

mouth ulcer: ಬಾಯಿ ಹುಣ್ಣು ಸಾಮಾನ್ಯವಾಗಿ ಕಂಡು ಬರುವಂತಹ ಸಮಸ್ಯೆಯಾಗಿದೆ. ಇದು ಎಲ್ಲರಲ್ಲಿಯೂ ಅಪರೂಪವಾಗಿ ಕಂಡುಬರುತ್ತದೆ. ಹಾಗೆಯೇ ಇದು ಒತ್ತಡ, ಆಹಾರದ ಕೊರತೆ, ಗಾಯ ಅಥವಾ ಇತರ ಕಾರಣಗಳಿಂದಲೂ ಬರುತ್ತದೆ. ಈ ಸಮಯದಲ್ಲಿ ಕೆಲವೊಂದು ಔಷಧಿಗಳನ್ನು ಸೇವಿಸುತ್ತೇವೆ ದರೂ, ಈ ಸಮಸ್ಯೆ ಕಡಿಮೆಯಾಗುವುದಿಲ್ಲ. ಆದರಿಂದ ಬಾಯಿ ಹುಣ್ಣು ಕಡಿಮೆಯಾಗಲು ಈ ರೀತಿಯ ಮನೆಮದ್ದುಗಳನ್ನು ಒಮ್ಮೆ ಪ್ರಯತ್ನಿಸಿ....
ಇದನ್ನೂ ಓದಿ: ವಾಹನಗಳ ಸಂಚಾರದಲ್ಲಿ ತಾತ್ಕಾಲಿಕ ಮಾರ್ಗ ಬದಲಾವಣೆ
ತೆಂಗಿನ ಎಣ್ಣೆಯಲ್ಲಿರುವ ಆಂಟಿಮೈಕ್ರೋಬಿಯಲ್ ಗುಣಗಳು ಬಾಯಿ ಹುಣ್ಣಿನ ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಆದರಿಂದ ಒಂದು ಚಮಚ ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿಕೊಂಡು ಮುಕ್ಕರಿಸಿ ನಂತರ ಉಗುಳುವುದರಿಂದ ಬಾಯಿಹುಣ್ಣು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೂ ಸೋಂಕನ್ನು ಕಡಿಮೆ ಮಾಡುತ್ತದೆ.
ಸ್ವಲ್ಪ ತುಪ್ಪಕ್ಕೆ ಕಾಲು ಚಮಚ ಜೇನುತುಪ್ಪವನ್ನು ಸೇರಿಸಿ, ಈ ಮಿಶ್ರಣವನ್ನು ಹುಣ್ಣಿನ ಮೇಲೆ ದಿನಕ್ಕೆ 2-3 ಬಾರಿ ಹಚ್ಚಿರಿ. ಇದು ತುಪ್ಪದಲ್ಲಿರುವ ತಂಪಾಗಿಸುವ ಗುಣ ಮತ್ತು ಜೇನಿನ ಗುಣಪಡಿಸುವ ಗುಣಗಳು ತ್ವರಿತವಾಗಿ ಗುಣಮುಖವಾಗಲು ಸಹಾಯ ಮಾಡುತ್ತವೆ.
ಒಂದು ಚಿಟಿಕೆ ಅರಿಶಿಣ ಪುಡಿಗೆ ಸ್ವಲ್ಪ ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಹುಣ್ಣುಗಳಿಗೆ ಹಚ್ಚಿ 5-10 ನಿಮಿಷಗಳನ್ನು ಬಿಟ್ಟು ತೊಳೆಯುವುದರಿಂದ ಇದರಲ್ಲಿರುವ ಆಂಟಿಸೆಪ್ಟಿಕ್ ಮತ್ತು ಉರಿಯೂತ-ವಿರೋಧಿ ಗುಣಗಳು ಬಾಯಿ ಹುಣ್ಣನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಅರ್ಧ ಚಮಚ ಉಪ್ಪು ಬೆರೆಸಿ ಕೆಲವು ಸಮಯಗಳ ಕಾಲ ಮುಕ್ಕಳಿಸಿ ಉಗುಳುವುದರಿಂದ ಇದು ಸೋಂಕನ್ನು ಕಡಿಮೆ ಮಾಡಿ ಗುಣವಾಗಲು ಉತ್ತೇಜನ ನೀಡುತ್ತದೆ.
* ಬಾಯಿಹುಣ್ಣು 7-10 ದಿನಗಳಿಗಿಂತ ಹೆಚ್ಚು ಕಾಲ ಇದ್ದರೆ ಅಥವಾ ತೀವ್ರವಾದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ
* ಈ ಸಮಯದಲ್ಲಿ ಮಸಾಲೆಯುಕ್ತ ಆಹಾರ, ಆಮ್ಲೀಯ ಪಾನೀಯಗಳನ್ನು ತಪ್ಪಿಸಿ
* ಬಾಯಿ ಹುಣ್ಣು ಆದಾಗ ಸಾಕಷ್ಟು ನೀರು ಕುಡಿಯಿರಿ ಮತ್ತು ವಿಟಮಿನ್-ಬಿ, ಸಿ ಯುಕ್ತ ಆಹಾರ ಸೇವಿಸಿ
(ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ