ವಾಶ್​​ಬೇಸಿನ್​ನಿಂದ ಕೆಟ್ಟ ವಾಸನೆ ಬರುತ್ತಿದ್ಯಾ? ಈ ಟಿಪ್ಸ್​​ ಬಳಸಿ ಕ್ಷಣಾರ್ಧದಲ್ಲಿ ದುರ್ವಾಸನೆ ಮಾಯ

Untitled-design-2024-08-18T194006.919
Published on

ವಾಶ್​​ಬೇಸಿನ್​​ ಕ್ಲೀನ್​ ಆದ ಬಳಿಕವೂ ದುರ್ವಾಸನೆ ಬರುತ್ತೆ ಅಂತಾ ಆಲೋಸಿಚುತಿದ್ದೀರಾ..? ಪೈಪ್​ಗಳಲ್ಲಿ ಶೇಕರಣೆಯಾಗಿರುವ ತ್ಯಾಜ್ಯ ವಸ್ತುಗಳು, ಬ್ಯಾಕ್ಟೀರಿಯಾ, ಟ್ಯಾಪ್​ನಿಂದ ಕೊಳಕು ಮತ್ತು ದುರ್ವಾಸನೆ ನೀರು ಹೀಗೆ ಅದಕ್ಕೆ ಹಲವು ಕಾರಣಗಳಿರಬಹುದು. ಆದರೆ ಅದರ ದುರ್ವಾಸನೆಯಿಂದ ಮನೆಯಲ್ಲಿ ಏನೋ ಒಂದು ರೀತಿ ಕಿರಿಕಿರಿ ಆಗುತ್ತಿರುತ್ತೆ. ಅದಕ್ಕೆಲ್ಲಾ ಫುಲ್​ಸ್ಟಾಪ್​ ಇಡಬೇಕು ಎಂದರೆ ನೀವು ಈ ಟಿಪ್ಸ್​ಗಳನ್ನು ಬಳಸಿ. ಸರಿಯಾಗಿ ಸ್ವಚ್ಛಗೊಳಿಸುವುದರ ಜತೆಗೆ ಈ ಸಿಂಪಲ್​​ ಟಿಪ್ಸ್​ ಅನುಸರಿಸಿದ್ರೆ ಅದರ ಫಲಿತಾಂಶ ನಿಮಗೆ ತಿಳಿಯುತ್ತದೆ.

ಇದನ್ನು ಓದಿ: ಈ ಕಾಯಿಲೆ ಇರುವವರಿಗೆ ಪನೀರ್​ನಿಂದ ಅಪಾಯ ತಪ್ಪಿದಲ್ಲ; ​ಬಳಸುವ ಮುನ್ನ ಎಚ್ಚರ.. ವಾಶ್ ಬೇಸಿನ್ ದುರ್ವಾಸನೆ ಹೋಗಲಾಡಿಸಲು ಇರುವ ಸಿಂಪಲ್​ ಮಾರ್ಗ:

  • ನಿಂಬೆ ರಸ: ನಿಂಬೆ ರಸವು ದುರ್ವಾಸನೆ ಮತ್ತು ಕೊಳೆಯನ್ನು ತೊಡೆದುಹಾಕಲು ಸಾಕಷ್ಟು ಪರಿಣಾಮಕಾರಿಯಾಗಿದೆ. ವಾಶ್ ಬೇಸಿನ್​ ಅನ್ನು ಸ್ವಚ್ಛಗೊಳಿಸಲು ನೀವು ನಿಂಬೆ ರಸವನ್ನು ಬಳಸಬಹುದು. ನಿಂಬೆ ರಸದ ಕೆಲವು ಹನಿಗಳನ್ನು ವಾಶ್ ಬೇಸಿನ್‌ನ ಉದ್ದಕ್ಕೂ ಅನ್ವಯಿಸಿ. 30 ನಿಮಿಷಗಳ ಕಾಲ ಬಿಟ್ಟು ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
  • ಬಿಳಿ ವಿನೆಗರ್​​: ವಾಶ್ ಬೇಸಿನ್​​ನಿಂದ ಬರುವ ವಾಸನೆಯನ್ನು ತಡೆಯಲು ಬಿಳಿ ವಿನೆಗರ್ ಉತ್ತಮ ಆಯ್ಕೆಯಾಗಿದೆ. ಅರ್ಧ ಕಪ್ ಬಿಳಿ ವಿನೆಗರ್ ಅನ್ನು ವಾಶ್ ಬೇಸಿನ್‌ಗೆ ಹಾಕಿ ಅರ್ಧ ಘಂಟೆ ಬಿಡಿ. ನಂತರ ಬಿಸಿ ನೀರಿನಿಂದ ಸ್ವಚ್ಚಗೊಳಿಸಿ ಪೈಪ್​​ನಲ್ಲಿರುವ ತ್ಯಾಜ್ಯವನ್ನು ತೊಡೆದು ಹಾಕುತ್ತದೆ. ಇದರಿಂದ ವಾಸನೆ ಬರುವುದಿಲ್ಲ.
  • ಬೇಕಿಂಗ್ ಪೌಡರ್ ಮತ್ತು ಉಪ್ಪು: ಈ ಎರಡು ವಸ್ತುಗಳನ್ನು ಬೆರೆಸಿ ತಯಾರಿಸಿದ ಮಿಶ್ರಣವು ನೈಸರ್ಗಿಕ ಕ್ಲೀನರ್ ಆಗಿ ಕೆಲಸ ಮಾಡುತ್ತದೆ. ಅರ್ಧ ಕಪ್ ಅಡಿಗೆ ಸೋಡಾ ಮತ್ತು 1/4 ಕಪ್ ಟೇಬಲ್ ಸ್ಪೂನ್​​ ಉಪ್ಪನ್ನು ಮಿಶ್ರಣ ಮಾಡಿ. ವಾಶ್​ಬೇಸಿನ್​​ಗೆ ಹಾಕಿ 15 ನಿಮಿಷಗಳ ನಂತರ 30 ಸೆಕೆಂಡ್​ ಬಕೆಟ್ ನೀರನ್ನು ಸುರಿಯಿರಿ. ಇದರಿಂದ ದುರ್ವಾಸನೆ ಬರುವುದು ನಿಲ್ಲುತ್ತದೆ.
  • ಕುದಿಯುವ ನೀರಿನಿಂದ ಸ್ವಚ್ಚಗೊಳಿಸಿ: ವಾಶ್​​ಬೇಸಿನ್​ನಲ್ಲಿ ಅನೇಕ ರೀತಿಯ ಸೂಕ್ಷ್ಮಜೀವಿಗಳು ಸಂಗ್ರಹವಾಗಿರುತ್ತವೆ. ವಾರಕ್ಕೆ ಕನಿಷ್ಠ 3 ಬಾರಿ ಸ್ವಲ್ಪ ಬಿಸಿ ನೀರಿನಿಂದ ಸ್ವಚ್ಛಗೊಳಿಸಿ. ಕುದಿಯುವ ನೀರನ್ನು ಡ್ರೈನ್‌ಗೆ ಸುರಿಯಿರಿ. ಐದು ನಿಮಿಷಗಳ ನಂತರ ಸಮಾನ ಪ್ರಮಾಣದ ತಣ್ಣೀರನ್ನು ಸುರಿಯಿರಿ. ಇದು ವಾಸನೆಯನ್ನು ಹೋಗಲಾಡಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net