. ಇಂದರಿಂದಾಗಿ ಕಾರ್ಮಿಕರ ಬದುಕು ಅಂತ್ರವಾಗಿದ್ದು, ಕಾರ್ಮಿಕರು ಬೀದಿಗಿಳಿಯುವಂತೆ ಸರ್ಕಾರ ಮಾಡಿದೆ. ಒಂದು ವಾರದೊಳಗೆ ನಿಯಮ ಸಡಿಲಗೊಳಿಸದಿದ್ದಲ್ಲಿ ಜಿಲ್ಲಾದ್ಯಂತ ಬ್ರಹತ್ ಪ್ರತಿಭಟನೆ ಮಾಡಲಾಗುವುದು ಎಂದು ಬಿಎಂಎಸ್ ದ.ಕ. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಎಚ್ಚರಿಸಿದರು.

ಮರಳು, ಕೆಂಪುಕಲ್ಲು ಸಿಗದೆ ಕಾರ್ಮಿಕರು ತೊಂದರೆಗೆ ಒಳಗಾಗಿದ್ದು ಇದಕ್ಕೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಸೋಮವಾರ ಬಿಎಂಎಸ್ ಮತ್ತು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟ ಬೆಂಗಳೂರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು.

ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್, ರಾಜ್ಯ ಅಸಂಘಟಿತ ಕಾರ್ಮಿಕ ಸಂಘಗಳ ಮುಖಂಡ ಅಶೋಕ್ ಮಾತನಾಡಿದರು. ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್, ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ವಕೀಲ ಉದಯ್ ಕುಮಾರ್, ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟ ರಾಜ್ಯ ಸಂಚಾಲಕ ಕುಮಾರ್ ವೈ.ಚಿತ್ರದುರ್ಗ, ರಾಜ್ಯ ಗೌರವಾದ್ಯಕ್ಷ ಶಿವಣ್ಣ ಮೈಸೂರು, ರಾಜ್ಯ ಅಧ್ಯಕ್ಷ ಎನ್.ರಮೇಶ್ ಚಿತ್ರದುರ್ಗ, ಉಪಾಧ್ಯಕ್ಷ ರಮೇಶ್ ಮರಿಗೌಡ್ರು ಬೆಂಗಳೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಗೌಡ ಗಂಗಾವತಿ ಕೊಪ್ಪಳ, ಚಂದ್ರು ಮೈಸೂರು, ಲಿಂಗರಾಜು ಮೈಸೂರು, ತಿಮ್ಮಣ್ಣ ಚಿತ್ರದುರ್ಗ, ನಾಗೇಶ್ ಮೈಸೂರು ಮುಂತಾದವರು ಇದ್ದರು.

ಕಾರ್ಮಿಕ ಸಚಿವರು ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ. ಮರಳು, ಕೆಂಪುಕಲ್ಲು ಸಿಗದೆ ಕಾರ್ಮಿಕರ ಬದುಕು ನರಕಸದೃಶವಾಗಿದೆ. ಇಂತಹ ಕಾರ್ಮಿಕ ಸಚಿವರು ರಾಜ್ಯಕ್ಕೆ ಅಗತ್ಯವಿಲ್ಲ. ಅಧಿಕಾರಿಗಳ ಗೊಡ್ಡು ಬೆದರಿಕೆಗೆ ಕಾರ್ಮಿಕರು ಹೆದರೋದಿಲ್ಲ. ಕಳೆದ ಬಿಜೆಪಿ ಸರ್ಕಾರ ಇರುವಾಗ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಸಿಕ್ಕಿದೆ. ಆದರೆ ಈಗಿನ ಸರ್ಕಾರ ಅದನ್ನು ನೀಡುತ್ತಿಲ್ಲ. ಜಯರಾಜ್ ಸಾಲ್ಯಾನ್, ಬಿಎಂಎಸ್ ರಾಜ್ಯ ಕಾರ್ಯದರ್ಶಿ https://www.vijayavani.net/unopened-dam-gate https://www.vijayavani.net/free-bags-pens-distributed-to-savannalu-school-children

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net