ಹೃದಯದ ಚಿಕಿತ್ಸೆಗೂ, ಕಿವುಡುತನಕ್ಕೂ ಸಂಬಂಧವಿದೆಯಾ? ಮಾನಸಿಕ ಹಿಂಸೆಯಾಗಿದೆ... ಪರಿಹಾರ ಹೇಳಿ...

aptha
Published on
ನನ್ನ ವಯಸ್ಸು 71. ಹೃದಯ ಚಿಕಿತ್ಸೆ ಪಡೆದು ಅಲೋಪಥಿ ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ಇತ್ತೀಚೆಗೆ ಒಂದು ವರ್ಷದಿಂದ ಮುಂಜಾನೆ ಏಳುವ ಸಮಯದಲ್ಲಿ ತಲೆ ತಿರುಗಿದಂತೆ, ಶರೀರ ಜೋಲು ಬಂದಂತೆ ಆಗಿ ಕಳವಳಕ್ಕೀಡಾಗಿದ್ದೇನೆ. ನರರೋಗತಜ್ಞರಲ್ಲಿ, ಇಎನ್‍ಟಿ ವೈದ್ಯರಲ್ಲಿ ತೋರಿಸಿದ್ದೇನೆ. ಎಡ ಕಿವಿ ಸ್ವಲ್ಪ ಮಂದವಾಗಿ ಕೇಳುತ್ತಿದೆ ಎಂದರು. ಮತ್ತೆ ಎಡಕಿವಿಯಲ್ಲಿ ಶಬ್ದ ಆರಂಭವಾಗಿದೆ. ಆಯುರ್ವೇದ ವೈದ್ಯರಲ್ಲಿ ತೋರಿಸಿದರೆ ಎಡಕಿವಿಯ ಒಳಭಾಗದ ಕಿವಿ ಸವಕಳಿ ಆಗಿದೆಎಂದು ಮಾತ್ರೆಗಳು ನೀಡಿದರು. ಆದರೂ ಕಿವಿ ಮಂದವಾಗಿ ಕೇಳಿಸುತ್ತಿದೆ.

ಅಲ್ಲದೆ ಎರಡೂ ಕಣ್ಣುಗಳ ಅಂಚಿನಲ್ಲಿ ನೀರಿನ ಪಸೆ ಉಂಟಾಗಿ ದೂರದ ಅಕ್ಷರ ಓದಲು ತೊಂದರೆಯಾಗಿದೆ . ಆದರೆ ಕಣ್ಣುಗಳಲ್ಲಿ ಪೊರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ನೀರಿನ ಪಸೆಯಿಂದ ಕಣ್ಣುಗಳಲ್ಲಿ ಬಿಳಿ ಪದಾರ್ಥ ಮತ್ತು ಜಿಗುಟು ದ್ರವ ಬರುತ್ತದೆ.

ಡ್ರಾಪ್ ಹಾಕಿಸಿದ್ದೇನೆ. ಆದರೂ ಯಾವುದೂ ಕಡಿಮೆಯಾಗುತ್ತಿಲ್ಲ. ಈ ಮೇಲಿನ ಎರಡೂ ಸಮಸ್ಯೆಗಳಿಗೆ ಸೂಕ್ತವಾಗಿ ಉತ್ತರ ನೀಡಿ.

ಉತ್ತರ: ನಿಮ್ಮ ತಲೆತಿರುಗುವ ಸಮಸ್ಯೆ ಬಹುಶಃ ವರ್ಟಿಗೋ ತೊಂದರೆಯಿಂದ ಇರಬಹುದು. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಗುಡೂಚಿ ಸತ್ವವನ್ನು ಒಂದು ಚಿಟಿಕೆಯಷ್ಟನ್ನು ಜೇನಿನೊಂದಿಗೆ ಬೆರೆಸಿ ಸೇವಿಸಿ. ಕಣ್ಣಿನ ಸಮಸ್ಯೆಗೆ ಒಮ್ಮೆ ನೇತ್ರತರ್ಪಣ ಚಿಕಿತ್ಸೆ ತೆಗೆದುಕೊಳ್ಳಿ. ಕಿವಿಯ ಒಳಭಾಗ ಸವಕಳಿಯಾದುದನ್ನು ಸರಿಪಡಿಸಲು ಸಾಧ್ಯವಿಲ್ಲ. ಆಡಿಯೋಗ್ರಾಮ್ ಮಾಡಿಸಿ.

ಹಿಯರಿಂಗ್ ಏಡ್ ಧರಿಸುವುದು ಉತ್ತಮ. ಈ ಎಲ್ಲ ಸಮಸ್ಯೆಗಳು ವಯಸ್ಸಾಗುವಿಕೆಯಿಂದ ಕಂಡುಬರುವಂಥವುಗಳು. ಇವುಗಳು ಹೆಚ್ಚಾಗದಂತೆ ತಡೆಯಬಹುದೇ ಹೊರತು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ.

ಆರೋಗ್ಯಕ್ಕೆ ಸಂಬಂಧಿಸಿದ ಇತರ ಲೇಖನಗಳಿಗೆ ಇಲ್ಲಿ ಕ್ಲಿಕ್​ ಮಾಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net