ಮಾನಸಿಕ ರೋಗಿಗಳಿಗೆ 20 ಭಾಷೆಗಳಲ್ಲಿ ಟೆಲಿ ಮನಸ್ ಸೇವೆ

mental health
Published on

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಎಲ್ಲಾ ರೀತಿಯ ಮಾನಸಿಕ ಸಮಸ್ಯೆಗಳಿಗೆ ಟೆಲಿ ಮನಸ್ ಸಹಾಯವಾಣಿ ಮೂಲಕ 20 ಭಾಷೆಗಳಲ್ಲಿ ಸೇವೆ ಒದಗಿಸುತ್ತಿದೆ. ಮಾನಸಿಕ ಸಮಸ್ಯೆ ಎದುರಿಸುತ್ತಿರುವವರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಂಸ್ಥೆ ತಿಳಿಸಿದೆ.

ಟೆಲಿ ಮನಸ್ ಯೋಜನೆ ಆರಂಭಕ್ಕೆ ಕರ್ನಾಟಕದ ಇ-ಮನಸ್ ಸೇವೆ ಪ್ರೇರಣೆ. ಕೋವಿಡ್ ಸಂಕಷ್ಟದ ವೇಳ ಟೆಲಿ ಮನಸ್ ಯೋಜನೆ ಪ್ರಾರಂಭಿಸಿ, ಸಾವಿರಾರು ಮಂದಿಗೆ ದೂರವಾಣಿ ಮೂಲಕ ಸಲಹೆ ನೀಡಲಾಯಿತು. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಟೆಲಿ ಮನಸ್ ಸೆಲ್ ಸ್ಥಾಪಿಸಿ, ಅದರ ಮೂಲಕ ಆಪ್ತ ಸಮಾಲೋಚನೆ ಸೇವೆ ನೀಡಲಾಗುವುದು. ಮಾನಸಿಕ ತಜ್ಞರ ಕೊರತೆ ನೀಗಿಸಲು ಈ ಯೋಜನೆ ಸಹಕಾರಿ ಎಂದು ಹೇಳಿದೆ.

ಸಂಸ್ಥೆಯ ಬೆಂಗಳೂರು ಹಾಗೂ ಧಾರವಾಡದ ಕೇಂದ್ರದಲ್ಲಿ ಟೆಲಿ ಮನಸ್ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ದೂರವಾಣಿ ಕರೆಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ತಿಳಿಸಿದೆ.
ಟೆಲಿ ಮನಸ್ ಸಹಾಯವಾಣಿ: 14416

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net