

Liver disease: ಯಕೃತ್ತಿನ ಕಾಯಿಲೆಗಳು ಆರಂಭಿಕ ಹಂತದಲ್ಲಿ ರೋಗ ಲಕ್ಷಣಗಳನ್ನು ತೋರಿಸದಿರಬಹುದು. ಆದರೆ, ಕೈ ಹಾಗೂ ಕಾಲುಗಳಲ್ಲಿ ಕಾಣಿಸಿಕೊಳ್ಳುವ ಕೆಲವು ನಿದಿರ್ಷ್ಟ ಲಕ್ಷಣಗಳು ಯಕೃತ್‌ನ ಕಾರ್ಯಕ್ಷಮತೆಯ ಕುಸಿತವನ್ನು ಸೂಚಿಸುತ್ತದೆ. ಈ ಕೆಳಗಿನ 5 ಲಕ್ಷಣಗಳು ಯಕೃತ್‌ನ ಸಮಸ್ಯೆಯನ್ನು ಸೂಚಿಸುತ್ತವೆ.
ಕೈಯ ಅಂಗೈಯಲ್ಲಿ ಕೆಂಪಾಗಿರುವಿಕೆ ಯಕೃತ್‌ನ ಕಾಯಿಲೆಯ ಒಂದು ಸಂಭವನೀಯ ಲಕ್ಷಣವಾಗಿದೆ. ಇದು ಇತರ ಕಾರಣಗಳಿಂದಲೂ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಕೈಯ ಅಂಗೈಯ ತೋರಾಡಿದ ಬೆರಳು ಮತ್ತು ಕಿರಿಬೆರಳಿನ ಕೆಳಗಿನ ಭಾಗದಲ್ಲಿ ಕೆಂಪು ಅಥವಾ ಗುಲಾಬಿ ಬಣ್ಣದ ಗುರುತುಗಳಾಗಿ ಕಾಣಿಸಿಕೊಳ್ಳುತ್ತದೆ. ಇದು ಯಕೃತ್‌ನ ಕಾರ್ಯಕ್ಷಮತೆ ಕುಸಿತದಿಂದ ರಕ್ತನಾಳಗಳಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆಯಿಂದ ಉಂಟಾಗುತ್ತದೆ. ಈ ಲಕ್ಷಣವು ಸಾಮಾನ್ಯವಾಗಿ ನೋವುರಹಿತವಾಗಿರುತ್ತದೆ ಮತ್ತು ಎರಡೂ ಕೈಗಳಲ್ಲಿ ಕಾಣಬಹುದು.
ಸ್ಪೈಡರ್ ಆಂಜಿಯೋಮಾಸ್ ಯಕೃತ್ತಿನ ಕಾಯಿಲೆಗಳಾದ ಸಿರೋಸಿಸ್, ಹೆಪಟೈಟಿಸ್, ಅಥವಾ ಫ್ಯಾಟಿ ಲಿವರ್‌ನಿಂದ ಕಾಣಿಸಿಕೊಳ್ಳಬಹುದು. ಈಸ್ಟ್ರೊಜೆನ್ ಹಾರ್ಮೋನ್‌ನ ಹೆಚ್ಚಳದಿಂದ ರಕ್ತನಾಳಗಳು ವಿಸ್ತರಿಸಿ, ಚರ್ಮದ ಮೇಲೆ ಕೆಂಪು, ಜೇಡದ ಜಾಲದಂತಹ ಗುರುತುಗಳು ಉಂಟಾಗುತ್ತವೆ. ಇದು ಯಕೃತ್‌ನ ಹಾನಿಯಿಂದಾಗಿ ಹಾರ್ಮೋನ್ ಅಸಮತೋಲನ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯಿಂದ ಇವು ಉಂಟಾಗುತ್ತವೆ ಇವು ಮುಖ, ಕುತ್ತಿಗೆ, ಎದೆಯಲ್ಲಿ ಕಂಡುಬರುತ್ತವೆ.
ಯಕೃತ್ತಿನ ಸಮಸ್ಯೆಗಳಲ್ಲಿ ಬೆರಳು ಮತ್ತು ಕಾಲ್ಬೆರಳುಗಳ ಉಬ್ಬುವಿಕೆಯನ್ನು ಕ್ಲಬ್ಬಿಂಗ್ ಎಂದು ಕರೆಯಲಾಗುತ್ತದೆ. ಇದು ಯಕೃತ್ತಿನ ಕಾಯಿಲೆಗಳಾದ ಸಿರೋಸಿಸ್, ಫ್ಯಾಟಿ ಲಿವರ್, ಅಥವಾ ಹೆಪಟೈಟಿಸ್‌ನಂತಹ ಸ್ಥಿತಿಗಳಿಂದ ಉಂಟಾಗಬಹುದು. ಕ್ಲಬ್ಬಿಂಗ್‌ನಲ್ಲಿ ಬೆರಳು ಅಥವಾ ಕಾಲ್ಬೆರಳುಗಳ ತುದಿಗಳು ದುಂಡಗಾಗಿ, ಉಗುರಿನ ಸುತ್ತಲಿನ ಚರ್ಮ ಉಬ್ಬಿ, ಉಗುರು ದಪ್ಪವಾದಂತೆ ಕಾಣುತ್ತದೆ. ಇದು ಯಕೃತ್ ಕಾಯಿಲೆಯಿಂದ ರಕ್ತದಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾಗುವುದರಿಂದ ಉಂಟಾಗುತ್ತದೆ.
ಯಕೃತ್‌ನ ಕಾರ್ಯಕ್ಷಮತೆ ಕುಸಿತದಿಂದ ಬಿಲಿರುಬಿನ್ ಸಂಗ್ರಹವಾಗಿ, ಕೈಯ ಅಂಗೈ ಮತ್ತು ಕಾಲಿನ ಒಳಭಾಗದಲ್ಲಿ ಹಳದಿ ಬಣ್ಣ ಕಾಣಿಸಿಕೊಳ್ಳುತ್ತದೆ. ಇದು ಗಂಭೀರ ಯಕೃತ್ ಕಾಯಿಲೆಯ ಸೂಚಕವಾಗಿದ್ದು, ತಕ್ಷಣವೇ ವೈದ್ಯರ ಬಳಿ ಹೋಗುವುದು ಉತ್ತಮ.
ಯಕೃತ್ತಿನ ಸಮಸ್ಯೆಗಳಲ್ಲಿ ಕೈ ಮತ್ತು ಕಾಲಿನ ಊತವನ್ನು ಎಡಿಮಾ ಎಂದು ಕರೆಯಲಾಗುತ್ತದೆ. ಇದು ಯಕೃತ್ತಿನ ಕಾಯಿಲೆಗಳಾದ ಸಿರೋಸಿಸ್, ಹೆಪಟೈಟಿಸ್, ಅಥವಾ ಫ್ಯಾಟಿ ಲಿವರ್‌ನಿಂದ ಉಂಟಾಗಬಹುದು. ಯಕೃತ್ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ರಕ್ತದಲ್ಲಿನ ಪ್ರೋಟೀನ್ ಕಡಿಮೆಯಾಗಿ, ದ್ರವ ಸಂಗ್ರಹವಾಗಿ ಊತ ಉಂಟಾಗುತ್ತದೆ.ಇದು ಯಕೃತ್ ಕಾಯಿಲೆಯ ಗಂಭೀರ ಹಂತವನ್ನು ಸೂಚಿಸುತ್ತದೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ