ತೂಕ ಇಳಿಸುವ ಚಿಂತೆಯೇ?; ಫಿಟ್ನೆಸ್​​ ಫೀಕ್​​ಗಳಾಗಿದ್ರೆ ತಪ್ಪದೇ ಈ ಟಿಪ್ಸ್​ ಫಾಲೋ ಮಾಡಿ

Untitled-design-38
Published on

ಪ್ರತಿಯೊಬ್ಬರಿಗೂ ಫಿಟ್ನೆಸ್​​ ಮತ್ತು ಆರೋಗ್ಯದ ಬಗ್ಗೆ ಬಹಳ ಕಾಳಜಿ ಇರುತ್ತದೆ. ತೂಕವನ್ನು ನಿಯಂತ್ರಣದಲ್ಲಿಡಲು ಹರಸಾಹಸ ಪಡುವುದನ್ನು ನಾವು ನೋಡುತ್ತೇವೆ. ತಮ್ಮ ದೇಹವನ್ನು ಸದೃಢವಾಗಿಡಲು ಒಂದಲ್ಲ ಒಂದು ಪ್ರಯತ್ನ ಮಾಡುತ್ತಿರುತ್ತಾರೆ. ಅದಕ್ಕಾಗಿಯೇ ನಮ್ಮ ದೈನಂದಿನ ಜೀವನದಲ್ಲಿ ಜಿಮ್​​, ವಾಕ್​, ಮನೆಯಲ್ಲಿ ವ್ಯಾಯಾಮ,ಯೋಗ ಹೀಗೆ ಹಲವು ಅಭ್ಯಾಸಗಳನ್ನು ಫಾಲೋ ಮಾಡುತ್ತೇವೆ.​ ದೈಹಿಕವಾಗಿ ಮಾತ್ರವಲ್ಲ ಹೊಟ್ಟೆಯನ್ನು ಕಟ್ಟುತ್ತಾರೆ. ಅಂದರೆ ತಿನ್ನಲು ಆಸೆಯಿದ್ದರೂ ಡಯಟ್​ ಮಾಡುವುದರಿಂದ ಎಲ್ಲಾ ತಿನಿಸುಗಳಿಗೂ ಬ್ರೇಕ್​ ಹಾಕುತ್ತಾರೆ.

ಆದ್ರೆ ತೂಕ ಇಳಿಸಿಕೊಳ್ಳು ಈ ಎಲ್ಲವನ್ನು ಅನುಸರಿಸಬೇಕು ಎಂಬುದೇನು ಇಲ್ಲ. ನಾವು ಮಾಡುವ ಕೆಲಸವನ್ನೆ ಸರಿಯಾಗಿ ಅನುಸರಿಸಿದರೆ ಉತ್ತಮ ಫಲಿತಾಂಶ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ನೀವು ದಿನನಿತ್ಯ ಮಾಡುವ ವ್ಯಾಯಾಮದಲ್ಲಿ ಕೆಲವು ತಪ್ಪುಗಳಿರುತ್ತವೆ. ಅದನ್ನು ತಪ್ಪಿಸಿದ್ರೆ ಸಾಕು ನಿಮ್ಮ ಹೆಲ್ತಿ ಲೈಫ್​ ಜತೆಗೆ ಫಿಟ್ನೆಸ್​ ಕೂಡ ಇರುತ್ತೆ. ನಾವು ಮಾಡುವ ಸಾಧಾರಣ ತಪ್ಪುಗಳು ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

  • ತೂಕ ಇಳಿಸಿಕೊಳ್ಳುವ ಉದ್ದೇಶದಿಂದ ಪ್ರತಿದಿನ ಹೊಸ ವಿಧಾನಗಳನ್ನು ಅಳವಡಿಸಿಕೊಂಡು ವ್ಯಾಯಾಮ ಮಾಡುವ ಬದಲು, ಈಗಾಗಲೇ ಅಭ್ಯಾಸ ಮಾಡುತ್ತಿರುವ ವ್ಯಾಯಮವನ್ನು ನಿರಂತರವಾಗಿ ಮಾಡಬೇಕು. ಅಯ್ಯೋ ಆಯಾಸವಾಗುತ್ತೆ ಎಂದು 2 ರಿಂದ 3 ದಿನಗಳ ಬ್ರೇಕ್​ ಪಡೆದು ಮತ್ತೆ ಆರಂಭಿಸೋಣ ಎಂದುಕೊಳ್ಳದೆ ಪ್ರತಿ ನಿತ್ಯ ವ್ಯಾಯಾಮ ಮಾಡಿ. ಆರಂಭದಲ್ಲಿ ಕಡಿಮೆ ಸಮಯ ವ್ಯಾಯಾಮ ಮಾಡಿ ಕ್ರಮೇಣ ಸಮಯವನ್ನು ಹೆಚ್ಚಿಸಿಕೊಳ್ಳಿ. ಇದರಿಂದ ಉತ್ತಮ ಫಲಿತಾಂಶ ಸಿಗಲಿದೆ.
  • ಜಿಮ್‌ನಲ್ಲಿ ಗಂಟೆಗಂಟಲೇ ವರ್ಕ್​ಔಟ್​​ ಮಾಡುತ್ತಾ ಕಾಲ ಕಳೆಯುವುದು ಅಥವಾ ಬೆಳಗಿನ ವಾಕ್ ಮಾಡುವುದು ಸಾಕು ಎಂದು ಕೆಲವರು ಭಾವಿಸುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಎಲ್ಲ ಶ್ರಮ ಹಾಳಾಗಬಹುದು. ಅದರ ಬದಲಿಗೆ ಚಿಕ್ಕ ಕೆಲಸವೇ ಆಗಲಿ ದಿನವಿಡೀ ದೈಹಿಕವಾಗಿ ಸಕ್ರಿಯವಾಗಿರಬೇಕು.
  • ತೂಕ ಇಳಿಸಲು ಊಟವನ್ನು ಬಿಡುವ ಬದಲು ಆರೋಗ್ಯಕರ ಊಟದ ಪದ್ಧತಿ ಅನುಸರಿಸಿ. ನೀವು ಸೇವಿಸುವ ಆಹಾರದಲ್ಲಿ ಪ್ರೋಟೀನ್ ಭರಿತ ವಸ್ತುಗಳನ್ನು ಬಳಸಿ. ಹೆಚ್ಚಿನ ಕ್ಯಾಲೋರಿ ಇರುವ ಆಹಾರವನ್ನು ತಪ್ಪಿಸಬೇಕು. ಕಡಿಮೆ ತಿನ್ನುವ ಮೂಲಕ ತೂಕವನ್ನು ಕಳೆದುಕೊಳ್ಳುವ ಆಲೋಚನೆಯಲ್ಲಿದ್ದರೆ ಅದು ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ, ಅಂದರೆ ನಿಮ್ಮ ತೂಕವು ಕಡಿಮೆಯಾಗುವ ಬದಲು ಹೆಚ್ಚಾಗಬಹುದು. ಅಥವಾ ಅನಾರೋಗ್ಯ ಉಂಟಾಗಬಹುದು.
  • ವಾಕಿಂಗ್ ಮಾಡುವಾಗ ವೇಗವನ್ನು ಬದಲಾಯಿಸುತ್ತಲೇ ಇರಿ. ಇದನ್ನು ಬೆಳಗ್ಗೆ ಮಾತ್ರ ಮಾಡಬೇಕು ಎಂಬ ಅಗತ್ಯವಿಲ್ಲ. ರಾತ್ರಿ ಊಟದ ನಂತರವೂ ವಾಕ್ ಮಾಡಬಹುದು. ಇದು ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ದೇಹವನ್ನು ಫಿಟ್ ಆಗಿ ಇಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net