ಜೀರಿಗೆ ನೀರು ಕುಡಿಯೋದ್ರಿಂದ ಲಭಿಸುತ್ತೆ ಉತ್ತಮ ಆರೋಗ್ಯ; ಇದಲ್ಲಿರುವ ಅಂಶ ತಿಳಿದ್ರೆ ನೀವು ಬಳಸೋದಂತು ಪಕ್ಕಾ

Untitled-design-62
Published on

ಅಡುಗೆಮನೆಯಲ್ಲಿನ ಎಷ್ಟೋ ಪದಾರ್ಥಗಳು ನಮ್ಮ ಉತ್ತಮ ಆರೋಗ್ಯಕ್ಕಾಗಿ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತವೆ.ಯಾವುದೇ ಸೈಡ್​​ಎಫೆಕ್ಟ್​ ಕೂಡ ಆಗುವುದಿಲ್ಲ. ಇಂದು ನಾವು ತಿಳಿಸುತ್ತಿರುವುದು ಜೀರಿಗೆ ಬಗ್ಗೆ. ಸಾಂಬಾರಿಗೆ ಜೀರಿಗೆ ಒಗ್ಗರಣೆ ಹಾಕಿದ ತಕ್ಷಣ ಎಂಥಾ ಸುವಾಸನೆ ಬರುತ್ತದೆ, ಅಷ್ಟೇ ರುಚಿಕರವಾಗಿರುತ್ತದೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಎಷ್ಟೋ ಪ್ರಯೋಜನಕಾರಿ ಎಂಬುದು ನಿಮಗೆ ಗೊತ್ತೆ?

ಪ್ರಸ್ತುತ ಜೀವನಶೈಲಿಯಲ್ಲಿ ಬಹುಪಾಲು ಜನರನ್ನು ಕಾಡುತ್ತಿರುವುದು ಬೊಜ್ಜಿನ ಸಮಸ್ಯೆ. ಇದಕ್ಕೆ ರಾಮಬಾಣ ಈ ಜೀರಿಗೆ ಎಂದರೆ ತಪ್ಪಗಲಾರದು. ತೂಕ ಇಳಿಸಲು ಮತ್ತು ಜೀರ್ಣಾಂಗ ವ್ಯವಸ್ಥೆ ಸುಧಾರಿಸಲು ಜೀರಿಗೆ ಸೇವನೆ ಮಾಡಬಹುದು. ಎಷ್ಟೋ ಮಂದಿ ಜೀರಿಗೆ ಚಹಾ ಕುಡಿಯಲು ಇಷ್ಟ ಪಡುತ್ತಾರೆ. ಜೀರಿಗೆಯಲ್ಲಿ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಇರುವುದದರಿಂದ ಜೀರಿಗೆ ನೀರನ್ನು ಕುಡಿಯುವುದು ಪ್ರಯೋಜನಕಾರಿ. ಹಾಗಾದ್ರೆ ಜೀರಿಗೆ ಹಾಕಿ ಕುದಿಸಿದ ನೀರನ್ನು ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನವಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ನೀವು ಇದನ್ನು ಯಾವ ಸಮಯದಲ್ಲಾದರೂ ಸೇವಿಸಬಹುದು. ಆದರೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿದರೆ ಅದರ ಪರಿಣಾಮಕಾರಿ ರಿಸಲ್ಟ್​ ಬಹುಬೇಗನೆ ನಿಮಗೆ ತಿಳಿಯುತ್ತದೆ.

  • ಜೀರಿಗೆ ನೀರನ್ನು ಕುಡಿಯುವದರಿಂದ ಬೇಗನೆ ತೂಕ ಕಡಿಮೆ ಮಾಡಿಕೊಳ್ಳಬಹುದು. ದೇಹದಲ್ಲಿನ ಕ್ಯಾಲೊರಿಗಳನ್ನು ಸುಡುವುದಲ್ಲದೆ ಅನಗತ್ಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆ ಹಾಗೂ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ.
  • ಕುದಿಸಿದ ಜೀರಿಗೆ ನೀರು ತುಂಬಾ ಒಳ್ಳೆಯ ಡಿಟಾಕ್ಸ್ ಪಾನೀಯ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಇರುವ ಬ್ಯಾಕ್ಟೀರಿಯಾ, ಕೊಳೆಯು ಸ್ವಚ್ಛವಾಗುತ್ತದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ.
  • ಆರೋಗ್ಯಕರ ಮತ್ತು ಹೊಳೆಯುವ ಚರ್ಮಕ್ಕಾಗಿ ಜೀರಿಗೆ ನೀರನ್ನು ಸೇವಿಸಿ. ಇದು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ ಇದರಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಮೊಡವೆಗಳು ಅಥವಾ ಯಾವುದೇ ರೀತಿಯ ಅಲರ್ಜಿಯಿಂದ ಪರಿಹಾರ ನೀಡುತ್ತದೆ.
  • ಜೀರಿಗೆಯಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ವಿಟಮಿನ್ ಎ, ವಿಟಮಿನ್ ಇ ಮತ್ತು ವಿಟಮಿನ್ ಕೆ ಸಮೃದ್ಧ ಪ್ರಮಾಣದಲ್ಲಿರುತ್ತದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
  • ಜೀರಿಗೆ ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಖನಿಜಾಂಶಗಳು ಸಮೃದ್ಧವಾಗಿವೆ. ಜೀರಿಗೆ ನೀರಿಗೆ ಜೇನುತುಪ್ಪವನ್ನು ಸೇರಿಸಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ.
  • ಗ್ಯಾಸ್, ಮಲಬದ್ಧತೆ, ಹೊಟ್ಟೆ ಉಬ್ಬರ ಮುಂತಾದ ಹೊಟ್ಟೆಯ ಸಮಸ್ಯೆಯನ್ನು ಕ್ಷಣಾರ್ಧದಲ್ಲಿ ಹೋಗಲಾಡಿಸಲು ಜೀರಿಗೆ ನೀರು ಉತ್ತಮ ಮಾರ್ಗವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net