

Weight Loss Diet: ಪ್ರತಿನಿತ್ಯ ನಾವು ಸೇವಿಸುವ ಆಹಾರಗಳು ನಮ್ಮ ಆರೋಗ್ಯದ ಜತೆ ತೂಕದ ಮೇಲೂ ಗಂಭೀರ ಪರಿಣಾಮ ಬೀರುತ್ತವೆ. ಆಹಾರವು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದಕ್ಕೆ ಅನೇಕ ಸಾಕ್ಷಿಗಳಿವೆ. ಅಂದಹಾಗೆ, ನೀವು ಸೇವಿಸುವ ಪದಾರ್ಥಗಳಲ್ಲಿ ಕಡಿಮೆ ಕ್ಯಾಲೊರಿಗಳನ್ನು ಸೇವಿಸುವುದರಿಂದ ಕ್ರಮೇಣ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ, ಕ್ಯಾಲೋರಿಗಳಿಗಿಂತ ಹೆಚ್ಚಾಗಿ, ಫೈಬರ್, ಸೂಕ್ಷ್ಮ ಪೋಷಕಾಂಶಗಳನ್ನು ಸೇವಿಸುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಅಧ್ಯಯನಗಳು ತಿಳಿಸಿವೆ.
ಪ್ರೋಟೀನ್ ಸೇವನೆಯು ತೂಕ ಇಳಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದು ಹಸಿವನ್ನು ಕಡಿಮೆ ಮಾಡಿ, ದೇಹಕ್ಕೆ ಹೆಚ್ಚು ಸಮಾಧಾನ ನೀಡುತ್ತದೆ. ಇದರಿಂದ ಕ್ಯಾಲೋರಿ ಕಡಿಮೆಯಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ವೇಗಗೊಳಿಸಿ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿನಿತ್ಯ ದ್ವಿದಳ ಧಾನ್ಯಗಳು, ಮೊಟ್ಟೆಗಳು, ಡೈರಿ, ಮಾಂಸ, ಮೀನನ್ನು ಸೇವಿಸುವುದರಿಂದ ಇದು ಅಮೈನೋ ಆಮ್ಲವನ್ನು ದೇಹಕ್ಕೆ ನೀಡುತ್ತದೆ.
ತೂಕ ಇಳಿಸುವಲ್ಲಿ ಫೈಬರ್ ದೊಡ್ಡ ಪಾತ್ರ ವಹಿಸುತ್ತದೆ. ಇದು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುವುದರಿಂದ ಅಧಿಕವಾಗಿ ತಿನ್ನುವುದನ್ನು ತಪ್ಪಿಸುತ್ತದೆ. ಇದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಹಾಗಾಗಿ ಆಹಾರ ಸೇವನೆಯಲ್ಲಿ ರಾಗಿ, ಜೋಳ, ಬಾಜ್ರಾ, ಓಟ್ಸ್, ಬೆಂಡೆಕಾಯಿ, ಬೀನ್ಸ್, ಕ್ಯಾರೆಟ್ನಂತಹ ತರಕಾರಿಗಳನ್ನು ಆರಿಸಿಕೊಳ್ಳಿ. ಇದು ನಿಮ್ಮಲ್ಲಿರುವ ಅಧಿಕ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಹು ಜೀವಸತ್ವಗಳನ್ನು ಹೊಂದಿರುವ ಪದಾರ್ಥಗಳನ್ನು ಸೇವಿಸುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತವೆ. ಹಾಗಾಗಿ ಬಿ 1, ಬಿ 2, ಬಿ 3, ಬಿ 5, ಬಿ 6, ಬಿ 7, ಬಿ 9 ಮತ್ತು ಬಿ 12 ನಂತಹ ಬಿ ಜೀವಸತ್ವಗಳು ಇರುವಂತಹ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ನಿಮ್ಮ ಚಯಾಪಚಯ ಕ್ರಿಯೆಯು ಅತ್ಯತ್ತಮ ಸಾಮರ್ಥ್ಯಕ್ಕೆ ಕೆಲಸ ಮಾಡಲು ಸಹಾಯ ಮಾಡುತ್ತದೆ.
ಕಬ್ಬಿಣ ಅಂಶವನ್ನು ಹೊಂದಿರುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ದೇಹಕ್ಕೆ ಶಕ್ತಿಯನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಸ್ನಾಯುಗಳು ಸೇರಿದಂತೆ ಇನ್ನಿತರ ಕೊಬ್ಬುಗಳನ್ನು ಸುಡಲು ಪ್ರಯತ್ನಿಸುತ್ತದೆ. ಇದು ದೇಹದ ಎಲ್ಲಾ ಜೀವಕೋಶಗಳಿಗೆ ಆಮ್ಲಜನಕವನ್ನು ಸಾಗಿಸಲು ಸಹಾಯ ಮಾಡುತ್ತದೆ. ಇದರಿಂದ ದೇಹಕ್ಕೆ ಬೇಡವಾದ ತೂಕವನ್ನು ಇಳಿಸಿಕೊಳ್ಳಲು ಸಹಾಯವಾಗುತ್ತದೆ.
ಕ್ಯಾಲ್ಸಿಯಂ ಸೇವನೆವು ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ. ಇದು ಕೊಬ್ಬಿನ ಜೀವಕೋಶಗಳಲ್ಲಿ ಲಿಪೊಲಿಸಿಸ್‌ನನ್ನು ಹೆಚ್ಚಿಸಿ, ಥರ್ಮೋಜೆನೆಸಿಸ್‌ನ್ನು ಉಳಿಸಿಕೊಳ್ಳುತ್ತದೆ, ಆದ್ದರಿಂದ ತೂಕ ಕಡಿಮೆಯಾಗುತ್ತದೆ. ಕ್ಯಾಲ್ಸಿಯಂ ಇರುವಂತಹ ಆಹಾರಗಳು ಕೊಬ್ಬಿನ ಶೋಷಣೆಯನ್ನು ಕಡಿಮೆ ಮಾಡಿ, ಮಲದ ಮೂಲಕ ಕೊಬ್ಬು ಹೊರಹೊಮ್ಮುವುದನ್ನು ಹೆಚ್ಚಿಸುತ್ತದೆ. ಪ್ರತಿನಿತ್ಯ ಕ್ಯಾಲ್ಸಿಯಂ ಇರುವಂತಹ ಆಹಾರ ಸೇವಿಸುವುದರಿಂದ 1-2 ಕೆ.ಜಿ ಇಳಿಸಿಕೊಳ್ಳಬಹುದು. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.