ದೇಹದಲ್ಲಾಗುವ ಈ ಬದಲಾವಣೆಗಳನ್ನು ನಿರ್ಲಕ್ಷಿಸಬೇಡಿ: ಇದು ಹೃದಯಾಘಾತದ ಮುನ್ಸೂಚನೆ.. ಎಚ್ಚರ

Untitled-design-2024-08-17T181605.270
Published on

ಇತ್ತೀಚೆಗೆ ಹೃದಯಾಘಾತದಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾರ್ಟ್​ಅಟ್ಯಾಕ್​ ಆಗಲು ಇಷ್ಟೆ ವಯಸ್ಸಿರಬೇಕೆಂಬ ಮಿತಿಯೇನು ಇಲ್ಲ. ಅದರಲ್ಲೂ ಮಧ್ಯವಯಸ್ಕಿನವರು ಈ ಸಮಸ್ಯೆಗೆ ಒಳಾಗಾಗುತ್ತಿರುವುದು ಬೇಸರದ ಸಂಗತಿ. ಪ್ರಸ್ತುತ ಒತ್ತಡದ ಜೀವನಶೈಲಿಯೂ ಇದಕ್ಕೆ ಕಾರಣವಿರಬಹುದು. ಹೃದಯಾಘಾತವಾಗುವುದನ್ನು ನಾವು ತಡೆಯಬಹುದು. ಅದಕ್ಕೆ ಮುಖ್ಯವಾಗಿ ನಮ್ಮ ಆಹಾರಪದ್ಧತಿ ಕ್ರಮವಾಗಿರಬೇಕು. ಆಲ್ಕೋಹಾಲ್​ ಅಥವಾ ತಂಬಾಕು ಸೇವನೆಯಿಂದ ದೂರವಿರಬೇಕು. ಇದನ್ನು ಅನುಸರಿಸಿದರೆ ಶೇ.90ರಷ್ಟು ನಾವು ಆರೋಗ್ಯವಂತರಾಗಿರುತ್ತೇವೆ.

ಹಾರ್ಟ್​ಅಟ್ಯಾಕ್​ ಆಗುವ ಮುನ್ನ ನಮ್ಮ ದೇಹ ನಮಗೆ ಎಚ್ಚರಿಸುತ್ತದೆ. ಅದನ್ನು ನಾವು ಅರ್ಥಮಾಡಿಕೊಳ್ಳಬೇಕು. ಹೃದಯಾಘಾತದ ಲಕ್ಷಣಗಳನ್ನು ಗುರುತಿಸುವಲ್ಲಿ ನಾವು ತಪ್ಪು ಮಾಡುತ್ತೇವೆ. ನೀವು ಸಾಮಾನ್ಯ ಸಮಸ್ಯೆ ಎಂದು ಪರಿಗಣಿಸುವ ವಿಷಯವು ನಿಮಗೆ ಮಾರಕವಾಗುವುದು. ನಮ್ಮ ಜೀವನಶೈಲಿಗೆ ಸಂಬಂಧಿಸಿದ ಅಜಾಗರೂಕತೆಯು ಹೃದಯದ ಆರೋಗ್ಯವನ್ನು ಹಾಳುಮಾಡುತ್ತದೆ. ಹೃದಯಾಘಾತದಲ್ಲಿ ನೋವು ಎದೆಯಲ್ಲಿ ಮಾತ್ರ ಎಂಬುದು ಅನಿವಾರ್ಯವಲ್ಲ ಎಂದು ತಜ್ಞರು ಹೇಳುತ್ತಾರೆ. ದೇಹದಲ್ಲಿ ಈ ಕೆಳಗಿ ತಿಳಿಸಿರುವ ರೋಗಲಕ್ಷಣಗಳು ಕಂಡುಬಂದರೆ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

  • ರಾತ್ರಿಯಲ್ಲಿ ಹೊಟ್ಟೆ, ಭುಜ, ಬೆನ್ನು, ದವಡೆ, ಕುತ್ತಿಗೆ ಅಥವಾ ಗಂಟಲಿನಲ್ಲಿ ನೋವು ಇದ್ದರೆ ನೀವು ಎಚ್ಚರದಿಂದಿರಬೇಕು. ಮಹಿಳೆಯರಿಗೆ ಆಗಾಗ್ಗೆ ಎದೆಯ ಕೆಳಭಾಗದಲ್ಲಿ ನೋವು ಇರುತ್ತದೆ. ಜನರು ಇದನ್ನು ಅಸಿಡಿಟಿ ಎಂದುಕೊಳ್ಳುತ್ತಾರೆ. ಅಸಿಡಿಟಿ ಆಗಿರಬಹುದು ಆದರೆ ಉಸಿರುಗಟ್ಟಿಸುವುದು ಅಥವಾ ಆಯಾಸದ ಅನುಭವವಾದರೆ ನಿರ್ಲಕ್ಷ ಬೇಡ.
  • ನಿದ್ದೆ ಮಾಡುವಾಗ ಹೆಚ್ಚು ಬೆವರುವುದು ಹಾಗೂ ಉಸಿರಾಟದ ತೊಂದರೆ ಅನುಭವಿಸುವುದು ಕೂಡ ಹೃದ್ರೋಗದ ಲಕ್ಷಣವಾಗಿರಬಹುದು.
  • ದೇಹದ ಎಲ್ಲಾ ಅಂಗಾಂಗಗಳಿಗೆ ಹೃದಯ ರಕ್ತವನ್ನು ಪೂರೈಸುತ್ತದೆ. ಇದಕ್ಕಾಗಿ ಹೃದಯ ಹೆಚ್ಚು ಶ್ರಮಿಸಬೇಕಾಗುತ್ತದೆ. ಆದರೆ ಯಾವುದೇ ಕಾರಣವಿಲ್ಲದೆ ನೀವು ಆಯಾಸವನ್ನು ಪಡುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ.
  • ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎಂದಿಗೂ ಲಘುವಾಗಿ ಪರಿಗಣಿಸಬೇಡಿ. ಆರೋಗ್ಯವು ಉತ್ತಮವಾಗಿರಲು ಆರೋಗ್ಯಕರ ಹೊಟ್ಟೆಯನ್ನು ಹೊಂದಿರುವುದು ಬಹಳ ಮುಖ್ಯ. ನೀವು ಆಗಾಗ್ಗೆ ಮಲಬದ್ಧತೆ ಅಥವಾ ಅತಿಸಾರವನ್ನು ಅನುಭವಿಸುತ್ತಿದ್ದರೆ, ಅದರಲ್ಲೂ ವಿಶೇಷವಾಗಿ 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಪೂರ್ಣ ದೇಹದ ತಪಾಸಣೆಯನ್ನು ಮಾಡಿಸಿ. ಈ ಮೇಲಿನ ಯಾವುದೇ ಲಕ್ಷಣಗಳು ಕಂಡುಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net