

ದೋಷಯುಕ್ತ ದಂತಪಂಕ್ತಿಗಳಿಂದ ನಿರಂತರ ಕಿರಿಕಿರಿ ಉಂಟಾಗಿ ಅದರಿಂದಲೂ ನಾಲಗೆಯ ನೋವು ಉಂಟಾಗಬಹುದು.
ಸಾಮಾನ್ಯವಾಗಿ ಹುಣ್ಣಿನಿಂದಾಗಿ ನಾಲಗೆಯಲ್ಲಿ ನೋವು ಉಂಟಾಗಿದ್ದರೆ ಯಾವುದೇ ಚಿಕಿತ್ಸೆಯಿಲ್ಲದೆ ಏಳರಿಂದ 14 ದಿನಗಳಲ್ಲಿ ಗುಣವಾಗುತ್ತದೆ. ಸರಿಯಾದ ಕಾರಣವನ್ನು ಗುರುತಿಸಿ ಚಿಕಿತ್ಸೆಯನ್ನು ನೀಡಿದಾಗ ನಾಲಗೆಯ ಉರಿಯೂತ ಗುಣವಾಗುತ್ತದೆ.
ಉರಿಯೂತವನ್ನು ಕಡಿಮೆ ಮಾಡುವುದು ಚಿಕಿತ್ಸೆಯ ಪ್ರಾಥಮಿಕ ಉದ್ದೇಶವಾಗಿದ್ದು, ದಿನಕ್ಕೆ ಎರಡು ಬಾರಿ ನಾಲಗೆ ಮತ್ತು ಹಲ್ಲುಗನ್ನು ಶುಚಿಗೊಳಿಸುವುದು ಅಗತ್ಯವಾಗಿರುತ್ತದೆ. ಸೋಂಕಿನಿಂದ ಉಂಟಾಗಿದ್ದಲ್ಲಿ ಶಿಲೀಂಧ್ರನಾಶಕ, ವೈರಸ್ ನಿರೋಧಕ ಔಷಧಗಳು ಸಹಾಯ ಮಾಡುತ್ತವೆ ಮತ್ತು ಮೌಥ್ವಾಷ್ಗಳ ಬಳಕೆಯೂ ಉತ್ತಮ ಪರಿಹಾರವನ್ನು ನೀಡಬಲ್ಲದು.
ಅತಿಯಾದ ಬಿಸಿ ಹಾಗೂ ಮಸಾಲೆಯುಕ್ತ ಆಹಾರಗಳಿಂದ ದೂರವಿರುವುದು ಉತ್ತಮ. ಅಪೌಷ್ಟಿಕತೆ ಅಥವಾ ಅನ್ನಾಂಗದ ಕೊರತೆಯಿಂದಾಗಿ ನಾಲಗೆಯ ಉರಿಯೂತ ಉಂಟಾದಲ್ಲಿ ಆಹಾರಪದ್ಧತಿಯಲ್ಲಿ ಬದಲಾವಣೆಯನ್ನು ಸೂಚಿಸಿ ಸೂಕ್ತ ಪೂರಕಗಳನ್ನು ನೀಡಲಾಗುತ್ತದೆ.