ಫ್ರಿಡ್ಜ್​ನಲ್ಲಿ ತರಕಾರಿಗಳು ಬೇಗ ಹಾಳಾಗಬಾರದು ಅಂದ್ರೆ ಹೀಗೆ ಮಾಡಿ ಸಾಕು| Kitchen

fridge
Published on

Kitchen; ಫ್ರಿಡ್ಜ್​ನಲ್ಲಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಬಳಸಲಾಗುತ್ತದೆ. ಉಳಿದ ಆಹಾರ ಪದಾರ್ಥಗಳಿಂದ ಹಿಡಿದು ಈಗಷ್ಟೇ ತಂದ ತಾಜಾ ತರಕಾರಿ, ಹಾಲು, ಮೊಟ್ಟೆಯನ್ನು ಫ್ರಿಜ್​​ನಲ್ಲಿ ಸಂಗ್ರಹಿಸಿಡಲಾಗುತ್ತದೆ. ತರಕಾರಿಗಳು ಬೇಗನೆ ಹಾಳಾಗುತ್ತವೆ ಎಂಬ ಮಾತುಗಳನ್ನು ಮನೆಗಳಲ್ಲಿ ಕೇಳುತ್ತಾ ಇರುತ್ತೀವಿ. ಹಾಗಾಗಿ ಫ್ರಿಡ್ಜ್‌ನಲ್ಲಿ ತರಕಾರಿಗಳು ಬೇಗ ಹಾಳಾಗದಂತೆ ಇರಲು ಕೆಲ ಸಲಹೆಗಳನ್ನು ಅನುಸರಿಸಬೇಕಾಗುತ್ತದೆ.

ಸರಿಯಾದ ತಾಪಮಾನ: ಫ್ರಿಡ್ಜ್‌ನ ತಾಪಮಾನವನ್ನು 1-5°C ನಡುವೆ ಇರಿಸಿ. ತರಕಾರಿಗಳಿಗೆ 3-4°C ಒಳ್ಳೆಯದು.

ತೇವಾಂಶ ನಿಯಂತ್ರಣ: ಸೊಪ್ಪು, ಕ್ಯಾರೆಟ್, ಬೀಟ್‌ರೂಟ್‌ನಂತಹವುಗಳನ್ನು ಫ್ರಿಡ್ಜ್‌ನ ಹೆಚ್ಚು ತೇವಾಂಶವಿರುವ ಡ್ರಾಯರ್‌ನಲ್ಲಿ ಇರಿಸಿ.

ಫ್ರೀಜಿಂಗ್: ತರಕಾರಿಗಳನ್ನು ದೀರ್ಘಕಾಲ ಇಡಲು ಬಯಸಿದರೆ, ಕತ್ತರಿಸಿ, ಬಿಸಿನೀರಿನಲ್ಲಿ ಕೆಲವು ಸೆಕೆಂಡ್‌ಗಳ ಕಾಲ ಇರಿಸಿ, ನಂತರ ತಣ್ಣೀರಿನಲ್ಲಿ ತಣ್ಣಗಾಗಿಸಿ, ಗಾಳಿಯಾಡದ ಚೀಲದಲ್ಲಿ ಫ್ರೀಜರ್‌ನಲ್ಲಿ ಇಡಿ.

ಕಡಿಮೆ ತೇವಾಂಶ: ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆಯಂತಹವುಗಳನ್ನು ಫ್ರಿಡ್ಜ್‌ನ ಹೊರಗೆ ತಂಪಾದ, ಒಣ ಸ್ಥಳದಲ್ಲಿ ಇಡಿ.

ಗಾಳಿಯಾಡುವ ಚೀಲಗಳು: ತರಕಾರಿಗಳನ್ನು ರಂಧ್ರವಿರುವ ಪ್ಲಾಸ್ಟಿಕ್ ಚೀಲಗಳಲ್ಲಿ ಅಥವಾ ಗಾಳಿಯಾಡದ ಕಂಟೇನರ್‌ಗಳಲ್ಲಿ ಇಡಿ. ಇದು ತೇವಾಂಶವನ್ನು ಸಮತೋಲನದಲ್ಲಿ ಇಡುತ್ತದೆ.

ತರಕಾರಿ ತೊಳೆಯದಿರುವುದು: ಫ್ರಿಡ್ಜ್‌ಗೆ ಇಡುವ ಮೊದಲು ತರಕಾರಿಗಳನ್ನು ತೊಳೆಯಬೇಡಿ, ಏಕೆಂದರೆ ತೇವಾಂಶ ಕೊಳೆಯುವಿಕೆಯನ್ನು ಉತ್ತೇಜಿಸುತ್ತದೆ ಹಾಗಾಗಿ ಅವುಗಳನ್ನು ಬಳಸುವಾಗ ಮಾತ್ರ ತೊಳೆಯಿರಿ.

ಸರಿಯಾದ ತಪಾಸಣೆ: ಫ್ರಿಡ್ಜ್‌ನ ತರಕಾರಿಗಳನ್ನು ಆಗಾಗ್ಗೆ ಪರಿಶೀಲಿಸಿ. ಏಕೆಂದರೆ ಒಂದು ತರಕಾರಿ ಕೊಳೆತರೆ, ಇತರವುಗಳಿಗೂ ಹರಡುತ್ತದೆ.

(ಏಜೆನ್ಸೀಸ್)

ಟೊಮೇಟೊ: ಇದನ್ನು ಫ್ರಿಡ್ಜ್‌ನ ಮೇಲಿನ ಶೆಲ್ಫ್‌ನಲ್ಲಿ ಇಡಬೇಕು. ಆದರೆ ದೀರ್ಘಕಾಲ ಇಡುವುದನ್ನು ನಿಯಂತ್ರಿಸಬೇಕು. ಸೇಬು, ಬಾಳೆಹಣ್ಣು, ಟೊಮೇಟೊ ಮುಂತಾದವು ಎಥಿಲೀನ್ ಗ್ಯಾಸ್ ಬಿಡುಗಡೆ ಮಾಡುತ್ತವೆ. ಇದು ಇತರ ತರಕಾರಿಗಳನ್ನು ಬೇಗ ಕೊಳೆಯುವಂತೆ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net