ನಿಮ್ಮ ಥೈರಾಯ್ಡ್​ ಗ್ರಂಥಿಯನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ನೀವು ಗಮನದಲ್ಲಿಡಬೇಕಾದ ಅಂಶಗಳಿವು…

Thyroid Healthy
Published on

ಕುತ್ತಿಗೆಯಲ್ಲಿರುವ ಥೈರಾಯ್ಡ್ ಗ್ರಂಥಿಯು ಮಾನವನ ದೇಹದ ಪ್ರಮಖ ಅಂಗವಾಗಿದ್ದು, ದೇಹದ ಪ್ರಮುಖ ಕಾರ್ಯಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಚರ್ಮದ ಅಡಿಯಲ್ಲಿ ನಿಮ್ಮ ಕುತ್ತಿಗೆಯ ಮುಂಭಾಗದಲ್ಲಿ ಇರುವ ಒಂದು ಸಣ್ಣ ಚಿಟ್ಟೆ ಆಕಾರದ ಗ್ರಂಥಿಯಾಗಿದೆ. ಈ ಗ್ರಂಥಿಯು ಅಂತಃಸ್ರಾವಕ ವ್ಯವಸ್ಥೆಯ ಒಂದು ಭಾಗವಾಗಿದೆ ಮತ್ತು ಕೆಲವು ಹಾರ್ಮೋನುಗಳನ್ನು ಉತ್ಪಾದಿಸುವ ಮತ್ತು ಬಿಡುಗಡೆ ಮಾಡುವ ಮೂಲಕ (ಸ್ರವಿಸುವ) ದೇಹದ ಪ್ರಮುಖ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಥೈರಾಯ್ಡ್ ಗ್ರಂಥಿಯು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಹಲವು ಗಂಭೀರ ಆರೋಗ್ಯ ಸಮಸ್ಯೆಗಳು ಸಹ ಉಂಟಾಗಬಹುದು.

ಥೈರಾಯ್ಡ್​ ಸಮಸ್ಯೆ ಉಂಟಾಗಲು ಕಾರಣವೇನು?

* ಅಯೋಡಿನ್ ಕೊರತೆ

* ಪ್ರತಿರಕ್ಷಣಾ ವ್ಯವಸ್ಥೆಯು ಥೈರಾಯ್ಡ್ ಮೇಲೆ ದಾಳಿ ಮಾಡುವ ಆಟೋಇಮ್ಯೂನ್ ಕಾಯಿಲೆಗಳು, ಇದು ಹೈಪೋಥೈರಾಯ್ಡಿಸಮ್ ಅಥವಾ ಹೈಪರ್ ಥೈರಾಯ್ಡಿಸಮ್​ಗೆ ಕಾರಣವಾಗುತ್ತದೆ.

* ವೈರಸ್​ ಅಥವಾ ಬ್ಯಾಕ್ಟೀರಿಯಾದಿಂದ ಉರಿಯೂತ

* ಗಂಟುಗಳು ಅಥವಾ ಕ್ಯಾನ್ಸರ್ ಅಲ್ಲದ ಗಡ್ಡೆಗಳು

* ಕ್ಯಾನ್ಸರ್ ಗಡ್ಡೆಗಳು

* ವಿಕಿರಣ ಚಿಕಿತ್ಸೆ, ಥೈರಾಯ್ಡ್ ಶಸ್ತ್ರಚಿಕಿತ್ಸೆ ಮತ್ತು ಕೆಲವು ಔಷಧಗಳು ಸೇರಿದಂತೆ ವೈದ್ಯಕೀಯ ಚಿಕಿತ್ಸೆಗಳು

* ಕೆಲ ಅನುವಂಶೀಯ ಕಾಯಿಲೆಗಳು

ಥೈರಾಯ್ಡ್ ಚಯಾಪಚಯ, ತಾಪಮಾನ ಮತ್ತು ಹೃದಯ ಬಡಿತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಥೈರಾಯ್ಡ್ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಮಾಡಬಹುದಾದ ಕೆಲವು ವಿಷಯಗಳು ಇಲ್ಲಿವೆ. ಆರೋಗ್ಯಕರ ಥೈರಾಯ್ಡ್ ಅನ್ನು ಕಾಪಾಡಿಕೊಳ್ಳಲು ನೀವು ಮಾಡಬಹುದಾದ ಪ್ರಮುಖ ವಿಷಯವೆಂದರೆ ಸಮತೋಲಿತ ಆಹಾರವನ್ನು ಸೇವಿಸುವುದು. ಅದರಲ್ಲೂ ಮೆಡಿಟರೇನಿಯನ್ ಆಹಾರಕ್ರಮ ಉತ್ತಮ. ಮೆಡಿಟರೇನಿಯನ್ ಆಹಾರಕ್ರಮದ ಆಹಾರಗಳು ಇಲ್ಲಿವೆ...

* ಹಣ್ಣುಗಳು

* ತರಕಾರಿಗಳು

* ಬೀನ್ಸ್​

* ಕಾಳುಗಳು

* ಮೀನು ಮತ್ತು ಸಮುದ್ರ ಆಹಾರಗಳು

* ನಟ್ಸ್​ ಮತ್ತು ಬೀಜಗಳು

* ಆರೋಗ್ಯಕರ ಎಣ್ಣೆ

ಅಯೋಡಿನ್ ಕೊರತೆಯು ಥೈರಾಯ್ಡ್ ಗ್ರಂಥಿ ಮತ್ತು ಹೈಪೋಥೈರಾಯ್ಡಿಸಮ್​ಗೆ ಒಂದು ಪ್ರಮುಖ ಕಾರಣವಾಗಿದೆ. ನಿಮ್ಮ ಥೈರಾಯ್ಡ್‌ಗೆ ಒಂದು ವರ್ಧಕ ಅಗತ್ಯವಿದೆ ಎಂದು ನಿಮಗೆ ಅನಿಸಿದರೆ, ಸೆಲೆನಿಯಮ್ ಅಥವಾ ವಿಟಮಿನ್ ಡಿ ತೆಗೆದುಕೊಳ್ಳುವ ಬಗ್ಗೆ ತಕ್ಷಣ ವೈದ್ಯರೊಂದಿಗೆ ನೀವು ಮಾತನಾಡಿ. ವೈದ್ಯರು ಪ್ರೋಬಯಾಟಿಕ್‌ಗಳನ್ನು ತೆಗೆದುಕೊಳ್ಳುವಂತೆ ಶಿಫಾರಸು ಮಾಡುತ್ತಾರೆ, ಇದು ಸಂಪೂರ್ಣ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net