

Calcium low : ಇಂದಿನ ದಿನಗಳಲ್ಲಿ ಎಥೇಚ್ಛವಾಗಿ ಜನರು ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿದ್ದಾರೆ. ಇನ್ನು ಯಾವುದೇ ಆರೋಗ್ಯವಂತ ಮನುಷ್ಯನ ದೇಹದಲ್ಲಿ ಏಕಾಏಕಿ ಕ್ಯಾಲ್ಸಿಯಂ ಮಟ್ಟ ಕೊರತೆ ಉಂಟಾದಾಗ ಆತನಲ್ಲಿ ಹಲವಾರು ರೀತಿಯ ಸಮಸ್ಯೆಗಳು ಬೇರೂರಲು ಪ್ರಾರಂಭಿಸುತ್ತವೆ. ಇನ್ನು ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದಾಗ ಮೂಳೆಗಳ ಆರೋಗ್ಯ, ಸ್ನಾಯು ಕಾರ್ಯ, ನರವ್ಯವಸ್ಥೆ, ಮತ್ತು ರಕ್ತ ಹೆಪ್ಪುಗಟ್ಟುವಿಕೆಗೆ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.ಈ ಕೆಳಗೆ ಇದು ಲಕ್ಷಣಗಳು ಮತ್ತು ಕಾರಣಗಳನ್ನು ನೀಡಲಾಗಿದೆ.
ಯಾವುದೇ ವ್ಯಕ್ತಿಯ ದೇಹದಲ್ಲಿ ಕ್ಯಾಲ್ಸಿಯಂ ಮಟ್ಟ ಕಡಿಮೆಯಾದಾಗ ಸ್ನಾಯುಗಳಲ್ಲಿ ಸೆಳೆತ ಉಂಟಾಗುತ್ತದೆ. ಮತ್ತು ವಿಶೇಷವಾಗಿ ಕಾಲುಗಳು ಮತ್ತು ಕೈಗಳಲ್ಲಿ ತೀವ್ರ ನೋವುಂಟಾಗುವ ಅನುಭವ ಪ್ರಾರಂಭವಾಗುತ್ತದೆ. ಇದು ತೀವ್ರವಾದ ಸಂದರ್ಭಗಳಲ್ಲಿ ಸ್ನಾಯು ಸಂಕೋಚನ ಕೂಡಾ ಸಂಭವಿಸಬಹುದು.
ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗಿ ಕೈ-ಕಾಲುಗಳಲ್ಲಿ ಜುಮ್ಮೆನಿಸುವಿಕೆ ಉಂಟಾಗುತ್ತದೆ. ಕ್ಯಾಲ್ಸಿಯಂ ನರಗಳ ಸಂಕೇತ ಪ್ರಸರಣಕ್ಕೆ ಅಗತ್ಯವಾಗಿದ್ದು, ಕೊರತೆಯಿಂದ ನರಗಳ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಇದರಿಂದ ಸ್ನಾಯುಗಳಲ್ಲಿ ಸಂಕೋಚನ, ಜುಮ್ಮೆನಿಸುವಿಕೆ, ಮತ್ತು ಕೆಲವೊಮ್ಮೆ ಸೆಡವು ಉಂಟಾಗುತ್ತದೆ. ತೀವ್ರ ಕೊರತೆಯಾದರೆ ಕೈ-ಕಾಲುಗಳಲ್ಲಿ ನೋವು, ಸೆಳೆತ, ಮತ್ತು ಚಲನೆಯ ತೊಂದರೆ ಕಾಣಿಸಿಕೊಳ್ಳಬಹುದು. ಸಮತೋಲನ ಆಹಾರದಿಂದ ಕ್ಯಾಲ್ಸಿಯಂ ಪೂರೈಕೆ ಅಗತ್ಯ.
ಯಾವುದೇ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದಾಗ ಇದು ನರವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕ್ಯಾಲ್ಸಿಯಂ ನರ ಸಂಕೇತಗಳ ಪ್ರಸರಣಕ್ಕೆ ಅಗತ್ಯವಾಗಿದ್ದು, ಕೊರತೆಯಿಂದ ನರಗಳ ಕಾರ್ಯಕ್ಷಮತೆ ಕುಂಠಿತವಾಗುತ್ತದೆ. ಇದರಿಂದ ಮರಗಟ್ಟುವಿಕೆ, ಸೆಳೆತ, ಸ್ನಾಯು ಸೆಡವು, ಮತ್ತು ತೀವ್ರವಾದರೆ ನರಕೋಶಗಳ ಹಾನಿಯಾಗಬಹುದು. ಇದು ಸ್ಮರಣಶಕ್ತಿ, ಏಕಾಗ್ರತೆ ಕಡಿಮೆಯಾಗಿ, ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು.
ಕ್ಯಾಲ್ಸಿಯಂ ಕೊರತೆಯು ಹೃದಯ ಸಂಬಂಧಿತ ಲಕ್ಷಣಗಳನ್ನು ಉಂಟುಮಾಡುತ್ತವೆ. ಇದು ಕ್ಯಾಲ್ಸಿಯಂ ಮಟ್ಟವು ಹೃದಯ ಸ್ನಾಯುಗಳ ಸಂಕೋಚನಕ್ಕೆ ಅಗತ್ಯವಾಗಿದ್ದು, ಕೊರತೆಯಿಂದ ಹೃದಯ ಬಡಿತದ ಅಸಹಜತೆ ಉಂಟಾಗಬಹುದು. ಇದರಿಂದ ಎದೆಯುರಿಯುವಿಕೆ, ದಡದಡಿಕೆ, ಆಯಾಸ, ಮತ್ತು ತೀವ್ರವಾದರೆ ಹೃದಯ ವೈಫಲ್ಯದ ಅಪಾಯ ಹೆಚ್ಚಾಗಬಹುದು. ಕಡಿಮೆ ರಕ್ತದೊತ್ತಡ ಮತ್ತು ರಕ್ತನಾಳಗಳ ಕಾರ್ಯಕ್ಷಮತೆ ಕುಂಠಿತವಾಗಬಹುದು. ಇದು ಕೆಲವೊಮ್ಮೆ ಜೀವಕ್ಕೆ ಅಪಾಯವನ್ನು ತಂದೊಡ್ಡಬಹುದು.
ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳ ಮೇಲೆ ಎಥೇಚ್ಚವಾಗಿ ಪರಿಣಾಮ ಬೀರುತ್ತವೆ. ಇದು ಮೊಳೆಗಳ ದುರ್ಬಲತೆಯನ್ನು ಉಂಟುಮಾಡುತ್ತವೆ. ಏಕೆಂದರೆ ಕ್ಯಾಲ್ಸಿಯಂ ಮೂಳೆಗಳ ದೃಢತೆಗೆ ಪ್ರಮುಖವಾಗಿದೆ. ಇದರಿಂದ ಮೂಳೆ ಸಿಡಿಮಿಡಿಗೊಳ್ಳುವಿಕೆ, ಮತ್ತು ಮುರಿತದ ಸಾಧ್ಯತೆ ಹೆಚ್ಚಾಗುತ್ತದೆ. ಮಕ್ಕಳಲ್ಲಿ ರಿಕೆಟ್ಸ್ ಮತ್ತು ವಯಸ್ಕರಲ್ಲಿ ಆಸ್ಟಿಯೊಮಲೇಶಿಯಾ ಎಂಬ ಅಂಶಗಳು ಕಾಣಿಸಿಕೊಳ್ಳಬಹುದು. ಮೂಳೆಗಳ ನೋವು, ದೌರ್ಬಲ್ಯಗಳು ಕಾಣಿಸಿಕೊಳ್ಳುತ್ತವೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ