

ಬೆಂಗಳೂರು: ಫೈಬರ್ ಅನ್ನು ಜೀರ್ಣವಾಗದೆ ಇರುವ ಸಸ್ಯಗಳಿಂದ ಮಾಡಲಾಗುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ ಅಂಶವು ಹೆಚ್ಚಾಗಿರುತ್ತದೆ. ಮುಖ್ಯವಾಗಿ ಹೆಚ್ಚು ನಾರಿನಂಶವಿರುವ ಆಹಾರವನ್ನು ಸೇವಿಸಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಕರುಳಿನ ಆರೋಗ್ಯಕ್ಕೆ ಬಹಳ ಪ್ರಯೊಜನಕಾರಿ. ಅದರೊಂದಿಗೆ ತೂಕ ಕಡಿಮೆ ಮಾಡಿಕೊಳ್ಳಲು ಕೂಡ ಸಹಾಯ ಮಾಡುತ್ತದೆ. ದಿನಕ್ಕೆ 30ಗ್ರಾಂ ಫೈಬರ್ ಅನ್ನು ದೇಹಕ್ಕೆ ನೀಡಬೇಕೆಂದು ತಜ್ಷರು ಶಿಫಾರಸ್ಸು ಮಾಡುತ್ತಾರೆ. ಕೆಳಗೆ ತಿಳಿಸುವ ಹೆಚ್ಚಾಗಿ ನಾರಿನಂಶವಿರುವ ಈ 5 ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಬಹುದು.