

ಅರಿಶಿನ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂಬ ಖ್ಯಾತಿ ಪಡೆದಿದೆ. ನೈಸರ್ಗಿಕವಾಗಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ. ದೈನಂದಿನ ಆಹಾರದಲ್ಲಿ ಉತ್ತಮ ಆರೋಗ್ಯಕ್ಕೆಂದು ಅರಿಶಿನವನ್ನು ಬಳಸುಉವುದ ರೂಢಿಯಲ್ಲಿದೆ. ಆದರೆ ಅರಿಶಿನ ಬಳಸುವುದು ಸುರಕ್ಷಿತವೇ..? ಅಗತ್ಯಕ್ಕಿಂತ ಹೆಚ್ಚಾಗಿ ಅರಿಶಿನ ಬಳಸುವುದು ಆರೋಗ್ಯಕರವಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಇದನ್ನು ಓದಿ: ತುಪ್ಪದ ಚಹಾದ ಬಗ್ಗೆ ನಿಮಗೆಷ್ಟು ಗೊತ್ತು?; ಇದು ತೂಕ ಇಳಿಕೆಗೆ ಅನುಸರಿಸುತ್ತಿರುವ ಸದ್ಯದ ಟ್ರೆಂಡ್ .. ಅತಿಯಾದ ಅರಿಶಿನ ಬಳಕೆಯಿಂದಾಗುವ ಸಮಸ್ಯೆ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಎಷ್ಟು ಅರಿಶಿನ ಬಳಸುವುದು ಸೇಫ್: ಅಧ್ಯಯನಗಳ ಪ್ರಕಾರ ದಿನಕ್ಕೆ 3 ಗ್ರಾಂ ಅರಿಶಿನ ಬಳಸುವುದು ಆರೋಗ್ಯಕರ ಎಂದು ಪರಿಗಣಿಸಲಾಗಿದೆ. 8 ಗ್ರಾಂಗಳಷ್ಟು ಕರ್ಕ್ಯುಮಿನ್ ಹೊಂದಿರುವ ಉತ್ಪನ್ನಗಳನ್ನು ಸುಮಾರು ಎರಡು ತಿಂಗಳವರೆಗೆ ಬಳಸುವುದು ಆರೋಗ್ಯಕರವೆಂದು ಹೇಳಲಾಗುತ್ತದೆ.