

New virus: ಪ್ರಪಂಚದಲ್ಲಿ ಆವಿಸ್ಕಾರಗಳು ನಡೆಯುವುದು ಸಹಜ. ಆದರೆ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಸಹಾಯದಿಂದ ಹೊಸ ವೈರಸ್ನ ತಳಿ ರಚಿಸಲಾಗಿದೆ. ಅದರ ಆಧಾರದ ಮೇಲೆ ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ನಿಜವಾದ ವೈರಸ್ ಅನ್ನೇ ಸೃಷ್ಟಿಸಿದ್ದಾರೆ. ಈ ವೈರಸ್ ಹಳೆಯ ವೈರಸ್ಗಳಿಗಿಂತ ಬ್ಯಾಕ್ಟೀರಿಯಾವನ್ನು ನಾಶಪಡಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಅಮೆರಿಕಾದ ಸ್ಟಾನ್ಟೋರ್ಡ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಸಾಧನೆಯನ್ನು ಮಾಡಿದ್ದು, ಇದು ಭಾರತದಲ್ಲಿ ಆ್ಯಂಟಿಬಯಾಟಿಕ್ ಪ್ರತಿರೋಧದಿಂದ ಸಾವಿಗೀಡಾಗುವ 6 ಲಕ್ಷಕ್ಕೂ ಹೆಚ್ಚು ಜನರಿಗೆ ಇದು ಭವಿಷ್ಯದ ಆಶಾಕಿರಣವಾಗಿದೆ ಎಂದು ಹೇಳಲಾಗುತ್ತಿದೆ.
ನಮ್ಮ ದೇಹದಲ್ಲಿ ಕೆಲವೊಮ್ಮೆ E. coli ಎನ್ನುವ ಬ್ಯಾಕ್ಟೀರಿಯಾ ಸೋಂಕು ತಗಲುತ್ತದೆ. ಇದಕ್ಕೆ ಸಾಮಾನ್ಯವಾಗಿ ವೈದ್ಯರು ನೀಡುವ ಆ್ಯಂಟಿಬಯಾಟಿಕ್ ಔಷಧಿಗಳು ಅದನ್ನು ನಾಶಮಾಡುತ್ತದೆ. ಆದರೆ, ಇಂದು ಅನೇಕ ಬ್ಯಾಕ್ಟೀರಿಯಾಗಳು ಔಷಧಿಗಳಿಗೂ ಪ್ರತಿರೋಧವನ್ನು ತೋರಿಸುತ್ತದೆ ಅಂದರೆ, ಯಾವುದೇ ಆ್ಯಂಟಿಬಯಾಟಿಕ್ಗೆ ಅವುಗಳು ಸಾಯುವುದಿಲ್ಲ.
ಇದೇ ಕಾರಣಕ್ಕೆ ಭಾರತ ಒಂದರಲ್ಲೇ ವರ್ಷಕ್ಕೆ ಸರಾಸರಿ 6 ಲಕ್ಷಕ್ಕೂ ಹೆಚ್ಚು ಜನರು ಮೃತಪಟಿದ್ದಾರೆ. ಇಂತಹ ದುರಂತವನ್ನು ತಡೆಯಲು ಹೊಸ ವೈರಸ್ ಸಹಕಾರಿಯಾಗಲಿದೆ. ಈ ಮೂಲಕ ಎಐ ಸಹಾಯದಿಂದ ಜೀವಕಣಗಳನ್ನು ರಚಿಸುವುದು ಮತ್ತು ಪರಿಣಾಮಕಾರಿ ಔಷಧಿಗಳನ್ನು ಕಡಿಮೆ ಸಮಯದಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂದು ತಜ್ಱರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಪ್ರಯೋಗದಲ್ಲಿ ಚಾಟ್ ಜಿಪಿಟಿಗೆ ಹೋಲುವಂತಹ ಇವೊ (Evo) ಅನ್ನು ಜೀನೋಮಿಕ್ ಎಐ ಭಾಷಾ ಮಾದರಿಯನ್ನು ಬಳಸಲಾಗಿದೆ. ಬ್ಯಾಕ್ಟೀರಿಯೋಫೇಜ್ ಫೈ ಎಕ್ಸ್-174 (PhX-174) ಎಂಬ ವೈರಸ್ ಅನ್ನು ಉಪಯೋಗಿಸಲಾಗಿದೆ. ಇದನ್ನು E. coli ಬ್ಯಾಕ್ಟೀರಿಯಾವನ್ನು ನಾಶಪಡಿಸಲು ಬಳಸಲಾಗುತ್ತದೆ. ಇದು ಅತಿ ಸಂಕೀರ್ಣ ರಚನೆ ಹೊಂದಿರುವ ವೈರಸ್ ಆಗಿದೆ. ಇಂತಹ ಸುಮಾರು ಎರಡು ಮಿಲಿಯನ್ ಫೈ ಎಕ್ಸ್-174 ವೈರಸ್ಗಳ ತಳಿ ರಚನೆಗಳ ಮಾಹಿತಿಯನ್ನು ಇವೊ (Evo)ಗೆ ನೀಡಲಾಯಿತು. ಅದಕ್ಕೆ ಸ್ಪಷ್ಟವಾದ ಸೂಚನೆಗಳನ್ನು ನೀಡಲಾಗಿತ್ತು.
ಅದರಂತೆಯೇ ಇವೊ ಅದರ ಅನುಗುಣವಾಗಿ E. coli ಬ್ಯಾಕ್ಟೀರಿಯಾವನ್ನು ನಾಶಮಾಡಬಲ್ಲ ಹೊಸ ವೈರಸ್ ಡಿಜಿಟಲ್ ಬ್ಲೂಪ್ರಿಂಟ್ ಅನ್ನು ಸೃಷ್ಟಿ ಮಾಡಿತು. ಈ ವೈರಸ್ ಈ ತಂತ್ರಜ್ಞಾನವನ್ನು ಪರಿಸರದಲ್ಲಿಯೂ ಹಾಗೂ ಕೃಷಿಯಲ್ಲಿಯೂ ಬ್ಯಾಕ್ಟೀರಿಯಾ ನಿಯಂತ್ರಕ್ಕೆ ಉಪಯೋಗಿಸಬಹುದು ಎಂದು ತಜ್ಱರು ಹೇಳಿದ್ದಾರೆ. (ಏಜೆನ್ಸೀಸ್)