ಹೋಮ್​ ಲೋನ್​ನ ಮೊದಲ ಕಂತು​ ಮಿಸ್ ಮಾಡಿದ್ರೆ ಮುಂದೇನು? ಸಿಬಿಲ್​ ಡ್ರಾಪ್​ನಿಂದ ಹಿಡಿದು ಏನೆಲ್ಲ ಎಫೆಕ್ಟ್​ ಗೊತ್ತಿದ್ಯಾ? EMI ​

ಸಾಂದರ್ಭಿಕ ಚಿತ್ರ (AI)
ಸಾಂದರ್ಭಿಕ ಚಿತ್ರ (AI)
Published on

ಪ್ರಮುಖ ಮುಖ್ಯಾಂಶಗಳು

  • ಇಂದು 10 ಸಾವಿರ ರೂ. ವಸ್ತುವಿಗೂ ಲೋನ್​ ಮೊರೆ ಹೋಗ್ತಾರೆ ನಮ್ಮ ಜನ
  • ಕಂತಿನ ಅರಿವು ಇಲ್ಲದೆಯೇ ಲೋನ್​ಗೆ ಅರ್ಜಿ ಹಾಕುವ ಜನರೇ ಹೆಚ್ಚು
  • ಗೃಹ ಸಾಲದ ಮೊದಲ ಕಂತು ಕಟ್ಟದೆ ಹೋದರೆ ಏನೆಲ್ಲ ಆಗುತ್ತೆ?
ನವದೆಹಲಿ: ಈಗ ಡಿಜಿಟಲ್​ ಯುಗ ಅಂದಮೇಲೆ ಆಫ್​ಲೈನ್​ ಜತೆಗೆ ಆನ್​ಲೈನ್​ ಲೋನ್​ಗಳು ಇಲ್ಲದೇ ಇರಲು ಸಾಧ್ಯವೇ? ಖಂಡಿತ ಇಲ್ಲ. ಇಂದು ನಮ್ಮ ಜನರ ಮನಸ್ಥಿತಿ ಹೇಗಾಗಿದೆ ಎಂದರೆ, 10 ಸಾವಿರ ರೂ. ಮೊಬೈಲ್​ನಿಂದ ಹಿಡಿದು ಬೈಕ್, ಕಾರು, ಗೃಹಪಯೋಗಿ ವಸ್ತುಗಳು ಸೇರಿದಂತೆ ಸಣ್ಣಪುಟ್ಟ ವಸ್ತುಗಳ ಖರೀದಿಗೂ ಸಾಲದ ಮೊರೆ ಹೋಗುತ್ತಾರೆ. ಕಂತು ಕಟ್ಟಲು ನಮ್ಮಿಂದ ಆಗುತ್ತೋ, ಇಲ್ಲವೋ ಅಥವಾ ಎಷ್ಟು ಬಡ್ಡಿ ಬೀಳಲಿದೆ ಎಂಬ ಪೂರ್ವ ಲೆಕ್ಕಾಚಾರವನ್ನೂ ಹಾಕಿಕೊಳ್ಳದೆ ಮೊದಲೇ ಲೋನ್​ಗೆ ಅರ್ಜಿ ಸಲ್ಲಿಸಿರುತ್ತಾರೆ.
ಈಗ ಕನಿಷ್ಠ ಸಿಬಿಲ್ ಅಂಕಿಯಿದ್ದರೆ, ಯಾವ ಬ್ಯಾಂಕ್ ಕೂಡ ಲೋನ್​ ಕೊಡಲು ಮುಂದಾಗುತ್ತೆ. ಆದ್ರೆ, ಸಾಲ ಪಡೆಯುವವರ ಹೆಸರಿನಲ್ಲಿ ಒಂದೇ ಒಂದು ಡಿಮೆರಿಟ್​ ಅಥವಾ ಸಿಬಿಲ್ ಅಂಕಿ ಕುಸಿದಿರಬಾರದು. ಹಾಗೇನಾದರೂ ಆಗಿದ್ದರೆ, ಸೀದಾ ಲೋನ್​ಗಳು ರಿಜೆಕ್ಟ್ ಆಗುತ್ತವೆ. ಇದು ಹೀಗಾದರೆ, ಅದೇ ಗೃಹಸಾಲಗಳ ಮೇಲೂ ಇದೇ ರೀತಿಯ ಲೆಕ್ಕಾಚಾರ ಮತ್ತು ಪರಿಣಾಮಗಳು ಅನ್ವಯ ಆಗುತ್ತವೆ. ಹೌಸಿಂಗ್ ಲೋನ್​ನಲ್ಲಿ ಒಂದು ಕಂತು ಮಿಸ್​ ಆದರೆ ಏನೆಲ್ಲ ಪರಿಣಾಮ? ಎಂಬ ಪ್ರಶ್ನೆ ಕೆಲವರಲ್ಲಿದೆ. ಇದಕ್ಕೆ ಇಲ್ಲಿದೆ ನೋಡಿ ಉತ್ತರ.
ಯಾವುದೇ ವಸ್ತು ಅಥವಾ ಹೋಮ್​ ಲೋನ್​ ಹಾಕಿಸಿಕೊಂಡರೂ ಅದರ ತಿಂಗಳ ಕಂತನ್ನು ಮಿಸ್​ ಮಾಡಲೇಬಾರದು. ಅಕಸ್ಮಾತ್, ಕೊಟ್ಟಿರುವ ಡೆಡ್​ಲೈನ್​ ಮೀರಿ ಏನಾದರೂ ತಪ್ಪಿಸಿದ್ದೇ ಆದಲ್ಲಿ, ನಿಮ್ಮ ಈಗಿರುವ ಸಿಬಿಲ್​ ಕೆಲವೇ ವಾರಗಳಲ್ಲಿ ಕುಸಿದು ಹೋಗುತ್ತೆ. ಅದೇ ಒಬ್ಬ ವ್ಯಕ್ತಿ, ತೆಗೆದುಕೊಂಡ ಗೃಹಸಾಲದ ಕಂತನ್ನು ನಿಗದಿತ ದಿನಾಂಕಕ್ಕೆ ಮಿಸ್​ ಮಾಡಿದರೆ, ತಕ್ಷಣವೇ ಆ ಬ್ಯಾಂಕ್ ಮೊದಲು ಲೋನ್ ಯಾರ ಹೆಸರಲ್ಲಿದೆ ಅವರ ಖಾತೆಯನ್ನು 'ಓವರ್‌ಡ್ಯೂ' ಎಂದು ಗುರುತಿಸುತ್ತದೆ.
ಇದಾದ ಬಳಿಕ ಆಟೋಮೆಟೆಡ್​ ರಿಮೈಂಡರ್​ಗಳು ಸೆಟ್​ ಆಗುತ್ತವೆ. ಇದರೊಟ್ಟಿಗೆ ಆಯಾ ಬ್ಯಾಂಕ್ ಉದ್ಯೋಗಿಗಳಿಂದ ಅಲರ್ಟ್​ ಸಂದೇಶಗಳು ಮತ್ತು ದೂರವಾಣಿ ಕರೆಗಳು ಬರುತ್ತವೆ. ಸಾಮಾನ್ಯವಾಗಿ, ಮಿಸ್​ ಆದ ಪೇಮೆಂಟ್​ ಅನ್ನು ಮೀರಿದ ಅವಧಿ ಅಂದರೆ 30 ದಿನಗಳನ್ನು ದಾಟಿದ ನಂತರ ಕ್ರೆಡಿಟ್ ಬ್ಯೂರೋಗಳಿಗೆ ವರದಿ ಸಲ್ಲಿಸಲಾಗುತ್ತದೆ. ಈ ಕ್ರೆಡಿಟ್​ ರಿಪೋರ್ಟ್​ ಆಗಿದ್ದೇ ತಡ ನಿಮ್ಮ ಪೇಮೆಂಟ್​ಗಳ ಆಧಾರದ ಮೇಲೆ ಸಿಬಿಲ್​ ಸ್ಕೋರ್​ ಬದಲಾಗಲು ಶುರುವಾಗುತ್ತೆ. ಒಂದು ಬಾರಿ ಕುಸಿದರೆ, ಅದನ್ನು ಪುನಃ ಏರಿಸಲು ಒಂದಷ್ಟು ತಿಂಗಳೇ ಬೇಕು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net