

Home Remedies: ಮೊಣಕಾಲು ನೋವು ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ವಯಸ್ಸು, ಗಾಯ, ಒತ್ತಡ ಅಥವಾ ಆರ್ಥರೈಟಿಸ್ನಂತಹ ಕಾಯಿಲೆಗಳಿಂದ ಉಂಟಾಗಬಹುದು. ಅದೇ ರೀತಿ ಗಂಭೀರ ಸಂದರ್ಭಗಳಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾದರೂ, ಕೆಲವು ಮನೆಮದ್ದುಗಳು ಲಘು ಮೊಣಕಾಲು ನೋವನ್ನು ಕಡಿಮೆ ಮಾಡಲು ಸಹಾಯಕವಾಗಿವೆ. ಈ ಕೆಳಗಿನ ಮನೆಮದ್ದುಗಳು ಸರಳವಾಗಿದ್ದು, ಸುಲಭವಾಗಿ ಅನುಸರಿಸಬಹುದು.
ಮೊಣಕಾಲಿನ ಮೇಲೆ ಒತ್ತಡ ಕಡಿಮೆ ಮಾಡಲು ವಿಶ್ರಾಂತಿ ಅಗತ್ಯವಾಗಿರುತ್ತದೆ. ಓಡಾಟ, ಓಟ ಅಥವಾ ಭಾರೀ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಿ. ಮೊಣಕಾಲನ್ನು ಕುಳಿತಾಗ ಅಥವಾ ಮಲಗಿದಾಗ ಕಾಲನ್ನು ಒಂದು ಅಥವಾ ಎರಡು ದಿಂಬಿನ ಮೇಲೆ ಎತ್ತರದಲ್ಲಿ ಇಡುವುದರಿಂದ ರಕ್ತಪರಿಚಲನೆ ಸುಧಾರಿಸುತ್ತದೆ. ಇದು ಊತವನ್ನು ಕಡಿಮೆಯಾಗುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಿ, ನೋವನ್ನು ಶಮನಗೊಳಿಸುತ್ತದೆ.
ಯಾವುದೇ ನೋವು ಅಥವಾ ಊತವನ್ನು ಕಡಿಮೆ ಮಾಡಲು ಐಸ್ ಪ್ಯಾಕ್ ಉತ್ತಮವಾಗಿರುತ್ತದೆ. ಹಾಗೆಯೇ ಒಂದು ಚಿಕ್ಕ ಚೀಲಕ್ಕೆ ಐಸ್ ತುಂಡುಗಳನ್ನು ತುಂಬಿ, ತೆಳುವಾದ ಬಟ್ಟೆಯಿಂದ ಸುತ್ತಿ ಮೊಣಕಾಲಿನ ಮೇಲೆ 20-25 ನಿಮಿಷಗಳ ಕಾಲ ಇರಿಸಿ. ಇದನ್ನು ದಿನಕ್ಕೆ 2-3 ಬಾರಿ ಮಾಡಿ. ಹೀಗೆ ಮಾಡುವುದರಿಂದ ನೋವನ್ನು ಕಡಿಮೆ ಮಾಡಬಹುದು.
ಅರಿಶಿಣವು ಉರಿಯೂತ ವಿರೋಧಿ ಗುಣವನ್ನು ಹೊಂದಿದೆ. ಪ್ರತಿನಿತ್ಯ ಒಂದು ಲೋಟ ಬೆಚ್ಚಗಿನ ಹಾಲಿಗೆ ಒಂದು ಚಮಚ ಅರಿಶಿನ ಪುಡಿಯನ್ನು ಬೆರೆಸಿ, ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದು ಒಳಗಿನಿಂದ ಉರಿಯೂತವನ್ನು ಕಡಿಮೆ ಮಾಡಿ, ನೋವನ್ನು ಶಮನಗೊಳಿಸುತ್ತದೆ. ಅದೇ ರೀತಿ ಅರಿಶಿಣ ಪೇಸ್ಟ್ ಮಾಡಿ ಮೊಣಕಾಲಿಗೆ ಮೃದುವಾಗಿ ಹಚ್ಚಿ ಮಸಾಜ್ ಮಾಡಿ.
ಶುಂಠಿಯು ಉರಿಯೂತ-ವಿರೋಧಿ ಮತ್ತು ನೋವು-ನಿವಾರಕ ಗುಣಗಳನ್ನು ಹೊಂದಿದೆ. ಹಾಗಾಗಿ ಒಂದು ಕಪ್ ನೀರಿಗೆ ಚಿಕ್ಕ ತುಂಡು ಶುಂಠಿಯನ್ನು ತುರಿದು ಹಾಕಿ ಕುದಿಸಿರಿ. ನಂತರ ಅದಕ್ಕೆ ಸ್ವಲ್ಪ ಜೇನು ತುಪ್ಪ ಬೆರೆಸಿ, ದಿನಕ್ಕೆ ಎರಡು ಬಾರಿ ಕುಡಿಯಿರಿ. ಇದರಿಂದ ಮೊಣಕಾಲಿನ ನೋವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
ಉಪ್ಪಿನಲ್ಲಿ ಮೆಗ್ನೀಸಿಯಮ್ ಸಲ್ಫೇಟ್ ಇರುತ್ತದೆ. ಇದು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಒಂದು ಬಕೆಟ್ ಬೆಚ್ಚಗಿನ ನೀರಿಗೆ 2-3 ಚಮಚ ಉಪ್ಪು ಬೆರೆಸಿ, ಮೊಣಕಾಲನ್ನು 15-20 ನಿಮಿಷಗಳ ಕಾಲ ಅದರಲ್ಲಿ ಅದ್ದಿ. ಈ ರೀತಿ ವಾರಕ್ಕೆ 2 ರಿಂದ 3 ಬಾರಿ ಮಾಡಿ. ಇದು ಸ್ನಾಯುವಿನ ಒತ್ತಡವನ್ನು ಕಡಿಮೆ ಮಾಡಿ, ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ