ಸೊಂಟ ನೋವಿನಿಂದ ಬಳಲಿ ಬೆಂಡಾಗಿದ್ದೇನೆ- ಅಯುರ್ವೇದದಲ್ಲಿ ಪರಿಹಾರ ತಿಳಿಸಿ...

aptha-back pain
Published on

ಪ್ರಶ್ನೆ: ನಾನು 62 ವರ್ಷದ ಗೃಹಿಣಿ. ನನಗೆ 7-8 ವರ್ಷದಿಂದ ಸೊಂಟನೋವು ಇದೆ. ಆಗ ಡಾಕ್ಟರ್ ಗಳಿಗೊಮ್ಮೆ ವೆಬೆಲೋನ್ 150 ಮಾತ್ರೆಯನ್ನು ತೆಗೆದುಕೊಳ್ಳಲು ಹೇಳಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಮಾತ್ರೆಯನ್ನೂ ಕೊಟ್ಟಿದ್ದರು.

ಎಕ್ಸ್​ರೇ ತೆಗೆಸಿದಾಗ ಬೆನ್ನು ಮೂಳೆಯ ಕೆಳಭಾಗದಲ್ಲಿ ಸೊಂಟದ ಹತ್ತಿರ ಮೂಳೆಯು ಒಂದರ ಮೇಲೆ ಒಂದರಂತೆ ಕುಳಿತಿದೆ ಎಂದು ಹೇಳಿದ್ದಾರೆ. ಇದಕ್ಕೆ ಬೊನ್ವಿಸ್ ಫೋರ್ಟ್, ಲಾ-ಪಿ, ಪೇನ್‍ಕಿಲ್ಲರ್ ಮಾತ್ರೆಗಳನ್ನು ಟ್ಟಿದ್ದಾರೆ. ಒಮ್ಮೆ ನೋವು ಕಡಿಮೆಯಾದರೂ ಯಾವಾಗಲೂ ಇರುತ್ತದೆ. ಸೊಂಟದಿಂದ ಎರಡೂ ಕಡೆ ಚಿಪ್ಪಿನ ತನಕ ನೋವು ಇದೆ.

ಪಂಚಕರ್ಮ ಚಿಕಿತ್ಸೆ ಮಾಡಿಸಿಕೊಳ್ಳಲು ದೇಹದಲ್ಲಿ ಶಕ್ತಿ ಇಲ್ಲ. ಸೊಂಟದ ನೋವು ಕಡಿಮೆಯಾಗಿ, ಮೂಳೆಗಳು ಮತ್ತು ನರಗಳಿಗೆ ಶಕ್ತಿ ಬರಲು ಏನು ಮಾಡಲಿ? ಔಷಧ ತಿಳಿಸಿ. ನನಗೆ ಬಿಪಿ, ಡಯಾಬಿಟೀಸ್ ಇದ್ದು, ಅದು ಕಂಟ್ರೋಲ್‍ನಲ್ಲಿದೆ.

ಉತ್ತರ: ನೀವು ಹತ್ತಿರದ ಆಯುರ್ವೇದ ಆಸ್ಪತ್ರೆಗೆ ಭೇಟಿ ಕೊಟ್ಟಲ್ಲಿ ನಿಮ್ಮ ದೇಹದ ಬಲ, ಪ್ರಕೃತಿ ಪರೀಕ್ಷಿಸಿ, ವೈದ್ಯಕೀಯ ವರದಿಗಳನ್ನು ಗಮನಿಸಿ ಚಿಕಿತ್ಸೆ ನೀಡುತ್ತಾರೆ. ಪಂಚಕರ್ಮದಲ್ಲಿ ನಿಮಗೆ ಹೊಂದುವಂಥ, ಹೆಚ್ಚು ಶ್ರಮವಾಗದ ಕಟಿಬಸ್ತಿ ಚಿಕಿತ್ಸೆ ಪಡೆಯಬಹುದು.

ಇದರಿಂದ ನೋವು ತಗ್ಗುವುದಲ್ಲದೆ ದೇಹದ ನಿಃಶಕ್ತಿಯೂ ಕಡಿಮೆಯಾಗುತ್ತದೆ. ಸದ್ಯ, ಬಲಾರಿಷ್ಟವನ್ನು ದಿನಕ್ಕೆರಡು ಬಾರಿ ಮೂರು ಚಮಚದಷ್ಟು ನೀರು ಬೆರೆಸಿ ಊಟದ ನಂತರ ಸೇವಿಸಿ. ಪ್ರತಿದಿನ ರಾತ್ರಿ 7-8 ಬಾದಾಮಿಯನ್ನು ನೆನೆಸಿಟ್ಟು ಬೆಳಗ್ಗೆ ತಿನ್ನಿ.

ಆಯುರ್ವೇದಕ್ಕೆ ಸಂಬಂಧಿಸಿದಂತೆ ಡಾ.ವಸುಂಧರಾ ಭೂಪತಿ ಅವರು ಬರೆದಿರುವ ವಿವಿಧ ರೀತಿಯ ಪರಿಹಾರಕ್ಕಾಗಿ https://www.vijayavani.net/ ಕ್ಲಿಕ್ಕಿಸಿ ಆರೋಗ್ಯ ವಿಭಾಗ ನೋಡಿ…

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net