ನೀರಿನ ಕೊರತೆ ಬಗ್ಗೆ ಎಚ್ಚರದಿಂದಿರಲೂ ನೀಡುವ ಸೂಚನೆಗಳಿವು; ನೆಗ್ಲೆಕ್ಟ್​ ಮಾಡಿದ್ರೆ ಹೃದಯಕ್ಕೆ ಅಪಾಯ ತಪ್ಪಿದಲ್ಲ..

Untitled-design-2024-08-17T173138.201
Published on

ನೀರು ನಮ್ಮ ದೇಹಕ್ಕೆ ಬೇಕಾಗಿರುವ ಅಗತ್ಯ ವಸ್ತು. ದೇಹದಲ್ಲಿ ನೀರಿನ ಕೊರತೆ ಉಂಟಾದರೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ಕಡಿಮೆ ನೀರು ಕುಡಿಯುವ ಅಭ್ಯಾಸವು ನಿಮ್ಮ ದೇಹದ ಮೇಲೆ ಅನೇಕ ಋಣಾತ್ಮಕ ಪರಿಣಾಮಕ್ಕೆ ಕಾರಣವಾಗವುದು. ಡಿಹೈಡ್ರೇಟ್​​ ಆಗುವುದರಿಂದ ಚರ್ಮಕ್ಕೆ ಮಾತ್ರವಲ್ಲ ದೇಹದ ಅಂಗಾಂಗಳಿಗೂ ಅಪಾಯ ತಪ್ಪಿದ್ದಲ್ಲ. ಅದರಲ್ಲೂ ದೇಹದಲ್ಲಿ ನೀರು ಕಡಿಮೆಯಾದರೆ ಹೃದಯ ಸಂಬಂಧಿ ಸಮಸ್ಯೆಗೆ ಕಾರಣವಾಗಬಹುದು ಎಂಬುದು ನಿಮಗೆ ತಿಳಿದಿದೆಯೇ? ಹಾಗಾದ್ರೆ ಡಿಹೈಡ್ರೇಟ್​​ ಆಗುವುದರಿಂದ ಆಗುವ ತೊಂದರೆ ಏನು.. ನಮಗೆ ಡಿಹೈಡ್ರೇಟ್​ ಆಗಿದೆ ಎಂದು ತಿಳಿದುಕೊಳ್ಳುವುದು ಹೇಗೆ..ಎಂಬುದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಇದನ್ನು ಓದಿ: ದೀರ್ಘಾಯುಷ್ಯ ನಿಮ್ಮದಾಗ್ಬೇಕಾ..? ಹಾಗಾದರೆ ಈ ಸಿಂಪಲ್​​ ಟಿಪ್ಸ್​ ಫಾಲೋ ಮಾಡಿ.. ನೀರಿನ ಕೊರತೆಯಿದೆ ಈ ಮೂಲಕ ದೇಹವು ನಮಗೆ ಸೂಚಿಸುತ್ತದೆ:

  • ತಲೆತಿರುಗುವಿಕೆ
  • ದಣಿದ ಅಥವಾ ಆಯಾಸದ ಭಾವನೆ
  • ತಲೆನೋವು
  • ಒಣ ಅಥವಾ ಜಿಗುಟಾದ ಬಾಯಿ
  • ಗುಳಿಬಿದ್ದ ಕಣ್ಣುಗಳು
  • ಸಾಮಾನ್ಯಕ್ಕಿಂತ ಕಡಿಮೆ ಬಾರಿ ಮೂತ್ರವಿಸರ್ಜನೆ

ಡಿಹೈಡ್ರೇಟ್​ ಆಗುವುದರಿಂದ ಬರುವ ಸಮಸ್ಯೆ: ಅನಿಯಮಿತ ಹೃದಯ ಬಡಿತ: ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಕಷ್ಟು ನೀರು ಕುಡಿಯುವುದು ಮುಖ್ಯ. ದೇಹದಲ್ಲಿನ ನೀರಿನ ಕೊರತೆಯು ಎಲೆಕ್ಟ್ರೋಲೈಟ್ ಮಟ್ಟದಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಅಲ್ಲದೆ ಪ್ಲಾಸ್ಮಾದ ಪರಿಮಾಣವನ್ನು ಕಡಿಮೆ ಮಾಡುತ್ತದೆ. ಇದು ಹೃದಯ ಬಡಿತದ ಮೇಲೆ ಪರಿಣಾಮ ಬೀರುತ್ತದೆ.

ರಕ್ತದ ಹರಿವು ಕಡಿಮೆಯಾಗುತ್ತದೆ: ನೀರಿನ ಕೊರತೆಯು ರಕ್ತದ ಗಾತ್ರದಲ್ಲಿ ಬದಲಾವಣೆ ಮಾಡುತ್ತದೆ. ಇದು ದೇಹದಲ್ಲಿ ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ. ಆ ಸಮಯದಲ್ಲಿ ರಕ್ತವನ್ನು ಪಂಪ್ ಮಾಡಲು ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ. ಇದು ಅಧಿಕ ರಕ್ತದೊತ್ತಡ ಮತ್ತು ಇತರ ಹೃದಯ ಸಮಸ್ಯೆಗಳನ್ನು ಉಂಟುಮಾಡಬಹುದು.

ಮೂತ್ರಪಿಂಡದ ಮೇಲೆ ನಕಾರತ್ಮಾಕ ಪರಿಣಾಮ: ನೀರಿನ ಕೊರತೆಯು ಮೂತ್ರಪಿಂಡಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಮೂತ್ರಪಿಂಡದ ತೊಂದರೆಗಳು ಹೃದಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಏಕೆಂದರೆ ಎರಡೂ ಅಂಗಗಳು ಪರಸ್ಪರ ಸಂಬಂಧ ಹೊಂದಿವೆ.

ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ: ನೀರಿನ ಕೊರತೆಯಿಂದಾಗಿ ಚಯಾಪಚಯವು ನಿಧಾನಗೊಳ್ಳುತ್ತದೆ. ಇದು ದೇಹದಲ್ಲಿ ಕೊಬ್ಬು ಮತ್ತು ವಿಷವನ್ನು ಹೆಚ್ಚಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಇದು ಹೃದಯದ ಅಪಧಮನಿಗಳಲ್ಲಿ ಕೆಡುಕನ್ನುಂಟು ಮಾಡುವ ಸಾಧ್ಯತೆಯನ್ನು ಹೆಚ್ಚಿಸಬಹುದು.

ದುರ್ವಾಸನೆ: ದೇಹದಲ್ಲಿ ನೀರಿನ ಕೊರತೆಯಾದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಲಾಲಾರಸದ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಬ್ಯಾಕ್ಟೀರಿಯಾಗಳು ವೃದ್ಧಿಯಾಗುತ್ತವೆ. ಇದು ಬಾಯಿಯಿಂದ ದುರ್ವಾಸನೆ ಉಂಟಾಗಲು ಕಾರಣವಾಗುತ್ತದೆ. ಜತೆಗೆ ಬಾಯಿ ಒಣಗಲು ಆರಂಭವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net