

ಜೆನ್ ಜೀಗಳ ವಂಡರ್ ಲವ್ ಡೇಟಿಂಗ್ ಟ್ರೆಂಡ್, ಏನಿದು?
ಪ್ರಯಾಣದಲ್ಲಿ ಲವ್, ವಾಪಸ್ ಬಂದ ನಂತರ ಬ್ರೇಕಪ್!
ಬಂಬಲ್ ಸೇರಿದಂತೆ ಅನೇಕ ಅಪ್ಲಿಕೇಷನ್ನಲ್ಲಿ ಟ್ರೆಂಡಿಂಗ್ ರಿಲೇಷನ್ ಷಿಪ್
ಮದುವೆಯಾಗುವ ಯುವತಿ ಅಥವಾ ಪ್ರೇಯಸಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದ ಜಮಾನವಿತ್ತು. ಆದರೆ, ಈಗ ಆ ಉಸಾಬರಿ ಇಲ್ಲ. ಸಿಚುವೇಷನ್ ಶಿಪ್, ಟಾಕಿಂಗ್ ಸ್ಟೇಜ್, ಸಾಫ್ಟ್ ಲಾಂಚ್, ಗ್ರೀನ್ ಮತ್ತು ರೆಡ್ ಫ್ಲಾಗ್ ಹಾಗೂ ಘೋಸ್ಟಿಂಗ್ ಇವು ಜೆನ್ ಜೀ ಯುವಕರು ಸಂದರ್ಭಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳುವ ಟ್ರೆಂಡಿ ರಿಲೇಷನ್ ಷಿಪ್ ಆಗಿದೆ. ಈ ಮೂಲಕ ಬೇಕಾದಾಗ, ಬೇಡವಾದವರ ಜೊತೆ ಸಂಬಂಧ ಮುರಿದುಕೊಳ್ಳಬಹುದಾಗಿದೆ. ಈ ಮಧ್ಯೆ ಸದ್ದು ಮಾಡ್ತಿರುವ ಮತ್ತೊಂದು ವಿಚಾರ ಎಂದರೆ ಅದುವೇ ವಂಡರ್ ಲವ್ ರಿಲೇಷನ್ ಷಿಪ್
ಮನೆ ಬಿಟ್ಟು ಪ್ರವಾಸಕ್ಕೆ ಅಥವಾ ಇನ್ಯಾವುದೋ ವಿಚಾರಕ್ಕೆ ತೆರಳಿದಾಗ ಅಲ್ಲಿ ಸಿಗುವ ಯುವತಿ ಅಥವಾ ಯುವಕನೊಂದಿಗಾಗುವ ಪ್ರೀತಿ, ಮದುವೆಯನ್ನು ಸಾಮಾನ್ಯವಾಗಿ ನಾವು ಹಿಂದಿ ಸೇರಿದಂತೆ ಇತರ ಸಿನಿಮಾದಲ್ಲಿ ನೋಡಿಯೇ ಇರುತ್ತೇವೆ. ಜಬ್ ವಿ ಮೆಟ್, ದಿಲ್ ಚಹ್ತಾ ಹೇ, ಯೇ ಜವಾನಿ ಹೈ ದೀವಾನಿ, ನೋಡಿದವರು ಏನಂತಾರೆ, ಗಾಳಿಪಟ ಸಿನಿಮಾಗಳು ಇದಕ್ಕೆ ಉದಾಹರಣೆ. ಆದರೆ, ಈ ಜೆನ್ ಜೀಗಳು ಇದನ್ನೇ ಈಗ ವಿಭಿನ್ನವಾಗಿ ತಮ್ಮ ಉಪಯೋಗಕ್ಕೆ ಬೇಕಾದಂತೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ದೂರದ ಊರು, ಪ್ರವಾಸ, ವರ್ಕ್ ಫ್ರಂ ಹೋಮ್ ಅಂತ ಬೇರೆ ರಾಜ್ಯ, ಬೇರೆ ದೇಶಕ್ಕೆ ಹೋದಾಗ ಒಬ್ಬರೇ ಇರಲು ಬೋರ್ ಆಗುತ್ತೆ ಅಲ್ವಾ? ಜೊತೆಗೆ ಒಬ್ಬರು ಇದ್ದರೆ ಚೆನ್ನಾಗಿರುತ್ತೆ ಅನ್ನೋ ಫೀಲಿಂಗ್ ಬರುತ್ತೆ. ಅದಕ್ಕಾಗಿ ಡೇಟಿಂಗ್ ಆಪ್ ನಲ್ಲಿ Wanderlust ಅಥವಾ Looking for a travel partner ಅಂತ ಹಾಕಿ, ಪ್ರವಾಸ ಇರೋವರೆಗೆ ಮಾತ್ರ ಜೊತೆಯಾಗಿರೋದು, ಪ್ರವಾಸ ಮುಗಿದ ಮೇಲೆ ಯಾವುದೇ ಬದ್ಧತೆ ಇಲ್ಲದೆ ಬ್ರೇಕ್ ಅಪ್ ಮಾಡಿಕೊಳ್ಳುವುದನ್ನೇ ವಂಡರ್ ಲವ್ ಡೇಟಿಂಗ್ / ಸಿಚುಯೇಷನ್ ಶಿಪ್ ಅಂತಾರೆ.
ಒಂದು ಸಮೀಕ್ಷೆ ಪ್ರಕಾರ ಶೇ.52ರಷ್ಟು ಜನರು ಈ ಟ್ರಿಕ್ ಬಳಸುತ್ತಾರಂತೆ.ಹೊಸ ಊರಿನ ಸಂಸ್ಕೃತಿ, ಭಾಷೆ ಕಲಿಯಲು ಲೋಕಲ್ ಜೊತೆಗಾರ ಬೇಕು.ಒಬ್ಬರೇ ಪ್ರಯಾಣ ಮಾಡುವಾಗ ಸುರಕ್ಷತೆ ಮತ್ತು ಕಂಪನಿಗಾಗಿ.ಮನಸ್ಸಿನ ಖುಷಿ-ದುಃಖ ಹಂಚಿಕೊಳ್ಳಲು, ಯಾವುದೇ ಜಡ್ಜ್‌ಮೆಂಟ್ ಇಲ್ಲದ ಸಂಬಂಧ.ಇದರಲ್ಲಿರೋ ಅಪಾಯವೇನು?ಇದು ಕೇಳಲು ಕೂಲ್ ಅನ್ನಿಸಿದರೂ ಅಪಾಯ ಇದೆ.
ಇದನ್ನೂ ಓದಿ: ರಾತ್ರಿ ಹೊತ್ತು ಒಬ್ಬರೇ ಇದ್ದಾಗ ಯಾರೋ ನಿಮ್ಮನ್ನು ನೋಡುತ್ತಿರುವಂತೆ ಅನಿಸುತ್ತದೆಯೇ? ಇದರ ಹಿಂದಿರೋ ಮಿದುಳಿನ ರಹಸ್ಯವೇನು? Brain
ಇತ್ತೀಚೆಗೆ ಬೆಂಗಳೂರಿನಲ್ಲೇ ಒಂದು ಪ್ರಕರಣ ನಡೆದಿತ್ತು - ಕೊಡೈಕೆನಾಲ್ ಗೆ ಹೋಗಿದ್ದ ಯುವತಿಗೆ ಪರಿಚಯವಾದ ಯುವಕ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಿ ಹೋಟೆಲ್ ರೂಮಿನಲ್ಲಿ ಬಂಧಿಸಿದ್ದ. ವಂಡರ್ ಲವ್ ಡೇಟಿಂಗ್ನಲ್ಲಿ "ಪ್ರವಾಸ ಮುಗಿದ ಮೇಲೆ ಸಂಬಂಧ ಮುಗಿಯುತ್ತೆ" ಅನ್ನೋ ಒಪ್ಪಂದ ಇರೋದ್ರಿಂದ, ಮುಂದೆ ಕಾಡುವ ಭಯ ಇಲ್ಲ ಅಂತಾ ಯುವಜನತೆ ಇದಕ್ಕೆ ಓಕೆ ಎನ್ನುತ್ತಿದ್ದಾರೆ.ಆದರೆ ನೆನಪಿರಲಿ: ಅಪರಿಚಿತರ ಜೊತೆ ಪ್ರಯಾಣಿಸುವಾಗ ನಿಮ್ಮ ಲೊಕೇಷನ್ ಅನ್ನು ಕುಟುಂಬದವರಿಗೆ ಶೇರ್ ಮಾಡಿ, ಪಬ್ಲಿಕ್ ಸ್ಥಳಗಳಲ್ಲಿ ಮಾತ್ರ ಭೇಟಿಯಾಗಿ, ನಿಮ್ಮ ದಾಖಲೆಗಳನ್ನು ಸುರಕ್ಷಿತವಾಗಿಡಿ.
ಮನೆ, ಕೆಲಸ, ಜವಾಬ್ದಾರಿಗಳು, ಒತ್ತಡದ ಬದುಕಿನಿಂದ ದೂರ ಉಳಿದು ಮಾನಸಿಕ ನೆಮ್ಮದಿ ಕಾಣಲು ಬಯಸುವವರು ಇಂತಹ ರಿಲೇಷನ್ ಶಿಪ್ಗಳಿಗೆ ಒಗ್ಗಿಕೊಳ್ಳಬಹುದು. ಆದರೆ ಇತ್ತೀಚೆಗೆ ಡೇಟಿಂಗ್ ಅಪ್ಲಿಕೇಷನ್ಗಳಿಂದ ಪರಿಚಯವಾಗುವ ಯುವತಿಯರಿಂದಾಗುವ ಮೋಸದ ಬಗ್ಗೆ ಮಾತ್ರ ಅರಿವಿನಲ್ಲಿಟ್ಟುಕೊಂಡು ಮುಂದಿನ ನಿಮ್ಮ ಡೇಟಿಂಗ್ ಪ್ಲ್ಯಾನ್ಗಳನ್ನು ಮುಂದುವರೆಸಿದರೆ ಒಳಿತು, (ಏಜೆನ್ಸೀಸ್).