ಅಜೀರ್ಣ ತೊಂದರೆಗೆ ಈ ಮನೆಮದ್ದುಗಳು: ಇಂದೇ ಟ್ರೈ ಮಾಡಿ!| Home remedies

untitled-design-2025-09-19t180228060-68cd4d6e53cf3
Published on

 Home remedies: ಇಂದಿನ ದಿನಗಳಲ್ಲಿ ನಾವು ಸೇವಿಸುವ ಆಹಾರಗಳು ಸರಿಯಾಗಿ ಜೀರ್ಣಕ್ರಿಯೆಯಾಗದೆ ಹಲವಾರು ಜನರು ಅಜೀರ್ಣದಂತಹ ಸಮಸ್ಯೆಯಿಂದ ಬಳಲಾರಂಭಿಸುತ್ತಾರೆ. ಇದು ಹೊಟ್ಟೆಯ ಉಬ್ಬಸ, ಆಮ್ಲತೆ, ವಾಯು, ಅಥವಾ ಜೀರ್ಣಕ್ರಿಯೆಯ ತೊಂದರೆಯಿಂದ ಉಂಟಾಗುತ್ತದೆ. ಇದನ್ನು ತಡೆಯಲು ಹಲವಾರು ರೀತಿಯ ಔಷಧಗಳನ್ನು ಸೇವಿಸಿದರೂ, ಕೆಲವೊಮ್ಮೆ ಕಡಿಮೆಯಾಗದೆ ಒದ್ದಾಟ ನಡೆಸುತ್ತಾರೆ. ಈ ಎಲ್ಲಾ ಸಮಸ್ಯೆಗಳಿಗೆ ನೀವು ಸುಲಭವಾಗಿ ಮನೆಯಲ್ಲೇ ಔಷಧಿಗಳನ್ನು ಮಾಡಿ ಅಜೀರ್ಣ ಸಮಸ್ಯೆಯನ್ನು ದೂರ ಮಾಡಿ...

1.ಶುಂಠಿ

ಶುಂಠಿಯು ಜೀರ್ಣಕಾರಿ ವ್ಯವಸ್ಥೆಗೆ ಅತ್ಯುತ್ತಮವಾದ ನೈಸರ್ಗಿಕ ಔಷಧಿಯಾಗಿದೆ. ಇದರಲ್ಲಿರುವ ಜಿಂಜರಾಲ್ ಮತ್ತು ಶೋಗಾಲ್ ಎಂಬ ಸಂಯುಕ್ತಗಳು ಜೀರ್ಣಕ್ರಿಯೆಯನ್ನು ಉತ್ತೇಜಿಸಿ, ಉಬ್ಬಸವನ್ನು ಕಡಿಮೆ ಮಾಡುತ್ತವೆ. ಊಟ ಆದ ಬಳಿಕ ಒಂದು ಚಿಕ್ಕ ತುಂಡು ತಾಜಾ ಶುಂಠಿಯನ್ನು ಜಗಿಯುವುದು ಅಥವಾ ಒಂದು ಗ್ಲಾಸ್ ಬಿಸಿನೀರಿನಲ್ಲಿ ಶುಂಠಿಯನ್ನು ಕುದಿಸಿ, ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಅರ್ಜೀ ಸಮಸ್ಯೆಯನ್ನು ದೂರ ಮಾಡಬಹುದು. ಶುಂಠಿ ಚಹಾವು ವಾಂತಿ ಮತ್ತು ವಾಯು ಸಮಸ್ಯೆಗೂ ಪರಿಹಾರ ನೀಡುತ್ತದೆ. ಒಂದು ಚಿಟಿಕೆ ಶುಂಠಿ ಪುಡಿಯನ್ನು ಮಜ್ಜಿಗೆಯೊಂದಿಗೆ ಸೇವಿಸುವುದರಿಂದಲೂ ಅಜೀರ್ಣ ಸಮಸ್ಯೆಯನ್ನು ದೂರ ಮಾಡಬಹುದು.

2. ಸೋಂಪು

ಸೋಂಪು ಬೀಜಗಳು ಜೀರ್ಣಕಾರಿ ಗುಣಗಳಿಂದ ಕೂಡಿದ್ದು, ಹೊಟ್ಟೆಯ ಉರಿ ಮತ್ತು ವಾಯುವನ್ನು ಕಡಿಮೆ ಮಾಡುತ್ತವೆ. ಊಟದ ನಂತರ ಒಂದು ಚಮಚ ಸೋಂಪು ಬೀಜಗಳನ್ನು ಜಗಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರ ಜೊತೆಗೆ ಒಂದು ಗ್ಲಾಸ್ ಬಿಸಿನೀರಿಗೆ 1 ಚಮಚ ಸೋಂಪನ್ನು ಹಾಕಿ 10 ನಿಮಿಷ ಕುದಿಸಿ, ತಣ್ಣಗಾದ ನಂತರ ಕುಡಿಯಿರಿ. ಇದು ತಕ್ಷಣವೇ ನಿಮಗೆ ರಿಲೀಫ್​ ನೀಡುತ್ತದೆ.

3. ಜೀರಿಗೆ

ಜೀರಿಗೆಯು ಜೀರ್ಣ ರಸಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಅಜೀರ್ಣದಿಂದ ಉಂಟಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಒಂದು ಗ್ಲಾಸ್ ನೀರಿಗೆ 1 ಚಮಚ ಜೀರಿಗೆ ಹಾಕಿ ನೀರಿನಲ್ಲಿ ಕುದಿಸಿ, ತಣ್ಣಗಾದ ನಂತರ ಕುಡಿಯಿರಿ. ಇದು ಹೊಟ್ಟೆಯ ಆಮ್ಲತೆ ಮತ್ತು ಉಬ್ಬಸವನ್ನು ಕಡಿಮೆ ಮಾಡುತ್ತದೆ.

4. ನಿಂಬೆ ಮತ್ತು ಬೆಚ್ಚಗಿನ ನೀರು

ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಹಾಗಾಗಿ ಊಟಕ್ಕೂ ಮೊದಲು ಒಂದು ಗ್ಲಾಸ್ ಬೆಚ್ಚಗಿನ ನೀರಿನಲ್ಲಿ ಅರ್ಧ ನಿಂಬೆ ಹಣ್ಣಿನ ರಸವನ್ನು ಹಿಂಡಿ, ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಿರಿ. ಹೀಗೆ ಕುಡಿಯುವುದರಿಂದ ಹೊಟ್ಟೆಯಲ್ಲಿನ ಆಮ್ಲತೆಯನ್ನು ಸರಿದೂಗಿಸಲು ಸಹಾಯ ಮಾಡುತ್ತದೆ. ಹಾಗೆಯೇ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

5. ಪುದೀನಾ

ಪುದೀನಾದ ಎಲೆಗಳು ಜೀರ್ಣಕಾರಿ ವ್ಯವಸ್ಥೆಯನ್ನು ಸರಿದೂಗಿಸಲು ಸಹಾಯ ಮಾಡುತ್ತದೆ. ಹಾಗೆಯೇ ಉಬ್ಬಸವನ್ನು ಕಡಿಮೆ ಮಾಡುತ್ತವೆ. ಹಾಗಾಗಿ ಪ್ರತಿದಿನ ಊಟಕ್ಕಿಂತ ಮೊದಲು 5 ರಿಂದ 6 ತಾಜಾ ಪುದೀನಾ ಎಲೆಗಳನ್ನು ಜಗಿಯಿರಿ. ಇಲ್ಲವೇ, ಒಂದು ಗ್ಲಾಸ್ ಬಿಸಿನೀರಿಗೆ ಪುದೀನ ಎಲೆಗಳನ್ನು ಹಾಕಿ ಕುದಿಸಿ ತಣ್ಣಗಾದ ನಂತರ ಆ ನೀರನ್ನು ಸೇವಿಸಿರಿ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. (ಏಜೆನ್ಸೀಸ್)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net