

Mobile: ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರೂ ಮೊಬೈಲ್ ಮೇಲೆ ಅವಲಂಬಿತರಾಗಿರುತ್ತಾರೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಮೊಬೈಲ್ ಕೈಯಲ್ಲಿ ಇರಲೇಬೇಕು. ಇನ್ನು ಕಿರಿಯರಾಗಿರಲಿ ಅಥವಾ ಹಿರಿಯರಾಗಿರಲಿ ಮೊಬೈಲ್ ಬಿಟ್ಟು ಇರುವುದಕ್ಕೆ ಇಷ್ಟ ಪಡುವುದಿಲ್ಲ. ಇದೇ ರೀತಿ ಬಹಳಷ್ಟು ಮಂದಿ ಫೋನ್ ಪಕ್ಕಕಿಟ್ಟುಕೊಂಡೇ ಮಲಗುವುದನ್ನು ರೂಢಿ ಮಾಡಿಕೊಂಡು ಬಿಟ್ಟಿದ್ದಾರೆ. ಆದರೆ, ಈ ಅಭ್ಯಾಸಗಳು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರೋದಂತೂ ಗ್ಯಾರಂಟಿಯಾಗಿರುತ್ತದೆ. ಹಾಗಾಗಿ ನೀವು ಈ ಅಭ್ಯಾಸವನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ.
ಸ್ಮಾರ್ಟ್ಫೋನ್ಗಳಿಂದ ಹೊರಸೂಸುವ ನೀಲಿ ಬೆಳಕು ನಿದ್ರೆಯನ್ನು ನಿಯಂತ್ರಿಸುವ ಹಾರ್ಮೋನ್ ಆದ ಮೆಲಟೋನಿನ್ ಉತ್ಪಾದನೆಯನ್ನು ತಡೆಯುತ್ತದೆ. ಇದರಿಂದ ರಾತ್ರಿ ಮಲಗುವ ವೇಳೆ ಮೊಬೈಲ್ ನೋಡುವುದರಿಂದ ನಿದ್ರೆಗೆ ಅಡ್ಡಿ ಪಡಿಸುತ್ತದೆ. ಇದು ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡಿ ಆಗ್ಗಾಗೆ ಎಚ್ಚರಗೊಳಿಸಬಹುದು. ಇನ್ನು ಇದು ದೀರ್ಘಕಾಲದ ಆಯಾಸ, ಒತ್ತಡ ಮತ್ತು ಏಕಾಗ್ರತೆಯನ್ನು ಕಡಿಮೆ ಮಾಡುತ್ತದೆ.
ಮೊಬೈಲ್ಗಳು ಕಡಿಮೆ ವಿದ್ಯುತ್ಕಾಂತೀಯ ಕಿರಣಗಳನ್ನು ಹೊಸಸೂಸುತ್ತವೆ. ಇದು ಯಾವ ವ್ಯಕ್ತಿ ದೀರ್ಘಕಾಲದವರೆಗೆ ಮೊಬೈಲ್ ಮೇಲೆ ಅವಲಂಬಿತನಾಗಿರುತ್ತಾನೋ ಆತನಿಗೆ ತಲೆನೋವು, ಆರೋಗ್ಯದ ತೊಂದರೆಗಳು ಅಥವಾ ದೀರ್ಘಕಾಲೀನ ಸಮಸ್ಯೆಗಳಿಗೆ ಒಳಗಾಗುತ್ತಾನೆ. (ಆದರೆ ಇದು ಸಂಪೂರ್ಣವಾಗಿ ಸಾಬೀತಾಗಿಲ್ಲ)
ರಾತ್ರಿ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬರುವಂತಹ ಸುದ್ದಿ, ಸಂದೇಶಗಳು, ವಿಡಿಯೋಗಳು ಮೊಬೈಕ್ ಬಳಕೆದಾರರಿಗೆ ಆತಂಕ, ಒತ್ತಡ, ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಇದು ಮನಸ್ಸನ್ನು ಘಾಸಿಗೊಳಿಸುವುದರಿಂದ ನಿದ್ರಿಸಲು ಕಷ್ಟವಾಗಬಹುದು.
* ಮೊಬೈಲ್ನಲ್ಲಿ ನೀಲಿ ಬೆಳಕನ್ನು ಕಡಿಮೆ ಮಾಡಿ, ಇಲ್ಲದಿದ್ದರೆ ನೈಟ್ ಮೋಡ್ ಬಳಸಿ. ಇದು ಆದಷ್ಟು ತೊಂದರೆಯನ್ನು ಕಡಿಮೆ ಮಾಡಬಹದು.
* ಮಲಗುವ ಮುನ್ನ ಕನಿಷ್ಟ 1 ಗಂಟೆ ಮುಂಚೆಯಿಂದಲೇ ಮೊಬೈಲ್ ನೋಡುವುದನ್ನು ಕಡಿಮೆ ಮಾಡಿ. ನಿಮ್ಮಲ್ಲಿಂದ 3-4 ಅಡಿ ದೂರದಲ್ಲಿ ಮೊಬೈಲ್ ಇಡಿ.
* ವಿಕಿರಣಗಳನ್ನು ಕಡಿಮೆ ಮಾಡಲು ನೀವು ಮಲಗುವ ವೇಳೆ ಏರೋಪ್ಲೇನ್ ಮೋಡ್ ಆನ್ ಮಾಡಿ.
* ಫೋನ್ ಬದಲಿಗೆ ಪುಸ್ತಕ ಓದುವುದು, ಧ್ಯಾನ ಮಾಡುವುದನ್ನು ಮಾಡಿದಾಗ ನಿದ್ರೆ ಮಾಡಲು ಸಹಾಯವಾಗುತ್ತದೆ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ