

ನಮ್ಮ ದೇಹವು ಎಷ್ಟು ಸೂಕ್ಷ್ಮ ಎಂಬುದು ಗೊತ್ತೆ ಇದೆ. ದೇಹದಲ್ಲಿ ಏನಾದರೂ ತೊಂದರೆಯಾದರೆ ತಕ್ಷಣವೇ ಅದನ್ನು ನಾವು ಗ್ರಹಿಸಲು ಸಹಕಾರಿಯಾಗುವಂತೆ ಕೆಲವು ಸಂಕೇತಗಳನ್ನು ನೀಡುತ್ತದೆ. ಅಂದರೆ ದೇಹದಲ್ಲಿ ಸಣ್ಣ ಮತ್ತು ದೊಡ್ಡ ಬದಲಾವಣೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅನೇಕ ಬಾರಿ ನಾವು ಅದನ್ನು ನಿರ್ಲಕ್ಷಿಸುತ್ತೇವೆ. ಆದರೆ ನಮ್ಮ ದೇಹದ ಅಂಗಾಂಗಗಳು ನಮ್ಮ ಆರೋಗ್ಯದ ನೈಜ ಸ್ಥಿತಿ ಹೇಳಬಲ್ಲವು ಎಂದು ನಿಮಗೆ ತಿಳಿದಿದೆಯೇ? ಅಂತಹ ಸ್ಥಿತಿಯಲ್ಲಿ ಸರಿಯಾದ ಸಮಯದಲ್ಲಿ ರೋಗಲಕ್ಷಣಗಳನ್ನು ಗುರುತಿಸುವುದರಿಂದ ಚಿಕಿತ್ಸೆ ಪಡೆಯಲು ಸುಲಭವಾಗುತ್ತದೆ. ಇಲ್ಲಿ ಪಾದದಲ್ಲಿ ಆಗುವ ಬದಲಾವಣೆ ಯಾವ ರೋಗವನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ.